ಉತ್ತರಪ್ರದೇಶದಲ್ಲಿ ಮೊಬೈಲ್‌ ಶೋ ರೂಂ ಅಂಗಡಿಯತ್ತ ಜನರನ್ನು ಸೆಳೆಯೋದಕ್ಕೆ ಹೊಸ ಪ್ಲಾನ್‌ ಮಾಡಿ  ಅಂಗಡಿ ಮಾಲೀಕನೇ ಬಂಧನವಾಗಿರುವ ಘಟನೆ  ನಡೆದಿದೆ.

ಉತ್ತರ ಪ್ರದೇಶ (ಮಾ.8): ಉತ್ತರಪ್ರದೇಶದ ಭದೋಹಿಯಲ್ಲಿ ಮೊಬೈಲ್‌ ಶೋ ರೂಂ ಅಂಗಡಿಯತ್ತ ಜನರನ್ನು ಸೆಳೆಯೋದಕ್ಕೆ ಹೊಸ ಪ್ಲಾನ್‌ ಮಾಡಿ ಅಂಗಡಿ ಮಾಲೀಕನೇ ಬಂಧನವಾಗಿರುವ ಘಟನೆ ನಡೆದಿದೆ. ಸಾರ್ವಜನಿಕವಾಗಿ ಶಾಂತಿ ಕದಡುವ ಆರೋಪದಡಿ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ. ಮಾತ್ರವಲ್ಲ ಅಂಗಡಿಯನ್ನು ಸೀಲ್ ಮಾಡಿ ಬೀಗ ಜಡಿಯಲಾಗಿದೆ. ಮಾರ್ಚ್ 3ರಿಂದ 7ರವರೆಗೆ ಸ್ಯಾರ್ಟ್‌ಫೋನ್‌ ಖರೀದಿ ಮಾಡಿದವರಿಗೆ ಎರಡು ಬಿಯರ್‌ ಬಾಟಲ್‌ ಉಚಿತವಾಗಿ ನೀಡಲಾಗುತ್ತದೆ ಎಂದು ಜಾಹೀರಾತು ನೀಡಿದ ಇದರ ಬೆನ್ನಲ್ಲೆ ಮೊಬೈಲ್ ಶೋ ರೂಂ ಎದುರು ಜನರು ಮುಗಿಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred

ಮಗ ಪರೀಕ್ಷೆಯಲ್ಲಿ ಪಾಸಾಗಲೆಂದು ಚೀಟಿ ಕೊಡಲು ಹೋದ ಅಪ್ಪ ಪೋಲಿಸರ ಕೈಗೆ ಸಿಕ್ಕಿ ಹಣ್ಣಾದ!

 ಭದೋಹಿಯ ಚೌರಿ ರಸ್ತೆ ಸಮೀಪ ಮೊಬೈಲ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಎಂಬ ಮೊಬೈಲ್ ಶೋರೂಂನ ಮಾಲೀಕ ಈ ಆಫರ್ ನೀಡಿದ್ದು, ಈಗ ಪೊಲೀಸರ ಅಥಿತಿಯಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹೋಳಿ ಸಂಭ್ರಮಕ್ಕೆ 26 ಲಕ್ಷ ಬಾಟಲ್‌ ಮದ್ಯ ಮೋರಿದ ಡೆಲ್ಲಿ ಪೀಪಲ್ಸ್‌, ಹಿಂದಿನೆಲ್ಲಾ ದಾಖಲೆ ಉಡೀಸ್‌!

ಘಟನೆ ಬಗ್ಗೆ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ಮಾಧ್ಯಮಗಳೊಂದಿಗೆ ಮಾತನಾಡಿ, ಶೋರೂಂನಲ್ಲಿ ಮಾರ್ಚ್ 3ರಿಂದ 7ರವರೆಗೆ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುವುದಾಗಿ ಪೋಸ್ಟರ್, ಕರಪತ್ರ ಹಂಚಿದ್ದಾನೆ. ಆ ಕಾರಣಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಜನಸಂದಣಿ ಆಗಿದೆ. ಹೀಗಾಗಿ ಮೊಬೈಲ್ ಅಂಗಡಿ ಎದುರು ನೆರೆದಿದ್ದ ಜನರ ಗುಂಪುನ್ನು ಲಾಠಿಚಾರ್ಜ್ ಮಾಡಬೇಕಾಯಿತು ಎಂದಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 (ಸಾರ್ವಜನಿಕ ಶಾಂತಿಗೆ ಭಂಗ ತರುವ) ಅಡಿಯಲ್ಲಿ ರಾಜೇಶ್ ಮೌರ್ಯನನ್ನು ಬಂಧಿಸಿದರು.