ಕರ್ನಾಟಕದಲ್ಲಿ ಜ್ಞಾನವ್ಯಾಪಿನೂ ಇಲ್ಲ, ಜ್ಞಾನಬಾಪಿನೂ ಇಲ್ಲ: ಸಿ.ಎಂ. ಇಬ್ರಾಹಿಂ

*  ಬಿಜೆಪಿಯವರಿಗೆ ಏನಾದರೂ ಮಾನ ಇದೀಯಾ?
*  ಸಿಎಂ ಬೊಮ್ಮಾಯಿಗೆ ಸಂಪೂರ್ಣ ಪುನಾರಚನೆ ಮಾಡಲು ಅವಕಾಶ ನೀಡುತ್ತಿಲ್ಲ
*  ಈ ಗುಲಾಮಗಿರಿಯಿಂದ ಹೊರಬರಲು ಜನರು ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸಬೇಕು 

Karnataka JDS Leader CM Ibrahim React on Gyanvapi Controversy grg

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಮೇ.21): ಯಾವುದೋ ಊರಿನಲ್ಲಿ ಇರುವುದು ನಮ್ಮ ಊರಿನ ಸಾಹೇಬರಿಗೆ ಯಾಕೆರೀ. ಕರ್ನಾಟಕದಲ್ಲಿ ಜ್ಞಾನವ್ಯಾಪಿನೂ ಇಲ್ಲ. ಜ್ಞಾನಬಾಪಿನೂ ಇಲ್ಲವಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ‌ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಜ್ಞಾನವ್ಯಾಪಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅದು ಸಂಬಂಧವಿಲ್ಲದ ವಿಷಯ. ಯುಪಿಯಲ್ಲಿ ಏನು ನಡೆಯುತ್ತಿದೋ ಅದೆಲ್ಲ ನಮಗೆ ಬೇಕಿಲ್ಲ. ನಮ್ಮದು ಕರ್ನಾಟಕ, ಭಾರತ ಜನನಿಯ ತನುಜಾತೆ. ಜಯ ಹೈ ಕರ್ನಾಟಕ ಮಾತೆ, 1 ಕೋಟಿ 36 ಲಕ್ಷ ಸಾಬರು, ಆರೂವರೆ ಕೋಟಿ ಜನರು ಒಂದೇ ತಾಯಿಮಕ್ಕಳಂತೆ ಇದ್ದೇವೆ. ಅದು ಹಾಳು ಬಿದ್ದು ಹೋಗಲಿ ನಾವು ಅದರ ಕಡೆ ತಿರುಗಿ ನೋಡಲ್ಲ. ನಮಗೆ ನಮ್ಮ ನಾಡು ನಮ್ಮ ಊರು. ಇಲ್ಲಿ ಸರ್ವೇ ಮಾಡಬೇಕಾ ಮಾಡಿಕೊಳ್ಳಿ ಎಂದರು.

ಒಡೆದ ಮನೆಯಾದ ಕಾಂಗ್ರೆಸ್‌

ಕಾಂಗ್ರೆಸ್ 20 ಪರ್ಸೆಂಟ್ ಸರ್ಕಾರ ಆಗಿತ್ತು. ‌ಈಗ ಬಿಜೆಪಿ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ ‌ಮತ್ತು ಬಿಜೆಪಿ ನಡುವೆ ಕಮಿಷನ್‌ಗಾಗಿ ಜಗಳ ಶುರುವಾಗಿದೆ. ಕಾಂಗ್ರೆಸ್ ಮತ್ತು ‌ಬಿಜೆಪಿ ಚಿಕ್ಕ- ದೊಡ್ಡಪ್ಪನ ಮಕ್ಕಳು, ಜೆಡಿಎಸ್ ಪ್ರಾದೇಶಿಕ ಪಕ್ಷ ಕಳೆದ 36 ವರ್ಷದಿಂದ ಇದೆ. ಜೆಡಿಎಸ್ ಪರಿಚಯ ಮಾಡುವ ಅವಶ್ಯಕತೆ ಇಲ್ಲ ಅಂತ ತಿಳಿಸಿದ್ದಾರೆ. 

JDS Politics: ಇಬ್ರಾಹಿಂಗೆ ರಾಜಾಧ್ಯಕ್ಷ ಹುದ್ದೆಯನ್ನೇ ಕೊಟ್ಟಿದ್ದೇವೆ, ಪರಿಷತ್‌ ಟಿಕೆಟ್‌ ಇಲ್ಲ: ಎಚ್‌ಡಿಕೆ

