ದೇಶದ ಪ್ರಖ್ಯಾತ ಉದ್ಯಮಿಗಳೆಲ್ಲಾ ಸಾಲದಲ್ಲೇ ಉದ್ಯಮಗಳನ್ನು ನಡೆಸುತ್ತಿದ್ದಾರೆ ಎನ್ನುವುದು ಗೋಚರವಾಗುವಂಥ ಸತ್ಯ. ಆದರೆ, ಇವರು ತೆಗೆದುಕೊಂಡ ಸಾಲಗಳನ್ನು ಎಷ್ಟರ ಮಟ್ಟಿಗೆ ಮರುಪಾವತಿ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಕಂಪನಿಗಳ ಭವಿಷ್ಯ ಅಡಗಿರುತ್ತದೆ.  

ನವದೆಹಲಿ (ಮಾ.8): ದೇಶದ ಮತ್ತೊಂದು ಪ್ರಖ್ಯಾತ ಕಂಪನಿ, ಗಣಿಗಾರಿಕೆಯ ದೈತ್ಯ ವೇದಾಂತ ಈ ವರ್ಷದ ಜೂನ್‌ ವೇಳೆಗೆ ಅಂದಾಜು 900 ಮಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯದ ಸಾಲ ಮುಕ್ತಾಯದ ಪಾವತಿ ಮಾಡಬೇಕಿದೆ. ಆದರೆ, ವೇದಾಂತ ಕಂಪನಿಯ ಚೇರ್ಮನ್‌ ಅನಿಲ್‌ ಅಗರ್ವಾಲ್‌ ಈ ಕಳವಳವನ್ನು ತಳ್ಳಿಹಾಕಿದ್ದಾರೆ. 1 ಬಿಲಿಯನ್‌ ಯುಎಸ್‌ ಡಾಲರ್‌ ಸಾಲವೆಲ್ಲಾ ನಮಗೆ ಕಡಲೇಬೀಜ ಇದ್ದಂತೆ ಎಂದು ಹೇಳಿದ್ದಾರೆ. ಟ ಬಿಲಿಯನ್‌ ಡಾಲರ್‌ ಎಂದರೆ ಭಾರತೀಯ ರೂಪಾಯಿಯಲ್ಲಿ 8200 ಕೋಟಿ ರೂಪಾಯಿ ಆಗಿದೆ. ಫೈನಾನ್ಶಿಯಲ್‌ ಟೈಮ್ಸ್ ಜೊತೆಗಿನ ಸಂದರ್ಶನದದಲ್ಲಿ ಜೂನ್‌ ವೇಳೆಗೆ ಕಂಪನಿಯ ಸಾಲ ಪಾವತಿ ಮಾಡಬೇಕಿದೆ. ಇದಕ್ಕೆ ಕಂಪನಿ ಎಷ್ಟು ಸಜ್ಜಾಗಿದೆ ಎನ್ನುವ ವಿಚಾರವಾಗಿ ಅವರು ಮಾತನಾಡಿದ್ದಾರೆ. ಕಂಪನಿಯ ಸರಕುಗಳ ವ್ಯವಹಾರಗಳಿಂದ ಸಾಕಷ್ಟು ಹಣ ಬರುತ್ತಿದೆ. ಈ ವರ್ಷ ಕಂಪನಿಯು ಕನಿಷ್ಠ 9 ಬಿಲಿಯನ್‌ ಯುಎಸ್‌ ಡಾಲರ್‌ ಆದಾಯವನ್ನು ನಿರೀಕ್ಷೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ವೇದಾಂತ ಕಂಪನಿಯ ಮೇಲಿನ ಅತಿಯಾದ ಸಾಲವು ಮಾಧ್ಯಮಗಳಲ್ಲಿ ಸಾಕಷ್ಟು ಹೈಲೈಟ್‌ ಆಗಿದೆ. ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ಇತ್ತೀಚಿನ ತನ್ನ ವರದಿಯಲ್ಲಿ ಗೌತಮ್‌ ಅದಾನಿ ಸಾಮ್ರಾಜ್ಯದ ಕಂಪನಿಗಳ ಮೇಲೂ ಅತಿಯಾದ ಸಾಲವಿದೆ ಎಂದು ಸಾಕ್ಷಿ ಸಮೇತ ತಿಳಿಸಿತ್ತು.

