Asianet Suvarna News Asianet Suvarna News

ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ? ಕಾಶಿ ದೇವಸ್ಥಾನದ ಮಾಜಿ ಮಹಂತ್ ಹೇಳಿದ್ದಿಷ್ಟು

ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತರಾದ ಡಾ ಕುಲಪತಿ ತಿವಾರಿ "ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಮೇಲಿನ ಕಪಾಟಿನಲ್ಲಿ ಸಣ್ಣ ಶಿವಲಿಂಗವನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ 

Varanasi There was another shivling inside Gyanvapi says ex mahant of Shri Kashi Vishwanath Temple mnj
Author
Bengaluru, First Published May 22, 2022, 5:24 PM IST | Last Updated May 22, 2022, 5:27 PM IST

ವಾರಾಣಸಿ (ಮೇ 22):  ಸಮೀಕ್ಷಾ ಕಾರ್ಯ ನಡೆದ ವಾರಾಣಸಿಯ ಗ್ಯಾನವಾಪಿ ಮಸೀದಿಯೊಳಗಿನ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಸದ್ಯ ವಾರಾಣಸಿಯ ಗ್ಯಾನವಾಪಿ ಮಸೀದಿ ಪ್ರಕರಣದ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟು ನಿರಾಕರಿಸಿದ್ದು, ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.  ಈ ನುಡವೆ ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತರಾದ ಡಾ ಕುಲಪತಿ ತಿವಾರಿ (Dr Kulpati Tiwari’) "ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಮೇಲಿನ ಕಪಾಟಿನಲ್ಲಿ ಸಣ್ಣ ಶಿವಲಿಂಗವನ್ನು ನೋಡಿದ್ದೇನೆ ಮತ್ತು ಅದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಆಗ್ರಹಿಸಿಸುತ್ತೇನೆ" ಎಂದು ಹೇಳಿದ್ದಾರೆ

ಡಾ ಕುಲಪತಿ ತಿವಾರಿ ಅವರ ಹೇಳಿಕೆಯನ್ನು ಮಸೀದಿ ನಿರ್ವಹಣಾ ಸಮಿತಿಯಾದ ಅಂಜುಮನ್ ಇಂತಿಝಾಮಿಯಾ ಮಸಾಜಿದ್ (AIM) ಕಾರ್ಯಕಾರಿಯೊಬ್ಬರು "ಆಧಾರರಹಿತ" ಎಂದು ತಳ್ಳಿಹಾಕಿದ್ದಾರೆ. ಮಸೀದಿ ಸಮೀಕ್ಷೆ ವೇಳೆ  ಮಸೀದಿಯ ವಝೂರ್‌ಖಾನಾ ಪ್ರದೇಶದಲ್ಲಿ (ನಮಾಜ್‌ಗೆ ಮುನ್ನ ಜನರು ಕೈತೊಳೆಯುವ ಸ್ಥಳ) ಶಿವಲಿಂಗ ಪತ್ತೆಯಾಗಿದೆ ಎಂಬ ವರದಿಗಳ ಬಳಿಕ ತಿವಾರಿ ಹೇಳಿಕೆಯು ಈಗ ಮತ್ತಷ್ಟು ಕುತೂಹಲ ಮೂಡಿಸಿದೆ. 

ಕಾಶಿ ವಿಶ್ವನಾಥ ಮಂದಿರದ (Kashi Vishwanath) ಭಾಗವನ್ನು ಕೆಡವಿ ಅಂದಿನ ಮುಘಲ್‌ ದೊರೆ ಔರಂಗಜೇಬ್‌, ಗ್ಯಾನವಾಪಿ ಮಸೀದಿ (Gyanvapi Mosque) ಕಟ್ಟಿಸಿದ್ದ. ಈ ಮಸೀದಿಯಲ್ಲಿ ಶೃಂಗಾರ ಗೌರಿ, ಗಣೇಶ ಸೇರಿ ಅನೇಕ ದೇವರ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂಬ ಕೋರಿ ಐವರು ಮಹಿಳೆಯರು ಕಳೆದ ವರ್ಷ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಗ್ರಹಗಳ ಪತ್ತೆಗಾಗಿ ವಿಡಿಯೋ ಸಮೀಕ್ಷೆಗೆ ಕೋರ್ಟ್ ಆದೇಶಿಸಿತ್ತು.‌

ತನಿಖೆ ನಡೆಯಲಿ:  2014ರಲ್ಲಿ ಕ್ಲಿಕ್ಕಿಸಲಾಗಿದೆ ಎಂದು ಹೇಳಿರುವ ಛಾಯಾಚಿತ್ರಗಳನ್ನು ತೋರಿಸುತ್ತಾ “ಈ ಶಿವಲಿಂಗವು ಈಗಲೂ ಅದೇ ಸ್ಥಳದಲ್ಲಿ ಅಸ್ತಿತ್ವದಲ್ಲಿದೆಯೇ ಅಥವಾ ತೆಗೆದುಹಾಕಲಾಗಿದೆಯೇ ಎಂದು ನನಗೆ ತಿಳಿದಿಲ್ಲ. ಸಮರ್ಥ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಗೋಡೆಗಳ ಮೇಲೆ ಕಮಲದ ಹೂವುಗಳು ಮತ್ತು ಘಂಟೆಗಳ ಆಕೃತಿಗಳನ್ನು ಸಹ ಕಾಣಬಹುದು" ಎಂದು 1983 ರಲ್ಲಿ ಸರ್ಕಾರ ನೇಮಿಸಿದ ಟ್ರಸ್ಟ್, ಆಡಳಿತವನ್ನು ವಹಿಸಿಕೊಳ್ಳುವ ಮೊದಲು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ  ಸೇವೆ ಸಲ್ಲಿಸಿದ ಕೊನೆಯ ಮಹಂತ್ ತಿವಾರಿ ತಿಳಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಜ್ಞಾನವಾಪಿ ಗದ್ದಲದ ಬೆನ್ನಲ್ಲೇ ಕುತುಬ್ ಮಿನಾರ್ ವಿವಾದ, ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ!