ನಮ್ಮ ಕನ್ನಡಿಗರು ಪ್ರಧಾನಿಯಾಗಿದ್ದ ಪಕ್ಷ ನಮ್ಮದು,  ನಮ್ಮ ದೇವರನ್ನು ನಾವು ಯಾಕೆ ಕಡೆಗಣಿಸಬೇಕು. ಬಿಜೆಪಿ ಗುಜರಾತ್ ‌ಮಾಡಲ್ ಪ್ರಚಾರಕ್ಕೆ ಟಾಂಗ್ ಕೊಟ್ಟ ಸಿಎಂ ಇಬ್ರಾಹಿಂ, ನಮ್ಮ ಊರಿನಲ್ಲಿ ಪಾನಿಪುರಿ ಮಾರುವರೇ ಗುಜರಾತ್‌ನವರು, ಪಾನ್ ಮಸಾಲ ಮಾಡುವರು ಗುಜರಾತ್‌‌ನವರೇ. ಕರ್ನಾಟಕದವರು ಗುಜರಾತ್‌ಗೆ ಪಾನಿಪುರಿ, ಜೋಳದ ರೊಟ್ಟಿ ಮಾರಲು ಹೋಗಿದ್ದಾರಾ ಇಲ್ಲ ನಮ್ಮ ರಾಜ್ಯದಲ್ಲಿ ಸ್ವಯಂ ಶಕ್ತಿಯಿದೆ ಅಂತ ಹೇಳಿದ್ದಾರೆ. 

ಹತ್ತಾರು ನೀರಾವರಿ ಯೋಜನೆಗಳು ‌ನಮ್ಮ ದೇವೇಗೌಡರು ಮಾಡಿದ್ದಾರೆ. ನೀರಾವರಿ ಯೋಜನೆಗಳು  ಉಪಯೋಗಿಕೊಳ್ಳಬೇಕು ಆಗ ನಾವೇ ನಂ.ಒನ್‌ ಆಗುತ್ತೇವೆ. ಜಂಗಮರು ‌ನಾವು ಜೋಳಿಗೆ ಹಾಕಿಕೊಂಡು ‌ಹೊರಟ್ಟಿದ್ದೇವೆ. ಮೂರು ತಿಂಗಳಲ್ಲಿ ರಾಜ್ಯದ ಚಿತ್ರಣವೇ ಬದಲಾಗುತ್ತೆ,  ನಾವು ಸಾಹೇಬರು ಕ್ಯಾರೇ ಖಾಸೀಂ ಅಂದ್ರೆ ಹೂವಾ ಸಾಹಬ್ ಕಾಮ್ ಅನ್ನಬೇಕು, ನೋಡುತ್ತೇವೆ ಸ್ವಾಮಿ, ಮಾಡುತ್ತೇವೆ ಸ್ವಾಮಿ ನಾವು ಎನ್ನಲ್ಲ,  ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ. ದೆಹಲಿ ಬಾ, ಸೂಟಕೇಸ್ ಎಂಬುವುದು ನಮ್ಮಲ್ಲಿ ಇಲ್ಲ ಅಂತ ಹೇಳಿದ್ದಾರೆ. 

Karnataka Politics: ತಳಮಟ್ಟದಿಂದ ಜೆಡಿಎಸ್‌ ಸಂಘಟಿಸಿ: ಇಬ್ರಾಹಿಂ

ನಮ್ಮದು ಅಯ್ಯಾಸ್ವಾಮಿ ಕಲ್ಯಾಣ, ಅವರವರ ವಿಟ್ಟಲಾ ಸಾಪಾಡಿ ಹೊಡಿ ಅಂತಲಾಗೇ. ರಾಜ್ಯದಲ್ಲಿ ವಿವಿಧ ಕಾಮಗಾರಿಯಲ್ಲಿ ‌ಕಮಿಷನ್ ದಂಧೆ ವಿಚಾರಕ್ಕೆ ಮಾತನಾಡಿದವರು, ಗಂಡಸರು ಹೊಡೆದಾಡಿದ್ರೆ ಗಂಡಸರಿಗೆ ಕಳುಹಿಸಬಹುದು, ಹೆಂಗಸರೂ ಹೊಡೆದಾಡಿದ್ರೆ ಹೆಂಗಸರಿಗೆ ಕಳುಹಿಸಬಹುದು. ಮಂಗಳಮುಖಿಯರು ಹೊಡೆದಾಡಿದ್ರೆ ಯಾರಿಗೆ ‌ಕಳುಹಿಸುವುದು. ಬಿಜೆಪಿಯವರು ಏನೋ ಬಸ್ಯಾ ಅಂತ ಮಾಡಿ ತೋರಿಸಿದ, ಬಿಜೆಪಿಯವರಿಗೆ ಏನಾದರೂ ಮಾನ ಇದೀಯಾ?, ಗುತ್ತಿಗೆದಾರ ಅಧ್ಯಕ್ಷ ಮಂತ್ರಿ ದುಡ್ಡು ಕೇಳಿರುವ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಾರೆ. ಸರ್ಕಾರ ಕೇಳಿಸಿಕೊಂಡ ಸುಮ್ಮನೆ ಇತ್ತು, ಒಬ್ಬ ಬಿಜೆಪಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ, ಸಿದ್ದರಾಮಯ್ಯ ಯಾಕೆ ಧರಣಿ ಮಾಡಲಿಲ್ಲ, ರಾಜ್ಯದ ಸಿಎಂ ಬೊಮ್ಮಾಯಿಗೆ ಸಂಪೂರ್ಣ ಪುನಾರಚನೆ ಮಾಡಲು ಅವಕಾಶ ನೀಡುತ್ತಿಲ್ಲ,  ಈ ಗುಲಾಮಗಿರಿಯಿಂದ ಹೊರಬರಲು ಜನರು ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸಬೇಕು ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios