ಕೊರೋನಾ ಮಧ್ಯೆ ಭೀಕರ ಪ್ರವಾಹ: ಎಲ್ಲವೂ ನಾಶ, ಇನ್ನೇನೂ ಉಳಿದಿಲ್ಲ: ಬೆಚ್ಚಿ ಬೀಳಿಸಿದೆ ದೃಶ್ಯ!
ವಿಶ್ವಾದ್ಯಂತ ಕೊರೋನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ನಲುಗಿಸಿದೆ. ಹೀಗಿರುವಾಗ ಈ ಮಹಾಮಾರಿ ಬೆನ್ನಲ್ಲೇ ಸುರಿದ ಭೀಕರ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಜಪಾನ್‌ನ ದ್ವೀಪಗಳ ಸ್ವರೂಪವೇ ಬದಲಾಗಿದೆ. ಎಲ್ಲಿ ನೋಡಿದರಲ್ಲಿ ಕುಸಿದ ಭೂಮಿ, ಕಟ್ಟಡ, ರಸ್ತೆ, ಕೊಚ್ಚಿ ಹೋದ ಮನೆ ಹಾಗೂ ವಾಹನಗಳ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಜಪಾನ್‌ನ ನೈರುತ್ಯ ದ್ವೀಪ ಕ್ಯುಶುನಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ತೀವ್ರಗೊಂಡರರೆ ಜಪಾನ್ ಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನವಿಲ್ಲ. ಇನ್ನು ಕೊರೋನಾ ವಿಚಾರದಲ್ಲಿ ಜಪಾನ್ ಸ್ಥಿತಿ ಕೊಂಚ ನಿಯಂತ್ರಣದಲ್ಲಿದೆ. ದೇಶದಲ್ಲಿ ಒಟ್ಟು 20,174 ಜನರಿಗೆ ಈ ರೋಗ ಪತ್ತೆಯಾಗಿದೆ. 17,331 ಮಂದಿ ಗುಣಮುಖರಾಗಿದ್ದು, 980 ಮಂದಿ ಸಾವನ್ನಪ್ಪಿದ್ದಾರೆ.

ಧಾರಾಕಾರ ಮಳೆಯಿಂದ ನಾಶವಾದ ಕ್ಯುಶು ದ್ವೀಪದ ಕುಮಾಮುರಾ ನಗರದ ವೈಮಾನಿಕ ನೋಟ.

ಕುಮಾಮುರಾ ಪಟ್ಟಣದಲ್ಲಿ ಸಂಪೂರ್ಣವಾಗಿ ನಾಶವಾದ ತನ್ನ ಮನೆಯ ಅವಶೇಷಗಳಡಿ ವಸ್ತುಗಳಿಗೆ ಹುಡುಕಾಟ ನಡೆಸುತ್ತಿರುವ ವ್ಯಕ್ತಿ.

ವಾಹನಗಳೂ ಕೊಚ್ಚಿ ಹೋಗಿದ್ದು, ಎಲ್ಲವೂ ನೆಲಸಮವಾಗಿದೆ.

ಕಟ್ಟಡಗಳೂ ಇಲ್ಲಿ ಸಂಪೂರ್ಣವಾಗಿ ಧ್ವಂಸಗೊಂಡಿವೆ.

ಕ್ಯುಶು ದ್ವೀಪದ ಹಿಟೊಯೋಶಿ ನಗರದಲ್ಲಿ ಭಾರೀ ಮಳೆಯಲ್ಲಿ ಹಾನಿಗೊಳಗಾದ ತಮ್ಮ ಬೈಕ್ ತಳ್ಳುತ್ತಾ ನಡೆಯುತ್ತಿರುವ ವ್ಯಕ್ತಿ.

ಕಾರೊಂದು ಪ್ರವಾಹದ ರಭಸಕ್ಕೆ ತಡೆಗೋಡೆ ಮೇಲೆ ನಿಂತಿದೆ.

