ಉತ್ತರಖಂಡ ಪ್ರವಾಹ ದುರಂತ: ತಪೋವನದಿಂದ 160 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ!
ಉತ್ತರಖಂಡ ಹಿಮಸ್ಫೋಟ ಹಾಗೂ ಪ್ರವಾಹ ದುರಂತ ಸಂಭವಿಸಿ ಇಂದಿಗೆ 15 ದಿನಗಳು ಉರುಳಿವೆ. ನಿರಂತರ ಶೋಧ ಹಾಗೂ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ಇಂದು ಮತ್ತೊಂದು ಮೃತ ದೇಹ ಹೊರಕ್ಕೆ ತೆಗೆಯಲಾಗಿದ್ದು, ಇದೀಗ ಸಾವಿನ ಸಂಖ್ಯೆ 69ಕ್ಕೆ ಏರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಫೆಬ್ರವರಿ 7 ರಂದು ಸಂಭವಿಸಿದ ಹಿಮಸ್ಫೋಟ ಹಾಗೂ ಪ್ರವಾಹಕ್ಕೆ ಉತ್ತರಖಂಡದ ಚಿಮೋಲಿ ಜಿಲ್ಲೆ ತತ್ತರಿಸಿತ್ತು. ಕಳೆದ 15 ದಿನಗಳಿಂದ ಸತತ ಕಾರ್ಯಚರಣೆ ನಡೆಸುತ್ತಿದ್ದರೂ ಇನ್ನೂ ಸಂಪೂರ್ಣವಾಗಿಲ್ಲ.
ಇಂದಿನ(ಫೆ.22)ಕಾರ್ಯಚರಣೆಯಲ್ಲಿ ಮತ್ತೊಂದು ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಈ ಮೂಲಕ ಸಾವಿನ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ ಮೃತದೇಹ ತಪೋವನದಿಂದ 160 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಚಿಮೋಲಿ ಜಿಲ್ಲೆಯಿಂದ ಸಾಗುವ ಅಲಕನಂದ ನದಿ ಪೌರಿ ಗರ್ವಾಲ್ ಜಿಲ್ಲೆ ಮೂಲಕ ಸಾಗಲಿದೆ. ಇದೇ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮೃತದೇಹ ಪತ್ತೆಯಾಗಿದೆ.
SDRF ಹಾಗೂ NDRF ತಂಡಗಳು ನಿರಂತರ ಕಾರ್ಯಚರಣೆ ನಡೆಸುತ್ತಿದೆ. 70 ಮಂದಿಯನ್ನೊಳಗೊಂಡ SDRF ತಂಡ ರೇಣಿ ಗ್ರಾಮದಲ್ಲಿ ಹರಿಯುತ್ತಿರುವ ನದಿ ಹಾಗೂ ನದಿ ಪಾತ್ರದಲ್ಲಿ ಮೃತದೇಹಹಳನ್ನು ಶೋಧಿಸುತ್ತಿದೆ.
ತಪೋವನ ಸುರಂಗದಿಂದ ಇದುವರೆಗೆ 14 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ದುರಂತದಿಂದ ಒಟ್ಟು 34 ಮೃತದೇಹಳನ್ನು ಹೊರಕ್ಕೆ ತೆಗೆಯಲಾಗಿದೆ
ಶೋಧ ಹಾಗೂ ರಕ್ಷಣಾ ಕಾರ್ಯಗಳು ಸತತ 3ನೇ ವಾರಕ್ಕೆ ಕಾಲಿಟ್ಟರೂ ಇನ್ನು 135 ಮಂದಿ ನಾಪತ್ತೆಯಾಗಿದ್ದಾರೆ. NDRF ತಂಡ ಬಿಡುವಿಲ್ಲದೆ ಕಾರ್ಯಚರಣೆ ನಡೆಸುತ್ತಿದೆ.
ತಪೋವನ ಸುರಂಗದೊಳಗೆ NDRF ತಂಡ 171 ಮೀಟರ್ ಕ್ರಮಿಸಿದೆ. ಮಣ್ಣು ತುಂಬಿಕೊಂಡಿರುವ ಸುರಂಗದಲ್ಲಿ ಕಾರ್ಯಚರಣೆಗೆ ಹಲವು ಅಡ್ಡಿ ಆತಂಕಗಳನ್ನು NDRF ತಂಡ ಎದುರಿಸಿದೆ