ಕೊರೋನಾ ಹೋರಾಟಕ್ಕೆ ಭಾರತವೇ ಮಾದರಿ ಅತ್ಯುತ್ತಮ ನಾಯಕತ್ವ,ಅತೀ ದೊಡ್ಡ ಅಭಿಯಾನ ಜಾಗೃತಿ, ವೈರಸ್ ವಿರುದ್ಧ ಹೋರಾಡಲು ಹೊಸ ನೀತಿ ಭಾರತಕ್ಕೆ ವಿಶ್ವನಾಯಕರಿಂದ ಮನ್ನಣೆ  

ನವದೆಹಲಿ(ಮಾ.22): ಕೊರೋನಾ ವೈರಸ್(Coronavirus) ವಕ್ಕರಿಸಿದ ಬಳಿಕ ವಿಶ್ವವೇ ತತ್ತರಿಸಿದೆ. ಇದೀಗ ಮೂರು ವರ್ಷಗಳೇ ಉರುಳಿದೆ. ಆದರೆ ಕೊರೋನಾ ಮಾತ್ರ ಅಂತ್ಯಗೊಂಡಿಲ್ಲ. ಹಲವು ದೇಶಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿದೆ. ಇದರ ನಡುವೆ ಭಾರತ(India) ಅತ್ಯಂತ ಯಶಸ್ವಿಯಾಗಿ ಕೊರೋನಾ ವಿರುದ್ಧ ಹೋರಾಟ ನಡೆಸಿದೆ. ಇದಕ್ಕೆ ಮುಖ್ಯ ಕಾರಣ ಲಸಿಕೆ(Vaccination Drive). ಭಾರತದ ಕೊರೋನಾ ಹೋರಾಟ ಹಾಗೂ ಲಸಿಕಾ ಅಭಿಯಾನಕ್ಕೆ ಇದೀಗ ವಿಶ್ವದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಲ್‌ಗೇಟ್ಸ್ ಹಾಗೂ ಮೇಲಿಂದಾ ಫೌಂಡೇಶನ್ ಆಯೋಜಿಸಿ ಅಕ್ಷಾ ಕಾರ್ಯಕ್ರಮದಲ್ಲಿ ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ಏಷ್ಯನ್ ಡೆವಲಪ್‌ಮೆಂಟ್ಸ್ ಬ್ಯಾಂಕ್, ಫೌಂಡೇಶನ್ ಅಧ್ಯಕ್ಷರು ಸೇರಿದಂತೆ ಹಲವು ವಿಶ್ವದ ನಾಯಕರು ಭಾರತದ ಕೊರೋನಾ ಹೋರಾಟವನ್ನು ಇತರ ದೇಶಗಳು ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೇ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ: ಡಾ. ಸಿ ಎನ್ ಮಂಜುನಾಥ್

ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದಿಂದ ಕಲಿಯಬೇಕಾದ ಪಾಠಗಳ ಕುರಿತು ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುನಿಸೆಫ್‌ನ ಪ್ರಾದೇಶಿಕ ಮುಖ್ಯಸ್ಥರು, ಖಾಸಗಿ ನಿಧಿಸಂಗ್ರಹಣೆ ಅಧಿಕಾರಿ ಯುಸುಮಾಸಾ ಕಿಮುರಾ ಭಾರತವನ್ನು ಅಭಿನಂದಿಸಿದ್ದಾರೆ. ಭಾರತವೇ ಲಸಿಕೆ ಉತ್ಪಾದಿಸಿ ತನ್ನ ನಾಗರೀಕರನ್ನು ಕೊರೋನಾದಿಂದ ದೂರವಿಟ್ಟಿದೆ. ಇದರ ಜೊತೆಗೆ ಇತರ ದೇಶಗಳಿಗೂ ಲಸಿಕೆ ನೀಡಿ ನೆರವಾಗಿದೆ ಎಂದು ಯುಸುಮಾಸಾ ಕಿಮುರಾ ಹೇಳಿದ್ದಾರೆ.

Scroll to load tweet…

;

ಅತೀ ದೊಡ್ಡ ದೇಶದಲ್ಲಿ ಅತೀ ದೊಡ್ಡ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಭಾರತ ವಿಶ್ವಕ್ಕೆ ಲಸಿಕಾ ಅಭಿಯಾನ ಯಾವ ರೀತಿ ನಡೆಸಬೇಕು ಅನ್ನೋದನ್ನು ತೋರಿಸಿಕೊಟ್ಟಿದೆ. ಇದರ ಜೊತೆಗೆ ವಿಶ್ವಕ್ಕೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಧೈರ್ಯ ತುಂಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿದಿ ಡಾ ರೋಡ್ರಿಗೋ ಆಫ್ರಿನ್ ಹೇಳಿದ್ದಾರೆ.

