ಗಾಂಧಿ ಹೆಸರು ಬಳಸಿಕೊಳ್ಳಲು ರಾಹುಲ್‌ಗೆ ಯಾವುದೇ ಹಕ್ಕಿಲ್ಲ, ಭಾರಿ ವಿವಾದ ಸೃಷ್ಟಿಸಿದ ನಾಯಕನ ಹೇಳಿಕೆ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸರ್ನೇಮ್ ಗಾಂಧಿ ಬಳಸಿಕೊಳ್ಳಲು ಯಾವುದೇ ಹಕ್ಕಿಲ್ಲ ಎಂದು ಸಿಪಿಐ(ಎಂ) ಬೆಂಬಲಿತ ನಾಯಕ ಹೇಳಿಕೆ ನೀಡಿದ್ದಾರೆ. ರಾಹುಲ್ ಇದೀಗ ನಾಲ್ಕನೇ ದರ್ಜೆ ನಾಗರೀಕರ ಮಟ್ಟಕ್ಕೆ ಇಳಿದಿದ್ದಾರೆ ಎಂದಿದ್ದಾರೆ. ಇದರ ಜೊತೆಗೆ ರಾಹುಲ್ ನೆಹರೂ ಕುಟಂಬದಲ್ಲೇ ಹುಟ್ಟಿದಾರಾ ಎಂದು ಪ್ರಶ್ನಿಸಿದ್ದಾರೆ. ಇದೀಗ ಬಾರಿ ವಿವಾದಕ್ಕೆ ಕಾರಣಾಗಿದೆ.
ತಿರುವನಂತಪುರಂ(ಏ.23) ಲೋಕಸಭಾ ಚುನಾವಣೆ ಗೆಲುವಿಗೆ ನಾಯಕರು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇದು ಹಲವು ಬಾರಿ ಎಲ್ಲೆ ಮೀರುತ್ತಿದೆ. ಇದೀಗ ರಾಹುಲ್ ಗಾಂಧಿ ವಿರುದ್ಧ CPI(M)ಬೆಂಬಲಿತ ನಾಯಕ ಪಿವಿ ಅನ್ವರ್ ಹೇಳಿಕೆ ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ತಮ್ಮ ಹೆಸರಿನ ಮುಂದೆ ಬಳಸುತ್ತಿರುವ ಗಾಂಧಿ ಸರ್ನೇಮ್ ಬಳಸಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ನೆಹರೂ ಕುಟುಂಬದಲ್ಲೇ ಹುಟ್ಟಿದ್ದಾರ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಡಿಎನ್ಎ ಪರೀಕ್ಷಿಸಬೇಕು ಎಂದಿದ್ದಾರೆ.
ಮಲಪ್ಪುರಂನಲ್ಲಿ ಸಿಪಿಐ(ಎಂ) ಆಯೋಜಿಸಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪಿವಿ ಅನ್ವರ್, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಹುಲ್ ಗಾಂಧಿ ಇದೀಗ ನಾಲ್ಕನೇ ದರ್ಜೆ ನಾಗರೀಕರಾಗಿ ವರ್ತಿಸುತ್ತಿದ್ದಾರೆ. ರಾಹುಲ್ ಗಾಂಧಿ ನೆಹರೂ ಕುಟುಂಬದಲ್ಲೇ ಹುಟ್ಟಿದ್ದಾರ? ನನಗೆ ಈ ಕುರಿತು ಅನುಮಾನವಿದೆ. ಡಿಎನ್ಎ ಪರೀಕ್ಷಿಸಬೇಕು ಎಂದು ಪಿವಿ ಅನ್ವರ್ ಹೇಳಿದ್ದಾರೆ.
ದೇಶವನ್ನೇ ಕತ್ತಲಲ್ಲಿಟ್ಟ ಇಂದಿರಾ ನಮ್ಮನ್ನೂ ಜೈಲಿಗೆ ಹಾಕಿದ್ದರು, ರಾಹುಲ್ ಗಾಂಧಿಗೆ ಪಿಣರಾಯಿ ತಿರುಗೇಟು!
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಗಂಭೀರ ರಾಜಕಾರಣಿ ಅಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಹುಲ್ ಗಾಂಧಿ ಮಾತನ್ನು ಯಾರು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಪಿಎ ಅನ್ವರ್ ಹೇಳಿಕೆಯನ್ನ ಕೇರಳ ಕಾಂಗ್ರೆಸ್ ಖಂಡಿಸಿದೆ. ರಾಹುಲ್ ಗಾಂಧಿ ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆ. ಬಡವರ ಕಷ್ಟಗಳನ್ನು ಕೇಳಿದ್ದಾರೆ. ಸಮಸ್ಯೆಗಳನ್ನು ಅವರ ಮಟ್ಟಕ್ಕಿಳಿದು ಅರ್ಥ ಮಾಡಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ದೇಶಾದ್ಯಂತ ಓಡಾಡಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಿಪಿಎಂ ಹಾಗೂ ಬೆಂಬಲಿತ ನಾಯಕರು ರಾಹುಲ್ ಗಾಂಧಿ ವೈಯುಕ್ತಿಕ ವಿಚಾರಗಳನ್ನು ಪ್ರಶ್ನಿಸುತ್ತಿದೆ. ಇದಕ್ಕೆ ಜನರು ಉತ್ತರ ನೀಡಲಿದ್ದಾರೆ ಎಂದು ಕೇರಳ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಮುಸ್ಲಿಂ ಲೀಗ್ ವೋಟ್ ಬೇಕು, ಧ್ವಜ ಬೇಡ್ವಾ? ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್!
ರಾಹುಲ್ ಗಾಂಧಿ ಇತ್ತೀಚೆಗೆ ಕೇರಳ ಚುನಾವಣಾ ಪ್ರಚಾರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹರಿಹಾಯ್ದಿದ್ದರು. ಪಿಣರಾಯಿ ವಿಜಯನ್, ಬಿಜೆಪಿ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಯಾವುದೇ ಆರೋಪ ಮಾಡುವುದಿಲ್ಲ. ಕಾರಣ ಕೇಂದ್ರದ ತನಿಖಾ ಸಂಸ್ಥೆಗಳ ಭಯವಿದೆ. ಇತ್ತ ಮೋದಿ ಕೂಡ ಪಿಣರಾಯಿ ವಿಜಯನ್ ವಿರುದ್ದ ಮಾತನಾಡುತ್ತಿಲ್ಲ. ಬಿಜೆಪಿ ಹಾಗೂ ಸಿಪಿಎಂ ಕೇರಳದಲ್ಲಿ ಕೈಜೋಡಿಸಿದೆ ಎಂದು ಆರೋಪಿಸಿದ್ದರು.