Asianet Suvarna News Asianet Suvarna News

ಮಂತ್ರಾಲಯದ ಕಟ್ಟಡದಿಂದ ಕೆಳಗೆ ಹಾರಿದ ವ್ಯಕ್ತಿ... ರಕ್ಷಿಸಿದ್ಯಾರು?

ಮುಂಬೈನ ಮಂತ್ರಾಲಯದ ಕಟ್ಟಡದಿಂದ 3ನೇ ಮಹಡಿಯಿಂದ ಯುವಕನೋರ್ವ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಆದರೆ ನೆಟ್ ಅಳವಡಿಸಿದ್ದರಿಂದ ಅದೃಷ್ಟವಶಾತ್ ಆತನ ಜೀವ ಉಳಿದಿದೆ. 

Vadapav Vendor jumped down from the Mantralaya building in Mumbai akb
Author
First Published Mar 18, 2024, 10:46 PM IST

ಮುಂಬೈ: ಮುಂಬೈನ ಮಂತ್ರಾಲಯದ ಕಟ್ಟಡದಿಂದ 3ನೇ ಮಹಡಿಯಿಂದ ಯುವಕನೋರ್ವ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಆದರೆ ನೆಟ್ ಅಳವಡಿಸಿದ್ದರಿಂದ ಅದೃಷ್ಟವಶಾತ್ ಆತನ ಜೀವ ಉಳಿದಿದೆ. ಈ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂತ್ರಾಲಯದ ಕಟ್ಟಡದಿಂದ ಕೆಲಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸುರಕ್ಷಿತವಾಗಿ ಸೇಫ್ಟಿ ನೆಟ್ ಮೇಲೆ ಬಿದ್ದಿದ್ದಾನೆ.  ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿಯೇ ಈ ಸೇಫ್ಟಿ ನೆಟ್‌ ಅನ್ನು ಅಳವಡಿಸಲಾಗಿತ್ತು.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಕಟ್ಟಡದಿಂದ ಕೆಳಗೆ ಹಾರಿದ ವ್ಯಕ್ತಿ ನೆಟ್ ಮೇಲೆ ಬೀಳುತ್ತಲೇ ಭಾರತ್ ಮಾತಾ ಕೀ ಜೈ ಎಂದು ಕೂಗುವುದನ್ನು ಕೇಳಬಹುದು. ಜೊತೆಗೆ ಆತ ತಾನು ಸುರೇಶ್ ಯಾದವ್‌ನ ಗೂಂಡಾಗಿರಿಯಿಂದ ಬಹಳ ಬೇಸತ್ತಿದ್ದೇನೆ ಎಂದು ಹೇಳುವುದನ್ನು ಕೇಳಬಹುದು. ಆದರೆ ಈತ ಹೀಗೆ ಸಾವಿಗೆ ಶರಣಾಗಲು ಯತ್ನಿಸಿದ್ದೇಕೆ ಎಂಬ ಬಗ್ಗೆ ಸ್ಪಷ್ಟ ಕಾರಣ ತಿಳಿದಿಲ್ಲ.

ಅಲ್ಲದೇ ವೈರಲ್ ಆಗಿರುವ ವೀಡಿಯೋದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಈ ವ್ಯಕ್ತಿಯನ್ನು ಕೆಳಗಿಳಿಸುವಂತೆ ಹೇಳಿದಾಗ ಅದಕ್ಕೆ ಆ ವ್ಯಕ್ತಿ ನಾನು ಕೆಳಗೆ ಬರುತ್ತೇನೆ, ನೀವು ಟೆನ್ಷನ್ ಮಾಡಿಕೊಳ್ಳಬೇಡಿ ಎಂದು ಉತ್ತರಿಸಿದ್ದಾರೆ. ಆದರೆ ಅಚಾನಕ್ ನಡೆದ ಈ ಘಟನೆಯನ್ನು ವೀಕ್ಷಿಸಲು ಅಲ್ಲಿ ನೆಟ್ ಸುತ್ತಲೂ ಜನ ಸೇರಿದ್ದರು. ಆದರೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ನೆಟ್‌ನ ಮಧ್ಯೆ ಕುಳಿತು ಘೋಷಣೆಗಳನ್ನು ಕೂಗುವುದನ್ನು ಕೇಳಬಹುದು.

ಆದರೆ ಕೆಲ ವರದಿಗಳ ಪ್ರಕಾರ ಹೀಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ವಡಪಾವ್ ವ್ಯಾಪಾರಿಯಾಗಿದ್ದು, ನಗರಾಡಳಿತವೂ ಈತನ ವಡಾಪಾವ್ ಸ್ಟಾಲ್ ವಿರುದ್ಧ ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ಈತ ಕಟ್ಟಡದಿಂದ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ.  ಆದರೆ  ನಂತರ ಸ್ಥಳಕ್ಕೆ ಬಂದ ಮುಂಬೈ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಳಿಕ ಮರಿನ್ ಡ್ರೈವ್ ಪೊಲೀಸ್ ಸ್ಟೇಷನ್‌ಗೆ ಹಸ್ತಾಂತರಿಸಿದ್ದಾರೆ. 
 


 

Follow Us:
Download App:
  • android
  • ios