ಇನ್ನೊಂದು ಚಿತ್ರದಲ್ಲಿ ಶೃಂಗಾರ ಗೌರಿಯ ದೇವಸ್ಥಾನವಿರುವ ಜ್ಞಾನವಾಪಿ ಆವರಣದ ಆ ಭಾಗದಲ್ಲಿ ಕೆಲವು ಮಕ್ಕಳು ಆಟವಾಡುತ್ತಿರುವುದನ್ನು ಕಾಣಬಹುದು. ಇನ್ನೊಂದು ಚಿತ್ರದಲ್ಲಿ, ಜ್ಞಾನವಾಪಿ ರಚನೆಯ ಹಿಂಭಾಗದ ಗೋಡೆಯು ಸ್ಪಷ್ಟವಾಗಿ ಗೋಚರಿಸುತ್ತದೆ, ಇದು ಪ್ರಾಚೀನ ದೇವಾಲಯದಂತಿದೆ ಎಂದು ಅವರು ಹೇಳಿದ್ದಾರೆ. ತಿವಾರಿ ಅವರು ಜ್ಞಾನವಾಪಿ ಎಂದರೆ ವುಜು ಕೊಳವನ್ನು ಉಲ್ಲೇಖಿಸಿ 'ಜ್ಞಾನದ ಬಾವಿ' ಎಂದು ಹೇಳಿದ್ದಾರೆ.

ಶಿವ ನಿರ್ಮಿಸಿದ ಕೊಳ:  “ಶಿವನೇ (Shiva) ತನ್ನ ತ್ರಿಶೂಲದಿಂದ ನಿರ್ಮಿಸಿದ ಈ ಕೊಳದ ಹಿಂದೆ ನಂದಿ ಮತ್ತು ಹನುಮಂತನ ವಿಗ್ರಹವು ಗೋಚರಿಸುತ್ತದೆ. ಅದರಲ್ಲಿ ಸ್ನಾನ ಮಾಡಿದ ನಂತರ, ಪಾರ್ವತಿ ದೇವಿಯು ವಿಶ್ವೇಶ್ವರನನ್ನು (ಶಿವನ ಇನ್ನೊಂದು ಹೆಸರು) ಪೂಜಿಸುತ್ತಿದ್ದಳು, ”ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಸಮೀಕ್ಷೆ ವೇಳೆ ದೊರೆತ ಶಿವಲಿಂಗಕ್ಕೆ (Shivalinga)  ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಸೋಮವಾರ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

"ಜ್ಞಾನವಾಪಿ ಆವರಣದಲ್ಲಿ ಕಂಡುಬರುವ ಶಿವಲಿಂಗವನ್ನು ಬಿಡಲಾಗುವುದಿಲ್ಲ." ಎಂದು ತಿವಾರಿ ಹೇಳಿದ್ದಾರೆ. 1983 ರಲ್ಲಿ ಸರ್ಕಾರ ನೇಮಿಸಿದ ಟ್ರಸ್ಟ್ ನಿರ್ವಹಣೆಯನ್ನು ವಹಿಸಿಕೊಳ್ಳುವ ಮೊದಲು ಡಾ ತಿವಾರಿ ಅವರು ಕಾಶಿ ವಿಶ್ವನಾಥ ದೇವಾಲಯದ ಕೊನೆಯ ಮಹಂತ್ ಆಗಿ ಸೇವೆ ಸಲ್ಲಿಸಿದ್ದರು. ಅವರು ತಮ್ಮ ಬಳಿಯಿರುವ ಚಿತ್ರಗಳನ್ನು 2014 ರಲ್ಲಿ ಕ್ಲಿಕ್ ಮಾಡಲಾಗಿದೆ ಎಂದು ಹೇಳುತ್ತಾರೆ.

ತಿವಾರಿ ಅವರ ಹೇಳಿಕೆಯನ್ನು ನಿರಾಕರಿಸಿದ AIM ಜಂಟಿ ಕಾರ್ಯದರ್ಶಿ ಎಸ್‌ಎಂ ಯಾಸೀನ್, “ಅವರ ಹೇಳಿಕೆ ನಿರಾಧಾರವಾಗಿದೆ. ಜ್ಞಾನವಾಪಿ ಆವರಣದಲ್ಲಿ ಗೋಡೆಯ ಮೇಲೆ ‘ತಖಾ’ (ಕಪಾಟು) ಇಲ್ಲ. ಅವರು ಯಾವ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ, ”ಎಂದು ಹೇಳಿದ್ದಾರೆ, ಜನರು ಆಧಾರರಹಿತ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು ಏಕೆಂದರೆ ಇದು ಶಾಂತಿ ಮತ್ತು ಸೌಹಾರ್ದತೆಯನ್ನು ಧಕ್ಕೆ ತರಬಹುದು" ಎಂದು ಅವರು ಹೇಳಿದ್ದಾರೆ.

ಇದನ್ನೂಓದಿ: ಕರ್ನಾಟಕದಲ್ಲಿ ಜ್ಞಾನವ್ಯಾಪಿನೂ ಇಲ್ಲ, ಜ್ಞಾನಬಾಪಿನೂ ಇಲ್ಲ: ಸಿ.ಎಂ. ಇಬ್ರಾಹಿಂ

Latest Videos
Follow Us:
Download App:
  • android
  • ios