ರೇಟಿಂಗ್ ಏಜೆನ್ಸಿ ಎಸ್ & ಪಿ ಗ್ಲೋಬಲ್ ಇತ್ತೀಚೆಗೆ ನೀಡಿರುವ ವರದಿಯ ಅನ್ವಯ ವೇದಾಂತ ರಿಸೋರ್ಸಸ್ ತನ್ನ ಹಣಕಾಸಿನ ಜವಾಬ್ದಾರಿಗಳನ್ನು ಸೆಪ್ಟೆಂಬರ್‌ನ ನಂತರ ಪೂರೈಸುವ ಸಾಮರ್ಥ್ಯ ಹೊಂದಿದೆ. ಅದಕ್ಕೆ ಕಾರಣ ಕಂಪನಿಯ 2 ಶತಕೋಟಿ ಯುಎಎಸ್‌ ಡಾಲರ್‌ ನಿಧಿ ಸಂಗ್ರಹಣೆ ಮತ್ತು ಆಫ್ರಿಕಾದಲ್ಲಿ ವೇದಾಂತದ ಸತು ಆಸ್ತಿಗಳ ಪ್ರಸ್ತಾವಿತ ಮಾರಾಟದ ಮೇಲೆ ಅವಲಂಬಿತವಾಗಿರುತ್ತದೆ 

ಈ ಅವಲೋಕನವು ಹೂಡಿಕೆದಾರರು ಮತ್ತು ಮಾರುಕಟ್ಟೆಗಳನ್ನು ಅಚ್ಚರಿಗೆ ದೂಡಿದೆ. ಇದರಿಂದಾಗಿ ಕಂಪನಿಯ ಷೇರುಗಳು ದಾಖಲೆಯ ಮಟ್ಟದಲ್ಲಿ ಮಾರಾಟವನ್ನು ಕಂಡಿವೆ. ಅದಲ್ಲದೆ, ಕಳೆದ ಒಂದು ತಿಂಗಳಲ್ಲಿ ವೇದಾಂತ ಕಂಪನಿ ಷೇರುಗಳು ಶೇ. 10ರಷ್ಟು ಕುಸಿದಿವೆ.

ಗೌತಮ್‌ ಅದಾನಿ ಅಯ್ತು, ಈಗ ಅಣ್ಣ ವಿನೋದ್‌ ಅದಾನಿ ಮೇಲೆಯೂ ಆರೋಪ!

ಸಂದರ್ಶನದಲ್ಲಿ ಮಾತನಾಡಿದ ಅನಿಲ್‌ ಅಗರ್ವಾಲ್‌, 'ನಿಮಗೊಂದು ಮಾಹಿತಿ ತಿಳಿದಿರಲಿ. ವೇದಾಂತ ಕಂಪನಿಗೆ ಪ್ರತಿಯೊಬ್ಬರೂ ಹಣ ನೀಡಲು ಬಯಸುತ್ತಾರೆ' ಎಂದರು. ಆದರೆ, ಯಾವುದೇ ಬ್ಯಾಂಕ್‌ ಅಥವಾ ಹೂಡಿಕೆದಾರ ಕಂಪನಿಯನ್ನು ಅವರು ಹೆಸರಿಸಲಿಲ್ಲ. ಮೈನಿಂಗ್‌ ಸಾಮ್ರಾಜ್ಯದ ಅಧಿಪತಿ ಎಂದೇ ಅನಿಸಿಕೊಂಡಿರುವ ವೇದಾಂತ, ಈಗಾಗಲೇ ಜೆಪಿ ಮಾರ್ಗನ್‌ ಮತ್ತು ಇತರ ಬ್ಯಾಂಕ್‌ಗಳೊಂದಿಗೆ 1 ಬಿಲಿಯನ್‌ ಡಾಲರ್‌ ಸಾಲಕ್ಕಾಗಿ ಮಾತುಕತೆ ನಡೆಸುತ್ತಿದೆ. ಇದು ಶೇ. 8-10ರಷ್ಟು ಬಡ್ಡಿದರವನ್ನು ಹೊಂದಿರಬಹುದು ಎಂದು ಅನಿಲ್‌ ಅಗರ್ವಾಲ್‌ ಹೇಳಿದ್ದಾರೆ. ವೇದಾಂತವು $13 ಶತಕೋಟಿಗಿಂತ ಕಡಿಮೆ ಒಟ್ಟು ಸಾಲವನ್ನು ಹೊಂದಿದೆ. ಶೂನ್ಯ ಸಾಲದ ಕಂಪನಿಯಾಗುವುದು ವೇದಾಂತ ಪಾಲಿಗೆ ದೂರದ ಕನಸಲ್ಲ. ಇದು ಬಹುಶಝ ಮಧ್ಯಮ ಅವಧಿಯ ಸಾಧಿಸಬಹುದಾದ ಗುರಿಯಾಗಿದೆ ಎಂದು ಹೇಳಿದರು.

