ಖಾದಿ ಕುತಂತ್ರದಿಂದ ದರ್ಶನ್‌ಗೆ ಜೈಲಿಂದ ಸಂಪೂರ್ಣ ಮುಕ್ತಿ ಸಿಗುತ್ತದಾ?: ರೇಣುಕಾಸ್ವಾಮಿ ಆತ್ಮ ಅಳುತ್ತಲೇ ಇರುತ್ತದಾ?

ದರ್ಶನ್ ಗಹಗಹಿಸಿ ನಗುತ್ತಿದ್ದಾನೆ. ಮತ್ತೆ ನನ್ನನ್ನು ಜೈಲಿಗೆ ಕಳಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾನೆ. ಇನ್ಮುಂದೆ ಕಂಬಿ ಹಿಂದೆ ಬದುಕಲ್ಲ ಅನ್ನೋದು ಸದ್ಯದ ಅಜೆಂಡಾ. ಇನ್ನೊಂದು ಕಡೆ ಖಾಕಿ ಕುದಿಯುತ್ತಿದೆ. ಸುಪ್ರೀಂಗೆ ಹೋಗಲು ಒದ್ದಾಡುತ್ತಿದೆ.

First Published Nov 14, 2024, 4:29 PM IST | Last Updated Nov 14, 2024, 4:29 PM IST

ದರ್ಶನ್ ಗಹಗಹಿಸಿ ನಗುತ್ತಿದ್ದಾನೆ. ಮತ್ತೆ ನನ್ನನ್ನು ಜೈಲಿಗೆ ಕಳಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾನೆ. ಇನ್ಮುಂದೆ ಕಂಬಿ ಹಿಂದೆ ಬದುಕಲ್ಲ ಅನ್ನೋದು ಸದ್ಯದ ಅಜೆಂಡಾ. ಇನ್ನೊಂದು ಕಡೆ ಖಾಕಿ ಕುದಿಯುತ್ತಿದೆ. ಸುಪ್ರೀಂಗೆ ಹೋಗಲು ಒದ್ದಾಡುತ್ತಿದೆ. ಇದರ ಪರಿಣಾಮ ಏನಾಗಲಿದೆ ? ದಾಸನಿಗೆ ಜೈಲಿಂದ ಸಂಪೂರ್ಣ ಮುಕ್ತಿ ಸಿಗುತ್ತದಾ ? ಖಾದಿ ಖದರ್ ಇದಕ್ಕೆ ಸಾಥ್ ನೀಡುತ್ತದಾ ? ರೇಣುಕಾ ಆತ್ಮ ಅಳುತ್ತಲೇ ಇರುತ್ತದಾ ? ಆ ಖತರ್ನಾಕ್ ಕಥನ ನಿಮ್ಮ ಮುಂದೆ. ದರ್ಶನ್ ಜೈಲಿನಿಂದ ಮುಕ್ತಿ ಪಡೆದಿದ್ದಾನೆ. ಅದು ತಾತ್ಕಾಲಿಕ. ಆಪರೇಶನ್, ವಿಶ್ರಾಂತಿ...ಇತ್ಯಾದಿ ಮುಗಿದ ನಂತರ ಬಳ್ಳಾರಿ ಜೈಲಿಗೆ ಮತ್ತೆ ಶಿಫ್ಟ್ ಆಗುತ್ತಾನೆ. ಇದು ಜನಸಾಮಾನ್ಯರ ನಂಬಿಕೆ. 

ಆದರೆ ದರ್ಶನ್ ಅಂಡ್ ಗ್ಯಾಂಗ್ ಅನಾಯಾಸವಾಗಿ ಸಿಕ್ಕ ಜಾಮೀನನ್ನು ಸುಮ್ಮನೆ ಬಿಡುತ್ತಾದಾ ? ಸಾಧ್ಯವೇ ಇಲ್ಲ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಣಲಿದೆ. ‘ಒಮ್ಮೆ ಹೊರ ಬಂದಿದ್ದೇನೆ...ಮತ್ತೆ ಸೊಳ್ಳೆ ಕಚ್ಚಿಸಿ ಕೊಳ್ಳಲು ನಾನ್ ರೆಡಿ ಇಲ್ಲ...’ ಇದು ದಾಸನ ಖಡಕ್ ನಿರ್ಧಾರ. ವಾಟ್...? ಅದು ಹೇಗಪ್ಪಾ ? ಜನ ಕೇಳುತ್ತಿದ್ದಾರೆ. ಉತ್ತರ ನಾವು ಕೊಡುತ್ತಿದ್ದೇವೆ. ಮಧ್ಯಂತರ ಜಾಮೀನು...ಅನಾರೋಗ್ಯ...ಸರ್ಜರಿ...ಬೆನ್ನು ನೋವು...ಲಕ್ವಾ...ಈ ರೀತಿಯ ಕಾರಣ ಕೊಟ್ಟು...ವಕೀಲರು ಜಾಮೀನು ಕೊಡಿಸಿದರು. ಕೆಲವೇ ದಿನಗಳಲ್ಲಿ ಆಪರೇಶನ್ ಮಾಡದಿದ್ದರೆ ಜೀವಕ್ಕೇ ಕುತ್ತು ಬರುತ್ತದೆಂದು ವಾದಿಸಿದರು. ಲಕ್ವಾ ಹೊಡೆದರೆ ದರ್ಶನ್ ಜೀವನದ ಗತಿ ಏನೆಂದು ವಿವರಿಸಿದರು. 