ಒಮಿಕ್ರೋನ್‌ ಅಂತಿಮವೂ ಅಲ್ಲ, ಸೌಮ್ಯವೂ ಅಲ್ಲ, WHO ಎಚ್ಚರಿಕೆ!

ಭಾರತ ಇತರ ದೇಶಗಳಿಗೆ ಮಾದರಿಯಾಗಿದೆ. ಕೊರೋನಾ ಹೋರಾಟದಲ್ಲಿ ಅನುಸರಿಸಬೇಕಾದ ದಾರಿಗಳನ್ನು ನೀಡಿದೆ. ಭಾರತದಿಂದ ಕಲಿತ ಪಾಠಗಳನ್ನು ವಿಶ್ವ ಅಳವಡಿಸಿಕೊಳ್ಳಬೇಕು. ಈ ಮೂಲಕ ಶಕ್ತವಾಗಿ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯ ಎಂದು ವಿಶ್ವ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಟೆಕೋ ಕೊನಿಶಿ ಹೇಳಿದ್ದಾರೆ.

Scroll to load tweet…

ಭಾರತ ಕೊರೋನಾ ವಿರುದ್ಧ ದಿಟ್ಟ ಹೋರಾಟ ನೀಡಿ ಯಶಸ್ಸು ಸಾಧಿಸಲು ಕೆಲ ಪ್ರಮುಖ ಕಾರಣಗಳಿವೆ. ದಿಟ್ಟ ನಾಯಕತ್ವ, ವಿಜ್ಞಾನದಲ್ಲಿ ನಾವಿನ್ಯತೆ, ಹೊಸ ಆವಿಷ್ಕಾರಗಳನ್ನು ತ್ವರಿತವಾಗಿ ಬಳಸಿಕೊಳ್ಳುವುದು, ದೂರ ದೃಷ್ಟಿಯ ಯೋಜನೆಗಳು ಪ್ರಮುಖ ಕಾರಣವಾಗಿದೆ. ಈ ವಿಚಾರಗಳನ್ನು ಎಲ್ಲೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಬಿಲ್ ಗೇಟ್ಸ್ ಹಾಗೂ ಮಿಲಿಂದ ಫೌಂಡೇಶನ್ ಅಧ್ಯಕ್ಷ ಡಾ ಕ್ರಿಸ್ ಎಲಿಯಾಸ್ ಹೇಳಿದ್ದಾರೆ.

Scroll to load tweet…

22 ತಿಂಗಳಲ್ಲಿ ಮೊದಲ ಬಾರಿ 100ಕ್ಕಿಂತ ಕಮ್ಮಿ ಕೇಸ್‌
ರಾಜ್ಯದಲ್ಲಿ 22 ತಿಂಗಳ ಬಳಿಕ ಕೊರೋನಾ ಸೋಂಕು ಪ್ರಕರಣಗಳು 100ಕ್ಕಿಂತ ಕಡಿಮೆಯಾಗಿವೆ.ಸೋಮವಾರ 71 ಮಂದಿ ಸೋಂಕಿತರಾಗಿದ್ದು, 2 ಸೋಂಕಿತರು ಸಾವಿಗೀಡಾಗಿದ್ದಾರೆ. 173 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1891 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 20 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.0.3ರಷ್ಟುದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು ಏಳು ಸಾವಿರ ಇಳಿಕೆಯಾಗಿದ್ದು, ಈ ಹಿನ್ನೆಲೆ ಹೊಸ ಸೋಂಕಿತರ ಸಂಖ್ಯೆ 39 ತಗ್ಗಿವೆ. (ಭಾನುವಾರ 109 ಪ್ರಕರಣ, ಎರಡು ಸಾವು).

2020 ಮೇ 21ರಂದು 67 ಸೋಂಕು ಪ್ರಕರಣಗಳು ದಾಖಲಾಗಿದ್ದವು. ನಂತರ ಮೊದಲ, ಎರಡನೇ ಹಾಗೂ ಮೂರನೇ ಅಲೆಯಲ್ಲಿ ಏರಿಳಿಕೆಯಾಗುತ್ತಾ ಒಂದೇ ದಿನ ಬರೋಬ್ಬರಿ 50 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸ್ತುತ 22 ತಿಂಗಳ ಬಳಿಕ 100ಕ್ಕಿ ಕಡಿಮೆಯಾಗಿವೆ. ರಾಜ್ಯದ 20 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರು 53, ಹೊರತು ಪಡಿಸಿ 9 ಜಿಲ್ಲೆಗಳಲ್ಲಿ ಬೆರಳೆಣಿಕೆ ಪ್ರಕರಣಗಳು ವರದಿಯಾಗಿವೆ.