ಕಾಂಗ್ರೆಸ್ಸಿನಗರನ್ನು ಹುಡುಕಿ ಹೊಡೆಯುವ ಕಾಲ ಬರುತ್ತದೆ: ಈಶ್ವರಪ್ಪ
ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಇದು ಹಿಂದು ಧರ್ಮದ ವಿಶೇಷತೆ, ಸರ್ವ ಧರ್ಮಕ್ಕೂ ಗೌರವ ಕೊಡಬೇಕು ಎನ್ನುವ ಸಹಿಷ್ಣುತೆ. ಪಾಕಿಸ್ತಾನದಲ್ಲಿ ಇದ್ದ ಹಿಂದುಗಳ ಸಂಖ್ಯೆ ದಿನ ದಿನೇ ಕಡಿಮೆಯಾಗುತ್ತಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿವೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ(ನ.15): ರಾಜ್ಯದಲ್ಲಿ ವಕ್ಫ್ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಇದು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಸಾಧು ಸಂತರು, ಧರ್ಮಾಭಿಮಾನಿಗಳ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಕಾಂಗ್ರೆಸ್ಸಿನಗರನ್ನು ಹುಡುಕಿ ಹುಡುಕಿ ಹೊಡೆಯುವ ಕಾಲ ಬರುತ್ತದೆ. ಮುಸ್ಲಿಂರ ರೀತಿ ಮಹಾಪುರಷರಿಗೆ ಅಪಮಾನ ಮಾಡುವವರನ್ನೂ ರಸ್ತೆ ರಸ್ತೆಯಲ್ಲಿ ಕೊಲ್ಲುವ ದಿನ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ ನಾಡಿ, ರಾಜ್ಯದಲ್ಲಿ ಪ್ರತಿನಿತ್ಯ ಮುಸ್ಲಿಂ ಅನ್ಯಾಯ ಹೆಚ್ಚುತ್ತಿದೆ. ಮುಸಲ್ಮಾನರು ಮಾಡುವ ಅಚಾತುರ್ಯ ಗಳನ್ನೆಲ್ಲಾ ಗಮನಿಸಿದರೂ ಕೂಡ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ. ರೈತರು, ದೇವಸ್ಥಾನ, ಸಾಧು ಸಂತರ, ಪುರಾತತ್ವ ಇಲಾಖೆ ಆಸ್ತಿಗಳನ್ನೆಲ್ಲಾ ವಕ್ಸ್ ಆಸ್ತಿ ಅಂತ ಮಾಡಿಕೊಂಡಿದ್ದಾರೆ. ವಕ್ಸ್ ಆಸ್ತಿ ಆಗಲು ಬಿಡಲ್ಲ ಅಂತಾ ಒಬ್ಬ ಕಾಂಗ್ರೆಸ್ಸಿಗನ ಬಾಯಲ್ಲಿ ಬರಲಿಲ್ಲ. ನೋಟಿಸ್ ವಾಪಸ್ ತಗೊಂಡಿದ್ದೇವೆ ಅಂತ ಸಿಎಂ ಸಮರ್ಥನೆ ನೀಡುತ್ತಾರೆ ಎಂದು ಹರಿಹಾಯ್ದರು.
ಖಂಡ್ರೆ ಸಾಹೇಬ್ರ ಘನಂದಾರಿ ಐಡಿಯಾ, ಪಶ್ಚಿಮಘಟ್ಟದ ನದಿ ನೀರು ಕುಡೀತಾ ಇದ್ರೆ ಬೀಳುತ್ತೆ ಗ್ರೀನ್ ಸೆಸ್!
ಇಸ್ಲಾಮೀಕರಣಕ್ಕೆ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಕಾಂಗ್ರೆಸ್ ನಾಯಕನೊಬ್ಬ ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ದರಿದ್ದರು ಅಂತಾ ಹೇಳಿದರೂ, ಈ ಬಗ್ಗೆ ಒಬ್ಬ ಕಾಂಗ್ರೆಸ್ ನಾಯಕ ಖಂಡನೆ ಮಾಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಕೇಳಿದರೆ ಹಾರಿಕೆ ಉತ್ತರ ಕೊಡುತ್ತಿ ದ್ದಾರೆ. ಇವರೇನು ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಎಂದು ಪ್ರಶ್ನಿಸಿದರು.
ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಇದು ಹಿಂದು ಧರ್ಮದ ವಿಶೇಷತೆ, ಸರ್ವ ಧರ್ಮಕ್ಕೂ ಗೌರವ ಕೊಡಬೇಕು ಎನ್ನುವ ಸಹಿಷ್ಣುತೆ. ಪಾಕಿಸ್ತಾನದಲ್ಲಿ ಇದ್ದ ಹಿಂದುಗಳ ಸಂಖ್ಯೆ ದಿನ ದಿನೇ ಕಡಿಮೆಯಾಗುತ್ತಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿವೆ. ಹಿಂದುಗಳ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದು ಸಮಾಜ ದಂಗೆ ಎದ್ದರೆ ಈ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಮುಡಾ ಕುರಿತು ಲೋಕಾದ್ದು ದಿಕ್ಕು ತಪ್ಪಿಸುವ ತನಿಖೆ: ವಿಜಯೇಂದ್ರ
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಶ್ರೀಕಾಂತ್, ಶಿವಾಜಿ, ಬಾಲು, ಶಂಕರ ನಾಯ್ಕ, ಮೋಹನ್, ರಾಜಯ್ಯ, ಕಾಚನಕಟ್ಟೆ ಸತ್ಯನಾರಾಯಣ ಇದ್ದರು.
ಕಾಂಗ್ರೆಸ್ ಸರ್ಕಾರದಲ್ಲಿ ನೇರವಾಗಿಯೇ ದಲಿತರ ಹಣ ನುಂಗಿ ನೀರು ಕುಡಿದಿದ್ದಾರೆ. ಭ್ರಷ್ಟ ಒಬ್ಬ ಬೇಲ್ ಮೇಲೆ ಹೊರಗಿದ್ದಾನೆ. ಅಂತಹವನನ್ನು ಸಚಿವ ಸಂಪುಟಕ್ಕೆ ತಗೊಳ್ಳುತ್ತೀವಿ ಅಂದ್ರೆ ಏನು ಹೇಳೋದು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತದೆ. ಹಿಂದುಗಳ ಪರವಾಗಿ ಇರುವವರಿಗೆ ಮತ ಹಾಕಿ ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.