ಮಾನವೀಯತೆ ಆಧಾರದ ಮೇಲೆ ಬೇಲ್ ಕೊಡಿ ಎಂದರು. ಕೊನೆಗೂ ಜಾಮೀನು ದಕ್ಕಿತು. ದರ್ಶನ್ ನಿರಾಳ. ಆದರೆ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ಖಾಕಿ ಪಡೆ ಮಾತ್ರ ಧಗಧಗಿಸಿಬಿಟ್ಟಿತು...ಈಗಲೂ ಅದು ಕೆಂಡ ಕಾರುತ್ತಿದೆ. ದರ್ಶನ್ಗೆ ಅನಾರೋಗ್ಯ ಇದೆ. ಆದರೆ ಅದು ಎಷ್ಟು ತೀವ್ರವಾಗಿದೆ...ಆಪರೇಶನ್ ಅಗತ್ಯ ಇದೆಯಾ ? ಇದ್ದರೂ ಅದನ್ನು ಬಳ್ಳಾರಿ ಆಸ್ಪತ್ರೆಯಲ್ಲಿಯೇ ಗುಣ ಮಾಡಲು ಆಗುವುದಿಲ್ಲವಾ ? ಖಾಸಗಿ ಆಸ್ಪತ್ರೆ ನಿಜಕ್ಕೂ ಬೇಕಾ ? ಇದನ್ನೆಲ್ಲ ಪರಿಶೀಲನೆ ಮಾಡಲು ಮೆಡಿಕಲ್ ಬೋರ್ಡ್ ಸ್ಥಾಪಿಸಿ...ಇನ್ನೊಂದು ಅನಾರೋಗ್ಯದ ಮಾಹಿತಿ ಪಡೆದು...ನಂತರ ಬೇಲ್ ಕೊಡಬೇಕೊ ಬೇಡವೊ ಎನ್ನುವುದನ್ನು ತೀರ್ಮಾನಿಸಿ... ಹೀಗಂತ ಎಸ್ಪಿಪಿ ಪ್ರಸನ್ನಕುಮಾರ್ ವಾದಿಸಿದರು. 

ಅದಕ್ಕೆ ಮನ್ನಣೆ ಸಿಗಲಿಲ್ಲ. ಬಳ್ಳಾರಿ ಜೈಲಿನಿಂದ ದರ್ಶನ್ ಹೊರ ಬಂದ. ದೀಪಾವಳಿ ಹೋಳಿಗೆ ತಿಂದ. ಒಂದು ದಿನದ ನಂತರ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಅಡ್ಮಿಟ್ ಆದ. ಪ್ರಾಥಮಿಕ ದೈಹಿಕ ಪರೀಕ್ಷೆ ನಡೆದವು. ಆ ವರದಿ ನೋಡಿ ಸರ್ಜರಿ ಬೇಕಾ ಬೇಡವಾ ಎಂದು ತೀರ್ಮಾನಿಸಲು ವೈದ್ಯರು ನಿರ್ಧರಿಸಿದರು. ಬೆನ್ನು ನೋವಿಗೆ ಫಿಸಿಯೋಥೆರಪಿ ನೀಡಿದರು. ಮಾತ್ರೆ ಹಾಗೂ ವ್ಯಾಯಾಮದಿಂದ ಗುಣ ಮಾಡಲು ಹೊರಟರು. ಜೊತೆಗೆ ಸರ್ಜರಿ ಬೇಡ ಅನ್ನೋದು ದಚ್ಚು ಹಾಗೂ ಕುಟುಂಬದ ಬೇಡಿಕೆಯಾಗಿತ್ತು. ಈಗ ಎರಡು ವಾರ ಮುಗಿದಿದೆ. ವೈದ್ಯರಿಂದ ಯಾವುದೇ ಮಾಹಿತಿ ಇಲ್ಲ...ಎಲ್ಲವೂ ಸಸ್ಪೆನ್ಸ್ ಆಫ್ ಬಿಜಿಎಸ್... ಯಾವಾಗ ದಾಸನಿಗೆ ಬೇಲ್ ಸಿಕ್ಕಿತೊ...ಖಾಕಿ ಪಡೆ ಮೈ ಕೊಡವಿ ಎದ್ದು ನಿಂತಿತು. ದರ್ಶನ್ ಇದ್ಯಾವುದೋ ಹೊಸ ಆಟ ಆಡುತ್ತಿದ್ದಾನೆ ಎನ್ನುವ ಅನುಮಾನ ಮೂಡಿತ್ತು. 

Video Top Stories