ವಿಧವೆಗಾಗಿ ಪ್ರಾಣ ಸ್ನೇಹಿತನನ್ನೇ ಕೊಂದುಬಿಟ್ಟ! ಲೈವ್ ಮರ್ಡರ್ ಅವಳೇ ಮಾಡಿಸಿದ್ದಾ?
ಅವರಿಬ್ಬರು ಪ್ರಾಣ ಸ್ನೇಹಿತರು. ಒಂದೇ ಗ್ಲಾಸ್ನಲ್ಲಿ ವಿಸ್ಕಿ ಮಿಕ್ಸ್ ಮಾಡಿ ಕುಡಿದವರು. ಆದ್ರೆ ಅವರಿಬ್ಬರೂ ಒಂದೇ ಆಂಟಿಯನ್ನ ಪ್ರೀತಿಸುತ್ತಿದ್ರು. ಇನ್ನೂ ಆಕೆಯೋ ವಿಧವೆ. ಗಂಡ ಸತ್ತ ನಂತರ ಒಂಟಿ ಜೀವನ ನಡೆಸುತ್ತಿದ್ದಳು. ಆದ್ರೆ ಅದೇ ವಿಧವೆಯನ್ನ ಸ್ನೇಹಿತರಿಬ್ಬರೂ ಪ್ರೀತಿಸುತ್ತಿದ್ರು. ಇದೇ ಕೊಲೆಗೆ ಕಾರಣವಾಗಿದ್ದು ದುರಂತ.
ಆತ ತಂಗಿಯ ಮದುವೆ ಮಾಡಬೇಕು ಅಂತಾ ಥೇಟ್ ಮುತ್ತಣ್ಣ ಸಿನಿಮಾದ ಶಿವಣ್ಣನಂತೆ ತುತ್ತುರಿ ಹಿಡಿದು ರೆಡಿಯಾಗಿದ್ದ. ಇನ್ನೂ 2 ವಾರ ಕಳೆದ್ರೆ ತಂಗಿಯ ಮದುವೆ. ಆದ್ರೆ ಆವತ್ತೊಂದು ದಿನ ಪಾರ್ಟಿಗೆ ಅಂತ ಹೋದವನು ಹೆಣವಾಗಿಬಿಟ್ಟಿದ್ದ. ಅವನನ್ನ ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ರು.
ಅಷ್ಟೇ ಅಲ್ಲ ಅವನ ಕೊನೆಯ ಕ್ಷಣಗಳನ್ನ ವಿಡಿಯೋ ಕೂಡ ಮಾಡಿದ್ದರು. ಅಷ್ಟಕ್ಕೂ ಆ ಅಮಾಯಕ ಅಣ್ಣ ಯಾರು? ಆತನನ್ನ ಕೊಂದಿದ್ದು ಯಾರು? ಯಾಕಾಗಿ ಕೊಂದ್ರು? ಒಬ್ಬ ಅಮಾಯಕ ಆಟೋ ಡ್ರೈವರ್ನ ಲೈವ್ ಮರ್ಡರ್ ಹಿಂದಿನ ರೋಚಕ ಕಹನಿ ಇಲ್ಲಿದೆ ನೋಡಿ