Asianet Suvarna News Asianet Suvarna News

ಮಹಿಳಾ ರೋಗಿಯನ್ನು ಕೂದಲಿಳಿಡಿದು ಎಳೆದೊಯ್ದ ನರ್ಸ್: ವಿಡಿಯೋ ವೈರಲ್‌

ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನರ್ಸ್‌  ಅಥವಾ ದಾದಿಯರು ಸೇವೆಗೆ ಹೆಸರುವಾಸಿ ಆದರೆ. ಅದಕ್ಕೆ ಅಪವಾದ ಎಂಬಂತೆ ನರ್ಸ್‌ವೊಬ್ಬರು ಮಹಿಳಾ ರೋಗಿಯನ್ನು ಕೂದಲಿನಲ್ಲಿ ಹಿಡಿದು ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ನೋದ ಸೀತಾಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 

Uttar Pradesh Nurse from Sitapur Hospital Grabs Woman Patient By Her Hair video goes viral, Administration defended nurse's action akb
Author
First Published Oct 28, 2022, 9:57 PM IST | Last Updated Oct 28, 2022, 9:57 PM IST

ಲಕ್ನೋ: ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನರ್ಸ್‌  ಅಥವಾ ದಾದಿಯರು ಸೇವೆಗೆ ಹೆಸರುವಾಸಿ ಆದರೆ. ಅದಕ್ಕೆ ಅಪವಾದ ಎಂಬಂತೆ ನರ್ಸ್‌ವೊಬ್ಬರು ಮಹಿಳಾ ರೋಗಿಯನ್ನು ಕೂದಲಿನಲ್ಲಿ ಹಿಡಿದು ಎಳೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ನೋದ ಸೀತಾಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, ದಾದಿಯ ಕ್ರಮವನ್ನು ಆಸ್ಪತ್ರೆ ಸಮರ್ಥಿಸಿಕೊಂಡಿದೆ. ರೋಗಿಯ ಜೊತೆ ದಾದಿ ಅಮಾನವೀಯವಾಗಿ  ವರ್ತಿಸಿಲ್ಲ, ಚುಚ್ಚುಮದ್ದನ್ನು ನೀಡುವ ಮೊದಲು ಮಹಿಳೆಯನ್ನು ಸಂಯಮದಿಂದ ಕೂರಿಸುವುದು ಅಗತ್ಯವಾಗಿತ್ತು ಎಂದು ಆಸ್ಪತ್ರೆ ಹೇಳಿದೆ.

ಸೀತಾಪುರ ಜಿಲ್ಲಾ ಆಸ್ಪತ್ರೆಯ (Sitapur District Hospital) ಮಹಿಳಾ ವಾರ್ಡ್‌ನಲ್ಲಿ ನಡೆದ ಗಲಾಟೆ ಇದಾಗಿದೆ. ನರ್ಸ್ ಮಹಿಳೆಯ ಕೂದಲನ್ನು(Hair) ಹಿಡಿದು ಎಳೆದುಕೊಂಡು ಹೋಗಿ ಖಾಲಿ ಹಾಸಿಗೆಯ ಕಡೆಗೆ ಆಕೆಯನ್ನು ತಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಪಕ್ಕದಲ್ಲೇ ನಿಂತಿದ್ದ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಆಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ನರ್ಸ್(Nurse) ಯಶಸ್ವಿಯಾಗುತ್ತಾಳೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ಬಳಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸೀತಾಪುರದ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಕೆ.ಸಿಂಗ್ (R.K. Singh), ಮಹಿಳೆಯನ್ನು ಅಕ್ಟೋಬರ್ 18 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ, ಮಹಿಳೆಯ (Woman) ಕುಟುಂಬ ಸದಸ್ಯರು ಆಸ್ಪತ್ರೆಯಿಂದ ಹೊರ ಹೋದ ನಂತರ ಮಹಿಳೆ ರಾತ್ರಿ  12 ಮತ್ತು 1 ಗಂಟೆಯ ನಡುವೆ  ಶೌಚಾಲಯದ ಬಳಿ ಹೋದರು ಮತ್ತು ಇದ್ದಕ್ಕಿದ್ದಂತೆ ಹಿಂಸಾತ್ಮಕವಾಗಿ ವರ್ತಿಸಲು ಪ್ರಾರಂಭಿಸಿದರು.

ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ದಾದಿಯರು

ತನ್ನ ಕೈಯಲ್ಲಿದ್ದ ಬಳೆಗಳನ್ನು(Bangales) ಒಡೆದು ತನ್ನ ಬಟ್ಟೆಗಳನ್ನು(cloth) ಹರಿದುಕೊಳ್ಳಲು ಶುರು ಮಾಡಿದರು, ಇದು ಅಲ್ಲೇ ಇದ್ದ ಇತರ ಮಹಿಳಾ ರೋಗಿಗಳಲ್ಲಿ ಭಯ ಹುಟ್ಟಿಸಿತ್ತು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ದಾದಿ ಹಾಗೂ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಆಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಆಸ್ಪತ್ರೆಯ ವೈದ್ಯ ಆರ್‌.ಕೆ. ಸಿಂಗ್ ಹೇಳಿದರು. ಅಲ್ಲದೇ ಅಲ್ಲಿ ಕರ್ತವ್ಯದಲ್ಲಿದ್ದ ನರ್ಸ್‌  ಪೊಲೀಸರು ಹಾಗೂ ಇತರ ವಾರ್ಡ್‌ನಲ್ಲಿದ್ದ ಸಿಬ್ಬಂದಿಗೂ ವಿಚಾರ ತಿಳಿಸಿದ್ದು, ಅವರು ಕೂಡಲೇ ಸಹಾಯಕ್ಕೆ ಧಾವಿಸಿದರು ಎಂದು ಆರರ್‌.ಕೆ ಸಿಂಗ್ ಹೇಳಿದ್ದಾರೆ. 

ಜಾತಿ, ಧರ್ಮ ಇಲ್ಲಿಲ್ಲ: ನೋವಿಗೆ ಮಿಡಿಯೋ ದಾದಿಯರೆಂಬ ದೇವತೆಗಳಿವರು..!
ನರ್ಸ್ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ ವೈದ್ಯರು, ಚುಚ್ಚುಮದ್ದನ್ನು ನೀಡುವ ಮೊದಲು ಮಹಿಳಾ ರೋಗಿಯನ್ನು ನಿಗ್ರಹಿಸಬೇಕು ಹಾಗೂ ಹಾಸಿಗೆಯಲ್ಲಿ ಮಲಗಿಸಬೇಕಿತ್ತು. ಆ ನಂತರವೇ ಆಕೆ ಶಾಂತಳಾದಳು, ನಂತರ ಆಕೆಯ ಕುಟುಂಬದವರು ಬಂದಿದ್ದು, ಕುಟುಂಬದವರು ಬಂದ ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. 

Latest Videos
Follow Us:
Download App:
  • android
  • ios