ಡೆಹ್ರಾಡೂನ್(ಜು.10): ಉತ್ತರಾಖಂಡ್‌ನಲ್ಲಿ ಇನ್ನು ಚೈನೀಸ್ ವಸ್ತು, ಸಾಮಾಗ್ರಿ, ಸೇವೆಗಳನ್ನು ಬಳಸುವುದಿಲ್ಲ ಎಂದು ಅಲ್ಲಿನ ಸಿಎಂ ತ್ರುವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ನಡೆದ ದಾಳಿಯ ನಂತರ ಜನರಲ್ಲಿ ಚೀನಾ ವಿರೋಧಿ ಮನೋಭಾವ ಹೆಚ್ಚುತ್ತಿದ್ದು, ಜನರೇ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ. ಕೆಂದ್ರ ಸರ್ಕಾರವೂ ದೇಶಿಯ ವಸ್ತುಗಳ ಬಳಕೆಗೆ ಒತ್ತು ನೀಡಿದ್ದು, ಈ ಸಂದರ್ಭ ಉತ್ತರಾಖಂಡ್ ಸಿಎಂ ಮಹತ್ವದ ತೀರ್ಮಾನ ತಿಳಿಸಿದ್ದಾರೆ.

ಕೊರೋನಾ ಮಧ್ಯೆ ಭೀಕರ ಪ್ರವಾಹ: ಎಲ್ಲವೂ ನಾಶ, ಇನ್ನೇನೂ ಉಳಿದಿಲ್ಲ: ಬೆಚ್ಚಿ ಬೀಳಿಸಿದೆ ದೃಶ್ಯ!

ಚೀನಾ ವಸ್ತುಗಳನ್ನು ಬಳಸದಿರುವ ನಿರ್ಧಾರವನ್ನು ನಾವು ಈಗಾಗಲೇ ಮಾಡಿದ್ದೇವೆ ಎಂದು ಹೇಳಿದ್ದಾರೆ. ಕೇಂದ್ರ 59 ಚೀನಾ ಮೊಬೈಲ್ ಎಲ್ಪಿಕೇಷನ್ ಬ್ಯಾನ್ ಮಾಡಿದ ನಂತರ ದೇಶೀಯ ಮೊಬೈಲ್ ಆfಯಪ್ ಬಳಕೆ ಹೆಚ್ಚಾಗಿದೆ ಎಂದಿದ್ದಾರೆ.

ದೇಶೀ ವಸ್ತು ನಿಲ್ಲಿಸುವ ಪ್ರಧಾನಿ ನಿರ್ಧಾರವನ್ನು ಹೊಗಳಿದ ಸಿಎಂ, ಕೊರೋನಾ ಸಂದರ್ಭದಲ್ಲಿ ದೇಶ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಪ್ರಧಾನಿಯ ನಿರ್ಧಾರಕ್ಕೆ ಜಗತ್ತಿನೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದಿದ್ದಾರೆ.

ರಾಜನಾಥ್ ಸಿಂಗ್ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ಶುಭ ಕೋರಿದ ಗೌಡರು: ಹೀಗಿತ್ತು ಪ್ರತಿಕ್ರಿಯೆ!

ಆರ್ಥಿಕತೆ ಮೇಲೆ ಕೊರೋನಾ ವೈರಸ್‌ನಿಂದ ಬೀಳುವ ಹೊಡೆತದ ವಿರುದ್ಧ ಈಗಾಗಲೇ ಕೆಲವು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಾಗಿದೆ ಎಂದಿದ್ದಾರೆ.

ಕೊರೋನಾ ವೈರಸ್ ಭಾರತಕ್ಕೆ ಕಾಳಿಡುವ ಮುನ್ನ ನಮ್ಮ ದೇಶದಲ್ಲಿ ಪಿಪಿಇ ಕಿಟ್‌ಗಳನ್ನು ತಯಾರಿಸುತ್ತಿರಲಿಲ್ಲ. ಆದರೆ ಈಗ ರಫ್ತು ಮಾಡುವಷ್ಟು ದೊಡ್ಡ ಮಟ್ಟದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿದೆ. ವೆಂಟಿಲೇಟರ್ ಹಾಗೂ ಎನ್-95 ಮಾಸ್ಕ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲಾಗುತ್ತಿದೆ ಎಂದಿದ್ದಾರೆ.

ದಿಲ್ಲಿ ಬಂಗಲೆ ಖಾಲಿ ಮಾಡಿ ಲಖನೌಗೆ ಪ್ರಿಯಾಂಕಾ ಗಾಂಧಿ!

ಉತ್ತರಾಖಂಡ್‌ನಲ್ಲಿ ಗುರುವಾರ 47 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 20 ಡೆಹ್ರಾಡೂನ್‌ನಲ್ಲಿ ಪತ್ತೆಯಾಗಿವೆ. ಒಟ್ಟು 3995 ಪ್ರಕರಣಗಳು ಪತ್ತೆಯಾಗಿವೆ.