ಮದುವೆಯಾದ ಮೂರು ತಿಂಗಳ ಬಳಿಕ ಪುರುಷತ್ವ ವಿಚಾರವೆತ್ತಿ ಯುವಕನೊಬಬ್ಬನನ್ನು ಆತನ ಸ್ನೇಹಿತರು ಹಾಸ್ಯ ಮಾಡಿದ್ದಾರೆ. ಇದರಿಂದ ಬೇಸತ್ತು ನವ ವರ ವಯಾಗ್ರ ಸೇವಿಸಿದ್ದು, ಇದರಿಂದ ಆತನ ಜೀವಕ್ಕೇ ಕುತ್ತು ಬಂದಿದೆ. 

ಲಕ್ನೋ(ಜೂ.07): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದ ಪ್ರಕರಣವೊಂದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ವಾಸ್ತವವಾಗಿ ಒಬ್ಬ ವ್ಯಕ್ತಿ ಹೆಚ್ಚು ಲೈಂಗಿಕ ಸುಖ ಅನುಭವಿಸಲು ಸ್ವಂತ ಜೀವವನ್ನೇ ಅಪಾಯಕ್ಕೆ ತಳ್ಳಿದ್ದಾನೆ. ಹೌದು 28ರ ಹರೆಯದ ಯುವಕನೊಬ್ಬ ಮದುವೆಯಾದ ಕೆಲವೇ ದಿನಗಳಲ್ಲಿ ವಯಾಗ್ರವನ್ನು ಅತಿಯಾಗಿ ಸೇವಿಸಿದ್ದು, ಇದರ ಪರಿಣಾಮ ಎಂಬಂತೆ ಆತನನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ತಿಂಗಳ ಹಿಂದೆ ನಡೆದ ಮದುವೆಯ ನಂತರ, ಯುವಕನ ಸ್ನೇಹಿತರು ಅವನ ಪುರುಷತ್ವಕ್ಕೆ ಸವಾಲು ಹಾಕಿದ್ದರು. ಇದರಿಂದ ಆತ ಬೇಸತ್ತಾಗ ಸ್ನೇಹಿತರೇ ಆತನಿಗೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಔಷಧಿ (ವಯಾಗ್ರ) ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಇಲ್ಲಿಂದಲೇ ಈ ಇಡೀ ಪ್ರಕರಣ ಹುಟ್ಟಿಕೊಂಡಿದೆ.

ಸ್ನೇಹಿತರ ಸಲಹೆಯ ಮೇರೆಗೆ ಯುವಕ 25-30 ಮಿ. ಗ್ರಾಂ ವಯಾಗ್ರವನ್ನು ಸೇವಿಸಲು ಪ್ರಾರಂಭಿಸಿದ್ದಾರೆ. ಹೀಗಿದ್ದರೂ ಆತನಿಗೆ ತೃಪ್ತಿ ಸಿಗುತ್ತಿಲ್ಲ ಎಂಬ ಭಾವನೆ ಹುಟ್ಟಿಕೊಂಡಿದೆ. ಹೀಗಿರುವಾಗ ಸ್ನೇಹಿತರು ಮತ್ತೆ ಡೋಸೇಜ್ ಅನ್ನು ಹೆಚ್ಚಿಸಲು ಸಲಹೆ ನೀಡಿದರು. ಗೆಳೆಯರ ಮಾತಿನಂತೆ 200 ಮಿಗ್ರಾಂ ವಯಾಗ್ರವನ್ನು ಸೇವಿಸಿದ್ದಾನೆ. ಆಧರೆ ಅಷ್ಟರಲ್ಲಾಗಲೇ ಆ ಡೋಸೇಜ್ ಸಹಿಸಿಕೊಳ್ಳಲಾಗದೆ ಆತನ ಸ್ಥಿತಿ ಹದಗೆಟ್ಟಿದೆ.

ನನ್ನ ತಮ್ಮನಿಗೂ ನನ್ನ ಗೆಳತಿಗೂ ಲೈಂಗಿಕ ಸಂಬಂಧ, ಸಹಿಸಿಕೊಳ್ಳೋಕೆ ಆಗ್ತಿಲ್ಲ ಅಂತಿದ್ದಾಳೆ ಅಕ್ಕ

ವಯಾಗ್ರದಿಂದ ಯುವಕನ ಗುಪ್ತಾಂಗದಲ್ಲಿ ಭಾರೀ ಒತ್ತಡ ಉಂಟಾಗಿದೆ. ಅಲ್ಲದೇ ಇದು 20 ದಿನ ಕಳೆದರೂ ಕೊನೆಹೊಂಡಿರಲಿಲ್ಲ. ಅತ್ತ ಯುವಕನ ವರ್ತನೆಯಿಂದ ಬೇಸತ್ತ ವಧು ತನ್ನ ತಾಯಿಯ ಮನೆಗೆ ಹೋಗಿದ್ದಾಳೆ. ಹೀಗಿರುವಾಗ ಮನೆಗೆ ಬಂದ ಮಗಳನ್ನು ಅದೇಗೋ ಸಮಾಧಾನಪಡಿಸಿದ ಕುಟುಂಬ ಸದಸ್ಯರು ಆಕೆಯನ್ನು ಮತ್ತೆ ಗಂಡನ ಮನೆಗೆ ಕಳುಹಿಸಿದ್ದಾರೆ, ಆದರೆ ವಿಚಾರ ಅಲ್ಲೇ ಕೊನೆಗೊಳ್ಳಲಿಲ್ಲ. ಗಂಡನನ್ನು ಆಸ್ಪತ್ರೆಗೆ ದಾಖಲಿಸಿದ ದಾಖಲಿಸಿದ ಒಪತ್ನಿ ಅಲ್ಲಿಂದ ತೆರಳಿದ್ದಾಳೆ.