ಹಿಂಡೆನ್‌ಬರ್ಗ್‌ ರಿಪೋರ್ಟ್‌ನಿಂದ ಆದ ನಷ್ಟ ಸರಿದೂಗಿಸಲು ಅದಾನಿ ಗ್ರೂಪ್‌ ಸಖತ್‌ ಪ್ಲ್ಯಾನ್‌!

ಕಳೆದ ತಿಂಗಳು, ಮುಂಬೈ ಮೂಲದ ವೇದಾಂತ ಲಿಮಿಟೆಡ್‌ನ ಮೂಲ ಸಂಸ್ಥೆಯಾದ ವೇದಾಂತ ರಿಸೋರ್ಸಸ್, ಈ ವರ್ಷದ ಮಾರ್ಚ್‌ವರೆಗೆ ತನ್ನ ಎಲ್ಲಾ ಮೆಚ್ಯೂರಿಟಿಗಳನ್ನು ಮುಂಗಡವಾಗಿ ಪಾವತಿಸಿದೆ ಮತ್ತು ಕಳೆದ 11 ತಿಂಗಳಲ್ಲಿ $ 2 ಶತಕೋಟಿ ವಿತರಿಸಿದೆ ಎಂದು ಹೇಳಿದೆ. ಜೂನ್ 23ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಮುಂಬರುವ ಮೆಚುರಿಟಿಗಳನ್ನು ಪೂರೈಸುವ ಸಂಪೂರ್ಣ ವಿಶ್ವಾಸವಿದೆ ಎಂದು ಕಂಪನಿ ಹೇಳಿದೆ. "ನಾವು ಮರುಹಣಕಾಸು ಮತ್ತು ಆಂತರಿಕ ಸಂಚಯಗಳ ಮೂಲಕ ಮರುಪಾವತಿ ಎರಡಕ್ಕೂ ಬಹು ಆಯ್ಕೆಗಳನ್ನು ಹೊಂದಿದ್ದೇವೆ" ಎಂದು ಅದು ಹೇಳಿದೆ, ಬ್ಯಾಂಕ್‌ಗಳ ಸಿಂಡಿಕೇಟ್‌ನಿಂದ $ 1 ಬಿಲಿಯನ್ ತಾಜಾ ಸಾಲದ ಮೂಲಕ ಅಗತ್ಯವಿರುವ ಹಣಕಾಸುವನ್ನು ಕಟ್ಟಲು ಕಂಪನಿಯು ಮಾತುಕತೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಲಂಡನ್‌ನಲ್ಲಿ ಮೂಲ ಕಚೇರಿ ಹೊಂದಿರುವ ಕಂಪನಿಯು 2022ರ ಮಾರ್ಚ್ 31 ರಂತೆ $9.66 ಬಿಲಿಯನ್ ನಿವ್ವಳ ಸಾಲವನ್ನು ಹೊಂದಿದೆ. ಮರುಪಾವತಿ ಮತ್ತು ಎರವಲುಗಳ ನಂತರ, ಇದು ಸುಮಾರು $7.7 ಶತಕೋಟಿ ಬಾಕಿಯನ್ನು ಹೊಂದಿದೆ, ಇದರಲ್ಲಿ $3 ಬಿಲಿಯನ್ ಏಪ್ರಿಲ್ 2023 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷದಲ್ಲಿ ಮರುಪಾವತಿಗೆ ಬಾಕಿಯಿದೆ.