Who is Vedanta’s Successor After Anil Agarwal’s Son Agnivesh’s Death ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ ನಿಧನರಾಗಿದ್ದಾರೆ. ಇದರ ನಂತರ ವೇದಾಂತ ಗ್ರೂಪ್‌ಗೆ ಮುಂದಿನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಎದುರಾಗಿದೆ. 

Agnivesh Agarwal: ದೇಶದ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ವೇದಾಂತ ಗ್ರೂಪ್‌ನ ಮುಖ್ಯಸ್ಥ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ (49) ನಿಧನರಾಗಿದ್ದಾರೆ. ಇದ್ದೊಬ್ಬ ಏಕೈಕ ಪುತ್ರನ ಸಾವಿನ ನಂತರ, ಅನಿಲ್‌ ಅಗರ್ವಾಲ್‌ ಸಂಪೂರ್ಣ ಕುಸಿದು ಹೋಗಿದ್ದಾರೆ. ಅನಿಲ್‌ ಅಗರ್ವಾಲ್‌ ಶೂನ್ಯದಿಂದ ಸ್ಥಾಪಿಸಿದ ವೇದಾಂತ ಗ್ರೂಪ್‌ ಇಂದು ಅನೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶದ ಅತಿದೊಡ್ಡ ಮೈನಿಂಗ್‌ ಗ್ರೂಪ್‌ಗಳಲ್ಲಿ ಒಂದಾಗಿದೆ. ಅನಿಲ್‌ ಅಗರ್ವಾಲ್‌ ಇಂದು ಕೋಟ್ಯಂತರ ರೂಪಾಯಿ ಆಸ್ತಿಗಳ ಮಾಲೀಕ. ಇದೇ ಕಾರಣಕ್ಕಾಗಿಯೇ ಏಕೈಕ ಪುತ್ರ ಅಗ್ನಿವೇಶ್‌ ಅಗರ್ವಾಲ್‌ ಅವರ ಸಾವಿನ ನಂತರ ವೇದಾಂತ ಗ್ರೂಪ್‌ನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಅನಿಲ್ ಅಗರ್ವಾಲ್ ನಿರ್ಮಿಸಿದ ಈ ಬಹುಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.

1976ರಲ್ಲಿ ಆರಂಭವಾದ ವೇದಾಂತ ಗ್ರೂಪ್‌

ಪ್ರಸ್ತುತ, ಅನಿಲ್ ಅಗರ್ವಾಲ್ ವೇದಾಂತ ರಿಸೋರ್ಸಸ್‌ನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರು 1976 ರಲ್ಲಿ ವೇದಾಂತ ರಿಸೋರ್ಸಸ್ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ಒಂದು ಸಣ್ಣ ಕೇಬಲ್‌ ಕಂಪನಿಯಾಗಿ ಆರಂಭವಾಗಿದ್ದ ವೇದಾಂತ ಗ್ರೂಪ್‌, ಅನಿಲ್ ಅಗರ್ವಾಲ್ ತಮ್ಮ ತಂದೆಯವರೊಂದಿಗೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕೈಗಾರಿಕಾ ಜಗತ್ತನ್ನು ಪ್ರವೇಶಿಸಿದರು. ಇಂದು, ವೇದಾಂತ ಗ್ರೂಪ್ ಆಫ್ ಕಂಪನೀಸ್ ಲೋಹಗಳು, ಗಣಿಗಾರಿಕೆ, ಇಂಧನ ಮತ್ತು ತೈಲ ಕ್ಷೇತ್ರಗಳಿಗೆ ವಿಸ್ತರಿಸಿದೆ.

ಅನಿಲ್‌ ಅಗರ್ವಾಲ್‌ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ?

ಅನಿಲ್‌ ಅಗರ್ವಾಲ್‌ ಅವರ ಪತ್ನಿ ಕಿರಣ್‌ ಅಗರ್ವಾಲ್‌. ಅವರು ಜನಮನದಿಂದ ದೂರ ಇರಲು ಇಷ್ಟಪಡುತ್ತಾರೆ. ಅನಿಲ್‌ ಅಗರ್ವಾಲ್‌ ಅವರಿಗೆ ಇಬ್ಬರು ಮಕ್ಕಳು. ಹಿರಿಯವನು ಪುತ್ರ ಅಗ್ನಿವೇಶ್‌ ಅಗರ್ವಾಲ್‌. ಅವರಿಗೆ ಪ್ರಿಯಾ ಅಗರ್ವಾಲ್‌ ಎಂಬ ಪುತ್ರಿಯೂ ಇದ್ದಾಳೆ. ಸ್ಕೀಯಿಂಗ್‌ ಅಪಘಾತದಲ್ಲಿ ಗಾಯಗೊಂಡಿದ್ದ ಅಗ್ನಿವೇಶ್‌ ಅಗರ್ವಾಲ್‌, ಅಮೆರಿಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಯ ಸಮಯದಲ್ಲಿ ಕಾರ್ಡಿಯಾಕ್‌ ಅರೆಸ್ಟ್‌ನಿಂದ ನಿಧನರಾದರು.

ಪುತ್ರ ಅಗ್ನಿವೇಶ್‌ ಜೊತೆ ವೇದಾಂತ ಚೇರ್ಮನ್‌ ಅನಿಲ್‌ ಅಗರ್ವಾಲ್‌

ಅನಿಲ್‌ ಅಗರ್ವಾಲ್‌ ಉತ್ತರಾಧಿಕಾರಿ ಯಾರು?

ಅಗ್ನಿವೇಶ್ ಅಗರ್ವಾಲ್ ಅವರ ಮರಣದ ನಂತರ, ಪ್ರಿಯಾ ಅಗರ್ವಾಲ್ ಮೇಲೆ ಬಹಳಷ್ಟು ಜವಾಬ್ದಾರಿಗಳು ಬಂದಿವೆ. ಅವರು ಪ್ರಸ್ತುತ ವೇದಾಂತ ಮತ್ತು ಹಿಂದೂಸ್ತಾನ್ ಜಿಂಕ್‌ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ. ಅವರು ಹಿಂದೂಸ್ತಾನ್ ಜಿಂಕ್‌ನ ಮುಖ್ಯಸ್ಥರು. ಅನಿಲ್‌ ಅಗರ್ವಾಲ್‌ ಭಾರತದ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರು. ಫೋರ್ಬ್ಸ್ ಪಟ್ಟಿಯ ಪ್ರಕಾರ, ಅನಿಲ್ ಅಗರ್ವಾಲ್ ಮತ್ತು ಅವರ ಕುಟುಂಬದ ಒಟ್ಟು ಸಂಪತ್ತು 35 ಸಾವಿರ ಕೋಟಿ ರೂ. ವೇದಾಂತ ಗ್ರೂಪ್‌ನ ಜವಾಬ್ದಾರಿ ಭವಿಷ್ಯದಲ್ಲಿ ಪ್ರಿಯಾ ಅಗರ್ವಾಲ್ ಅವರ ಹೆಗಲ ಮೇಲೆ ಬೀಳುವುದು ಖಚಿತವಾಗಿದೆ.