ಯುವಕನಿಗೆ ಹೊಸ ಸಮಸ್ಯೆ

ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ಯುವಕನ ಆರೋಗ್ಯ ಸ್ಥಿತಿಯನ್ನು ಸರಿಗೊಳಿಸಿದರಾದರೂ, ಆತನನ್ನು ಜೀವನಪೂರ್ತಿ ಸಮಸ್ಯೆಯೊಂದು ಕಾಡಲಿದೆ ಎಂಬುವುದನ್ನು ಸ್ಪಷ್ಟಪಡಿಸಿದರು. ಹೌದು ಆತ ತಂದೆಯಾಗಬಹುದು, ಮಕ್ಕಳು ಮಾಡಿಕೊಳ್ಳಬಹುದು ಆದರೆ ಆತನ ಗುಪ್ತಾಂಗದಲ್ಲಿನ ಒತ್ತಡಕಡಿಮೆಯಾಗುವುದಿಲ್ಲ, ಅದು ಶಾಶ್ವತವಾಗಿ ಆತನನ್ನು ಕಾಡಲಿದೆ ಎಂದಿದ್ದಾರೆ. ಹೀಗಾಗಿ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ನ್ಯಾಪಿ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಲು ಸಲಹೆ ನೀಡಿದ್ದಾರೆ.

ಆದರೆ ಸಂಗಮ್ ನಗರದ ಪ್ರಯಾಗ್‌ರಾಜ್‌ನ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಮೋತಿಲಾಲ್ ನೆಹರು ವೈದ್ಯಕೀಯ ಕಾಲೇಜಿನ ವೈದ್ಯರು ಯುವಕನ ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಆತನಿಗೆ ಅಪರೂಪದ ಕೃತಕ ಶಿಶ್ನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿದ್ದಾರೆ.

ಸೆಕ್ಸ್ ಲೈಫ್ ಸೂಪರ್ ಮಾಡೋ ವಯಾಗ್ರ ಕಣ್ಣು ಕುರುಡಾಗಿಸಬಹುದು !

ವೈದ್ಯಕೀಯ ಕಾಲೇಜಿನ ವೈದ್ಯರ ಪ್ರಕಾರ, ಶೀಘ್ರದಲ್ಲೇ ಯುವಕ ಮತ್ತೆ ಸಾಮಾನ್ಯ ಜೀವನವನ್ನು ಪ್ರಾರಂಭಿಸುತ್ತಾನೆ ಮತ್ತು ಅವನ ಹೆಂಡತಿಯೊಂದಿಗೆ ಸಂಬಂಧವನ್ನು ಹೊಂದಲು ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ. 

ತಂಡದ ಯಶಸ್ಸಿಗೆ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದಿಲೀಪ್ ಚೌರಾಸಿಯಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳ ಹಿಂದೆ ಯುವಕ ತಮ್ಮನ್ನು ಸಂಪರ್ಕಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಆತನ ವಿವಾಹವಾಗಿತ್ತು ಎಂದಿದ್ದಾರೆ. ಅಲ್ಲದೇ ರೋಗಿಯು ವಯಾಗ್ರವನ್ನು ಮೊದಲೇ ತೆಗೆದುಕೊಳ್ಳುತ್ತಿದ್ದ, ಆದರೆ ಮದುವೆಯ ನಂತರ ಡೋಸೇಜ್ ಅನ್ನು ಹೆಚ್ಚಿಸಿದ್ದ. ಇದರ ಪರಿಣಾಮವಾಗಿ ಅವನ ಲೈಂಗಿಕ ಸಾಮರ್ಥ್ಯ ಹೋಗಿತ್ತು ಎಂದಿದ್ದಾರೆ.

ಇಂತಹ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಿ

ವೈದ್ಯರನ್ನು ಭೇಟಿಯಾದ ನಂತರವೇ ವಯಾಗ್ರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆಪರೇಷನ್ ವೇಳೆ ಯುವಕನ ಖಾಸಗಿ ಭಾಗಕ್ಕೆ ಕೃತಕ ಶಿಶ್ನ ಅಂಗವನ್ನು ಅಳವಡಿಸಲಾಗಿದ್ದು, ಇದನ್ನು ದೆಹಲಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಅದರ ಬೆಲೆ ಬರೋಬ್ಬರಿ 35 ಸಾವಿರ ರೂಪಾಯಿ ಎಂದು ವೈದ್ಯ ದಿಲೀಪ್ ಚೌರಾಸಿಯಾ ತಿಳಿಸಿದ್ದಾರೆ. ಸದ್ಯ ರೋಗಿಯ ಸ್ಥಿತಿ ಉತ್ತಮವಾಗಿದ್ದು, ಮುಂದಿನ ಒಂದು ವಾರದ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು..