ನವದೆಹಲಿ(ಜು.10): ಬಂಗಲೆ ತೆರವುಗೊಳಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಸಾಂತ್ಯದೊಳಗೆ ಲ್ಯೂಟನ್ಸ್‌ ದೆಹಲಿಯ ಮನೆ ಖಾಲಿ ಮಾಡಲು ಮುಂದಾಗಿದ್ದಾರೆ.

'Z ಇಲ್ಲ SPGನೂ ಇಲ್ಲ, ಬಂಗಲೆ ಖಾಲಿ ಮಾಡಿ' ಪ್ರಿಯಾಂಕಾಗೆ ಕೇಂದ್ರದ ಲೆಟರ್

ಕೊರೋನಾ ಪರಿಸ್ಥಿತಿ ಸುಧಾರಣೆಯಾದ ಬಳಿಕ ಅವರು ಲಖನೌಗೆ ತಮ್ಮ ನೆಲೆ ಸ್ಥಳಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರು ಅವರ ಅತ್ತಿಗೆ ಶೀಲಾ ಕೌಲ್‌ ನೆಲೆಸಿದ್ದ ಲಖನೌ ಮನೆಗೆ ಪ್ರಿಯಾಂಕಾ ವಾಸ್ತವ್ಯ ಬದಲಿಸಲಿದ್ದಾರೆ ಎನ್ನಲಾಗುತ್ತಿದೆ.

2015ರಲ್ಲಿ ಕೌಲ್‌ ಮೃತಪಟ್ಟಿದ್ದು, ಆ ಮನೆ ಸದ್ಯ ಖಾಲಿ ಇದೆ. ಈ ನಡುವೆ ಹಳೆಯ ವಸ್ತುಗಳನ್ನು ತಮ್ಮ ತಾಯಿ ಸೋನಿಯಾ ಅವರ 10 ಜನಪಥ್‌ ನಿವಾಸದಲ್ಲಿಡಲು ಪ್ರಿಯಾಂಕಾ ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.