ಉತ್ತರಖಂಡ ಹಿಮಸ್ಫೋಟದ ಭೀಕರತೆ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಪ್ರವಾದಲ್ಲಿ ನಾಪತ್ತೆಯಾದವರನ್ನು ಮೃತರು ಎಂದು ಘೋಷಿಸಿಲಾಗಿದೆ. ಇತ್ತ ಚಮೋಲಿ ಜಿಲ್ಲೆಯಲ್ಲಿ ಕಾಮಾಗಾರಿಗಳು ಚುರುಕುಗೊಂಡಿದೆ. ಇನ್ನು ರೇಣಿ ಗ್ರಾಮದಲ್ಲಿ ಕೊಚ್ಚಿ ಹೋದ ಸೇತುವೆಯನ್ನು ಸೇನೆ ಕೇವಲ 8 ದಿನದಲ್ಲಿ ನಿರ್ಮಿಸಿದೆ.

ಉತ್ತರಖಂಡ(ಮಾ.05): ಕಳೆದ ತಿಂಗಳು(ಫೆ07) ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹದಲ್ಲಿ 70 ಮಂದಿ ಸಾವನ್ನಪ್ಪಿದ್ದರೆ, ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ. ಭೀಕರ ಪ್ರವಾಹಕ್ಕೆ ಜಲಾಶಯ, ವಿದ್ಯುತ್ ಸ್ಥಾವರಗಳೇ ಕೊಚ್ಚಿ ಹೋಗಿತ್ತು. ಇದರಲ್ಲಿ ರೇಣಿ ಗ್ರಾಮದಲ್ಲಿನ ಸಂಪರ್ಕ ಕೊಂಡಿಯಾಗಿದ್ದ ಸೇತುವೆ ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಇಗೀಗ ಈ ಸೇತುವೆಯನ್ನು ಪುನರ್ ನಿರ್ಮಿಸಲಾಗಿದೆ.

ಉತ್ತರಖಂಡ ಪ್ರವಾಹ ದುರಂತ: ತಪೋವನದಿಂದ 160 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ!

ಭಾರತೀಯ ಸೇನೆಯ ಬಾರ್ಡರ್ ರೋಡ್ ಆರ್ಗನೈಸೇಶನ್ ರೇಣಿ ಗ್ರಾಮದಲ್ಲಿ ಬೈಲಿ ಸೇತುವೆಯನ್ನು ಕೇವಲ 8 ದಿನದಲ್ಲಿ ನಿರ್ಮಿಸಿದೆ. ಗುರುವಾರ(ಮಾ.04) ಈ ಸೇತುವೆ ಉದ್ಘಾಟನೆ ಮಾಡಲಾಗಿದ್ದು, ಸಂಚಾರಕ್ಕೆ ಮುಕ್ತವಾಗಿದೆ.

Scroll to load tweet…

ರೇಣಿಗ್ರಾಮದ ತಪೋವನದಲ ಸಮೀಪದಲ್ಲಿದ್ದ ಈ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಇದೀಗ 200 ಅಡಿ ಉದ್ದದ ಸೇತುವೆಯನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ತಪೋವನ, ರೇಣಿ ಗ್ರಾಮಸ್ಥರ ಸಂಪರ್ಕಕ್ಕೆ ಭಾರತೀಯ ಸೇನೆ ನೆರವಾಗಿದೆ.

ಹೀಗಿತ್ತು ಉತ್ತರಾಖಂಡ್ ದುರಂತದ ಕೊನೇ ಕ್ಷಣ, 49 ಸೆಕೆಂಡ್‌ನಲ್ಲಿ 10 ಮಂದಿ ನೀರುಪಾಲು!

ಈ ದುರಂತದಲ್ಲಿ ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಮೃತರೆಂದು ಘೋಷಿಸಲಾಗಿದೆ. ಇನ್ನು ತೋಪವನ ಸುರಂಗದೊಳಗಿನ ಶೋಧ ಕಾರ್ಯಚರಣೆ ನಿಲ್ಲಿಸಲಾಗಿದೆ. ಇದೀಗ ಈ ಭಾಗದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಕಟ್ಟಡ, ಇತರ ಮೂಲಭೂತ ಸೌಕರ್ಯಗಳ ಪುನರ್ ನಿರ್ಮಾಣ ಕಾರ್ಯ ಚುರುಕುಗೊಂಡಿದೆ.