ಕುಮಮುರಾದಲ್ಲಿ ಸಂಪೂರ್ಣವಾಗಿ ಕುಸಿದ ರಸ್ತೆ, ತಪಾಸಣೆ ನಡೆಸುತ್ತಿರುವ ಸರ್ಕಾರಿ ನೌಕರರು.

ಹಿಟೊಯಾಶಿಯಲ್ಲಿ ಭಾರಿ ಗಾಳಿ ಮಳೆಗೆ ದಿಕ್ಕು ತಪ್ಪಿದ ಬಸ್.

ಕುಸಿದು ಧ್ವಂಸಗೊಂಡಿರುವ ಕಟ್ಟಡದಲ್ಲಿ ಅಳಿದುಳಿದ ವಸ್ತುಗಳನ್ನು ಸರಿಪಡಿಸುತ್ತಿರುವ ಸಿಬ್ಬಂದಿ.

ಹಿಟೊಯಾಶಿಯಲ್ಲಿ ಮುರಿದ ಮನೆಯ ಅವಶೇಷಗಳ ನಡುವೆ ಕುರ್ಚಿಯಲ್ಲಿ ಕುಳಿತ ಸೈನಿಕನಂತಿರುವ ಆಟಿಕೆ..

ಪಾಳುಬಿದ್ದ ಕುಮಮುರಾ ನಗರದ ವೈಮಾನಿಕ ನೋಟ.

ಪಾಳುಬಿದ್ದ ಕುಮಮುರಾ ನಗರದ ವೈಮಾನಿಕ ನೋಟ.

ಪ್ರವಾಹದಲ್ಲಿ ಕೊಚ್ಚಿ ಹೋಗಿ ನೀರಿನಲ್ಲಿ ನಿಂತಿರುವ ವಾಹನಗಳು.

ಕುಮಾಮುರಾದಲ್ಲಿ ಸಂಪೂರ್ಣವಾಗಿ ನಾಶವಾದ ರಸ್ತೆಯ ವೈಮಾನಿಕ ನೋಟ.

ಹಿಟೊಯಾಶಿಯ ಹೋಟೆಲ್ ಮುಂದೆ ಗುಡ್ಡೆಯಾದ ಮಣ್ಣು ಮತ್ತು ಇತರ ಅವಶೇಷಗಳನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ.

ಹಿಟೊಯೋಷ್‌ನಲ್ಲಿ, ಸಂಪೂರ್ಣವಾಗಿ ನಾಶವಾದ ಮನೆಯ ಅವಶೇಷಗಳನ್ನು ಜೆಸಿಬಿಯಿಂದ ತೆರವುಗೊಳಿಸುತ್ತಿರುವ ದೃಶ್ಯ.

ಜಪಾನಿನ ಸ್ವರಕ್ಷಣೆ ಅಧಿಕಾರಿಗಳು ಹಿಟೊಯೋಶ್‌ನಲ್ಲಿ ಧ್ವಂಸಗೊಂಡ ನಗರಗಳನ್ನು ಪರಿಶೀಲಿಸುತ್ತಿದ್ದಾರೆ.

ಅಳುದುಳಿದ ಕಟ್ಟಡಗಳ ಎದುರು ಜಮೆಯಾದ ಮಣ್ಣುಮಿಶ್ರಿತ ಕೆಸರು.

ಗಾಳಿಯ ರಭಸಕ್ಕೆ ತಲೆ ಕೆಳಗಾಗಿ ಕಟ್ಟಡಕ್ಕೆ ಒರಗಿದಂತೆ ನಿಂತಿರುವ ಕಾರು ಪರಿಶೀಲಿಸುತ್ತಿರುವ ವ್ಯಕ್ತಿ.

ಅಳುದುಳಿದ ವಸ್ತುಗಳನ್ನು ಸರಿಪಡಿಸುತ್ತಿರುವ ಜನರು.

ಮಳೆ, ಪ್ರವಾಹಕ್ಕೆ ಕೊಚ್ಚಿ ಹೋದ ಬದುಕು.

ಮಳೆ, ಪ್ರವಾಹಕ್ಕೆ ಕೊಚ್ಚಿ ಹೋದ ಬದುಕು.