Asianet Suvarna News Asianet Suvarna News

ಕೋಲ್ಕತಾ ವೈದ್ಯೆ ಹತ್ಯೆ ಪ್ರತಿಭಟನೆ ಬೆನ್ನಲ್ಲೇ ನರ್ಸ್ ಎಳೆದೊಯ್ದು ಅತ್ಯಾಚಾರ ಎಸಗಿ ಕೊಲೆ!

ಕೋಲ್ಕತಾದಲ್ಲಿ ವೈದ್ಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಪ್ರಕರಣ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆ ಉತ್ತರಖಂಡದ ನರ್ಸ್ ಎಳೆದೊಯ್ದು ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

Uttarakhand nurse body found in Uttar Pradesh amid protest over Kolkata doctor death case ckm
Author
First Published Aug 16, 2024, 8:17 AM IST | Last Updated Aug 16, 2024, 8:17 AM IST

ಡೆಹ್ರಡೂನ್(ಆ.16)  ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ಕೋಲ್ಕಾತದಲ್ಲಿ ನಡೆದ ವೈದ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ವಿರುದ್ಧ ದಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಘಟನೆ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಈ ಪ್ರತಿಭಟನೆ ಆಕ್ರೋಶದ ನಡುವೆ ಉತ್ತರಖಂಡದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಶಿಫ್ಟ್ ಮುಗಿಸಿ ಮನೆಗೆ ಮರಳುತ್ತಿದ್ದ ನರ್ಸ್ ಎಳೆದೊಯ್ದು ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಘಟನೆ ವರದಿಯಾಗಿದೆ. 

ಉತ್ತರಖಂಡದ ಉಧಮಸಿಂಗ್ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯ ನರ್ಸ್ ಮೃತದೇಹ ಉತ್ತರ ಪ್ರದೇಶದ ರಾಂಪುರದಲ್ಲಿ ಪತ್ತೆಯಾಗಿತ್ತು. ಘಟನೆ ಸಂಬಂಧ ಕೂಲಿ ಕಾರ್ಮಿಕ ಧರ್ಮೇಂದ್ರ ಕುಮಾರ್‌ನನ್ನು ಜೋಧಪುರದಲ್ಲಿ ಬಂದಿಸಲಾಗಿದೆ. 25 ವರ್ಷದ ನರ್ಸ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈಕೆ ಮೇಲೆ ಧರ್ಮೇಂದ್ರ ಕುಮಾರ್ ನರ್ಸ್ ಹಿಡಿದು ಅಪಹರಿಸಲು ಯತ್ನಿಸಿದ್ದಾನೆ.

Breaking: ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಪ್ರಕರಣ, ಆ. 17ಕ್ಕೆ ದೇಶಾದ್ಯಂತ ಒಪಿಡಿ ಸೇವೆ ಬಂದ್‌!

ಕಾಮುಕನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಅಸ್ವಸ್ಥಗೊಂಡ ನರ್ಸ್‌ನನ್ನು ಬೇರೆಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಹತ್ಯೆಗೈದು ಮೃತದೇಹವನ್ನು ಉತ್ತರ ಪ್ರದೇಶದ ರಾಂಪುರದಲ್ಲಿ ಎಸೆದು ಪರಾರಿಯಾಗಿದ್ದಾನೆ. ಎಷ್ಟು ಹೊತ್ತಾದರು ಮನೆಗೆ ಬಾರದ ಪುತ್ರಿ ಕುರಿತು ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಜುಲೈ 30 ರಂದು ನರ್ಸ್ ಸಹೋದರಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಆಗಸ್ಟ್ 8 ರಂದು ನರ್ಸ್ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಸೇರಿದಂತ ಇತರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬನ ಸುಳಿವು ಪತ್ತೆಯಾಗಿತ್ತು. ಈ ಸುಳಿವಿನ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿ ಧರ್ಮೇಂದ್ರ ಕುಮಾರ್‌ನನ್ನು ಬಂಧಿಸಿದ್ದಾರೆ. 

ಉತ್ತರಖಂಡದ ಉಧಮ್ ಸಿಂಗ್ ನಗರದ ಖಾಸಗಿ ಆಸ್ಪತ್ರೆ ನರ್ಸ್ ಮೃತದೇಹ ಉತ್ತರ ಪ್ರದೇಶಲ್ಲಿ ಪತ್ತೆಯಾದರೆ, ಆರೋಪಿ ರಾಜಸ್ಥಾನದ ಜೋಧಪುರದಲ್ಲಿ ಬಂಧಿಸಲಾಗಿದೆ. ನರ್ಸ್ ಮೊಬೈಲ್ ಟ್ರಾಕ್ ಮಾಡಲಾಗಿತ್ತು. ಇದರ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ಇದೀಗ ಈ ಘಟನೆ ವಿರುದ್ಧ ಉತ್ತರಖಂಡದಲ್ಲಿ ಪ್ರತಿಭಟನೆಗಳು ಆರಂಭಗೊಂಡಿದೆ. ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಬಳಿ ಅಂಗಲಾಚಿದ್ದಾರೆ. ಪುತ್ರಿಯನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಕೋಲ್ಕತಾ ಘಟನೆ ಬೆನ್ನಲ್ಲೇ ಈ ನರ್ಸ್ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ.

ವೈದ್ಯೆಯ ಹತ್ಯೆ ಖಂಡಿಸಿ ಪ್ರತಿಭಟಿಸ್ತಿದ್ದ ಮಹಿಳೆಯರ ಬಗ್ಗೆ ಟಿಎಂಸಿ ಸಚಿವನ ಅವಹೇಳನಕಾರಿ ಮಾತು
 

Latest Videos
Follow Us:
Download App:
  • android
  • ios