ಮತ್ತೆ ಹದಗೆಟ್ಟ ಲತಾ ಮಂಗೇಶ್ಕರ್ ಆರೋಗ್ಯ  ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೃತಕ ಉಸಿರಾಟ ಯಂತ್ರ ಅಳವಡಿಕೆ

ಮುಂಬೈ(ಫೆ.5): ಭಾರತದ ಗಾನಕೋಗಿಲೆ ಎಂದೇ ಕರೆಯಲ್ಪಡುವ ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಕೃತಕ ಉಸಿರಾಟ ಯಂತ್ರವನ್ನು ಅಳವಡಿಸಲಾಗಿದೆ. ವೈದ್ಯರು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವೈದ್ಯ ಡಾ ಪ್ರತೀತ್ ಸಮ್ದಾನಿ (Dr Pratit Samdani) ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದೆ, ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ವೆಂಟಿಲೇಟರ್‌ನಲ್ಲಿಡಲಾಗಿದ್ದು, ಇನ್ನೂ ಐಸಿಯುನಲ್ಲಿಯೇ ಇದ್ದಾರೆ. ವೈದ್ಯರು ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಲತಾ ಚಿಕಿತ್ಸೆ ಪಡೆಯುತ್ತಿರುವ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

Scroll to load tweet…

ಕೋವಿಡ್ ಪಾಸಿಟಿವ್‌ ಆದ ಬಳಿಕ ಅವರಿಗೆ ನ್ಯುಮೋನಿಯಾ ಬಂದಿದ್ದು, ಅವರನ್ನು ಜನವರಿ ಆರಂಭದಲ್ಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲತಾ ಮಂಗೇಶ್ಕರ್ ಅವರಿಗೆ ರೋಗದ ಸೌಮ್ಯ ಲಕ್ಷಣಗಳಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಅವರು ಐಸಿಯುನಲ್ಲಿಯೇ ಇದ್ದಾಗ, ಜನವರಿ 28 ರ ಸುಮಾರಿಗೆ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ವೆಂಟಿಲೇಟರ್‌ ತೆಗೆದು ಹಾಕಲಾಗಿತ್ತು. ಆದರೆ ಈಗ ಮತ್ತೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೃತಕ ಉಸಿರಾಟ ಯಂತ್ರವನ್ನು ಅಳವಡಿಸಲಾಗಿದೆ. 

Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್‌ ಮಾಡಿದ್ದರು ಈ ವ್ಯಕ್ತಿ

ಲತಾ ಮಂಗೇಶ್ಕರ್ (Lata Mangeshkar) ಆಸ್ಪತ್ರೆಗೆ ದಾಖಲಾದ ತಕ್ಷಣ, ಅವರ ಸಹೋದರಿ ಆಶಾ ಭೋಂಸ್ಲೆ ( Asha Bhosle) ಅವರನ್ನು ಕೆಲವು ಮಾಧ್ಯಮಗಳು ಭೇಟಿಯಾಗಲು ಯತ್ನಿಸಿವೆ. ಈ ವೇಳೆ ಅವರು ಕೂಡ ಪ್ರತಿದಿನ ಆಸ್ಪತ್ರೆಯಿಂದ ಹೊರಡಿಸುವ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗೆಗಿನ ಹೆಲ್ತ್‌ ಬುಲೆಟಿನ್‌ಗಳನ್ನು ತಾವು ನೋಡುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಲತಾ ಅವರನ್ನು ನೋಡಲು ಯಾರಿಗೂ ಅವಕಾಶ ನೀಡುತ್ತಿಲ್ಲ. ನಾನು ಒಮ್ಮೆ ಹೋಗಿದ್ದೆ ಆದರೆ ಕಾಂಪೌಂಡ್ ಒಳಗೆ ಬಿಡಲಿಲ್ಲ.ಕೋವಿಡ್‌ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತೀವ್ರ ನಿರ್ಬಂಧಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ ಎಂದು ಆಶಾ ಮಾಧ್ಯಮಗಳಿಗೆ ಹೇಳಿದ್ದಾರೆ. 

Lata Mangeshkar Health Updates: ICUನಲ್ಲಿದ್ದಾರೆ ಖ್ಯಾತ ಗಾಯಕಿ, ಪ್ರಾರ್ಥಿಸಿ ಎಂದ ವೈದ್ಯರು

ಇನ್ನು ಲತಾ ಮಂಗೇಶ್ಕರ್‌ ಕುಟುಂಬದ ಮತ್ತೊಬ್ಬ ಸದಸ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲತಾ ದೀದಿ ಅವರು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರು ಗಾಯಕಿಯಾಗಿರುವುದರಿಂದ, ಅವರು ಹೇಗೆ ದೊಡ್ಡ ಶ್ವಾಸಕೋಶದ ಸಾಮರ್ಥ್ಯವನ್ನು ಹೊಂದಿದ್ದಾರೆಂದು ನಿಮಗೆ ತಿಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಹೋರಾಟಗಾರ್ತಿ ಆದರೆ COVID ಪ್ರೋಟೋಕಾಲ್‌ಗಳನ್ನು ( COVID protocols) ಅನುಸರಿಸಬೇಕಾಗಿರುವುದರಿಂದ ಅವರನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಲತಾ ಮಂಗೇಶ್ಕರ್‌ ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 7 ಲಕ್ಷ ರೂಪಾಯಿ ನೀಡಿದ್ದರು.