ಜಾರ್ಖಂಡ್ ವಿಧಾನಸಭಾ ಚುನಾವಣೆ: 43 ಕ್ಷೇತ್ರಗಳಲ್ಲಿ ಶೇ.66 ಮತದಾನ
ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಶೇ.66ರಷ್ಟು ಮತದಾನವಾಗಿದೆ. ಉಳಿದ 37 ಸ್ಥಾನಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದೆ.
ರಾಂಚಿ: ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ಬುಧವಾರ ನಡೆದ ಮತದಾನ ಶಾಂತಿಯುತವಾಗಿ ಸಂಪನ್ನಗೊಂ ಡಿದೆ. 43 ಸ್ಥಾನಗಳಿಗೆ 683 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶೇ.66ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಈ ಬಾರಿ ಆಡಳಿತಾರೂಢ ಜೆಎಂ ಎನ್- ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಉಳಿದ 37 ಸ್ಥಾನಕ್ಕೆ ನ.20 ಮತದಾನ ನಡೆಯಲಿದೆ.
ಪ್ರಿಯಾಂಕಾ ಸ್ಪರ್ಧಿಸಿರುವ ವಯನಾಡಲ್ಲಿ ಶೇ.65 ಮತ
ವಯನಾಡು: ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಶೇ.65ರಷ್ಟು ಮತದಾನವಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜಕೀಯ ಪಾದಾರ್ಪಣೆ ಮಾಡಿದ ಕ್ಷೇತ್ರದಲ್ಲಿ ಈ ಬಾರಿ ಮತದಾನ ಪ್ರಮಾಣ ಇಳಿಕೆಯಾಗಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಶೇ.74 ರಷ್ಟು ಮತದಾನವಾಗಿದ್ದರೆ, 2019ರಲ್ಲಿ ಶೇ. 80ರಷ್ಟು ಮತದಾನವಾಗಿತ್ತು. ಪ್ರಿಯಾಂಕಾ ವಿರುದ್ದ ಬಿಜೆಪಿಯಿಂದ ನವ್ಯಾ ಹರಿದಾಸ್ ಕಣಕ್ಕೆ ಇಳಿದಿದ್ದಾರೆ.
ಬಂಗಾಳ ಬಿಟ್ಟು ಉಳಿದೆಲ್ಲೆಡೆ ಉಪಚುನಾವಣೆ ಶಾಂತಿ
ನವದೆಹಲಿ : 10 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಶೇ.55- ಶೇ.90ರವರೆಗೆ ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ಒಬ್ಬ ಟಿಎಂಸಿ ಕಾರ್ಯಕರ್ತ ಬಲಿಯಾಗಿದ್ದು, ಉಳಿದಂತೆ ಎಲ್ಲೆಡೆ ಮತದಾನ ಶಾಂತಿಯುತವಾಗಿತ್ತು. ರಾಜಸ್ಥಾನದ 7, ಬಂಗಾಳದ 6, ಅಸಾಂನ 5, ಬಿಹಾರದ 4, ಕರ್ನಾಟಕ 3, ಮಧ್ಯಪ್ರದೇಶದ 2, ಛತ್ತೀಸ್‌ಗಢ, ಗುಜರಾತ್, ಕೇರಳ, ಮೇಘಾಲಯದತಲಾ1 ಸ್ಥಾನಗಳಿಗೆ ಬುಧವಾರ ಉಪಚುನಾವಣೆ ನಡೆಯಿತು. ಮೇಘಾಲಯದ ಗನ್ ಬೆಗ್ರೆ ಕ್ಷೇತ್ರದಲ್ಲಿ ಗರಿಷ್ಠ ಶೇ.90ರಷ್ಟು ಮತದಾನ ಆಗಿದೆ.