ರೈಲೊಳಗೆ ಕಾರಿಡಾರ್‌ನಲ್ಲಿ ನಮಾಜ್: ವಿಡಿಯೋ ವೈರಲ್, ಆಕ್ರೋಶ

ರೈಲೊಳಗೆ ಕೆಲವರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದದ ಕಿಡಿ ಎಬ್ಬಿಸಿದೆ.

Uttar pradesh four men doing namaz inside Satyagraha Express train coridor in kushinagar akb

ಲಕ್ನೋ: ಕೆಲ ತಿಂಗಳ ಹಿಂದೆ ಉತ್ತರಪ್ರದೇಶದ ಲಕ್ನೋದ ಲುಲು ಮಾಲ್ ಒಳಗೆ ಕೆಲವರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ನಂತರ ಪ್ರಕರಣ ದಾಖಲಾಗಿ ವಿವಾದವೇರ್ಪಟ್ಟ ಬಳಿಕ ಲುಲು ಮಾಲ್ ಯಾವುದೇ ಧಾರ್ಮಿಕ ಆಚರಣೆಗೆ ಮಾಲ್‌ನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು. ಈ ಘಟನೆ ಮಾಸುವ ಮುನ್ನವೇ ರೈಲೊಳಗೆ ಕೆಲವರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದದ ಕಿಡಿ ಎಬ್ಬಿಸಿದೆ.

ವಿಡಿಯೋದಲ್ಲಿ ಕಾಣಿಸುವಂತೆ ರೈಲಿನ ಬೋಗಿಯೊಳಗೆ ಅತ್ತಿತ್ತ ಸಾಗುವ ಕಾರಿಡಾರ್‌ನಲ್ಲಿಯೇ ಮೂರು ನಾಲ್ಕು ಜನ ಸಾಲಾಗಿ ಕುಳಿತು ಟವೆಲ್ ಹಾಸಿ ನಮಾಜು ಮಾಡುತ್ತಿದ್ದಾರೆ. ಈ ವೇಳೆ ಮುಂದೆ ಸಾಗಲು  ಬಂದವರನ್ನು ನಿಲ್ಲಿ ನಿಲ್ಲಿ ಎಂದು ರೈಲಿನ ಸೀಟಿನಲ್ಲಿ ಕುಳಿತವರೊಬ್ಬರು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಅಂದಹಾಗೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಿಂತಿದ್ದ ರೈಲಿನ ಕಂಪಾರ್ಟ್‌ಮೆಂಟ್‌ ಒಳಗೆ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media) ಹರಿದಾಡಲು ಆರಂಭವಾದ ನಂತರ  ನಂತರ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವ ಬಗ್ಗೆ ಹೊಸ ಗಲಾಟೆ ಶುರು ಆಗಿದೆ. ರಾಜ್ಯ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

 

ಈ ವಿಡಿಯೋವನ್ನು ಕುಶಿನಗರದ(Kushinagar) ಬಿಜೆಪಿ ಶಾಸಕ ದೀಪಲಾಲ್ ಭಾರತಿ(Deeplal Bharati) ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸತ್ಯಾಗ್ರಹ ಎಕ್ಸ್‌ಪ್ರೆಸ್‌ ರೈಲು ಕುಶಿ ನಗರದ ಖದ್ದ ರೈಲು ನಿಲ್ದಾಣದಲ್ಲಿ ನಿಂತಾಗ ಈ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವ ಕಾರಣಕ್ಕೆ ಈ ಹಿಂದೆಯೂ ಹಲವೆಡೆ ಗಲಾಟೆಗಳು ನಡೆದಿವೆ. ಹರಿಯಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ನಡೆಯುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಹಿಂದೂ ಬಲಪಂಥೀಯ ಸಂಘಟನೆಗಳ (right-wing groups) ಮುಖಂಡರು ಜೈ ಶ್ರೀರಾಮ್ ಘೋಷಣೆ ಕೂಗಲು ಶುರು ಮಾಡಿದ್ದರು. ನಂತರ ಅಲ್ಲಿ ಕೋಮು ಸಂಘರ್ಷ ಉಂಟಾಗದಂತೆ ತಡೆಯಲು ಪೊಲೀಸರು ಹರ ಸಾಹಸ ಪಟ್ಟಿದ್ದರು.

ಲಖನೌ ಲುಲು ಮಾಲಲ್ಲಿ ನಮಾಜ್‌ ಮಾಡಿದವರ ವಿರುದ್ಧ ಎಫ್‌ಐಆರ್‌

ಹಾಗೆಯೇ ಈ ಹಿಂದೆ ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬಳು ನಮಾಜ್ (namaz) ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿ ವಿವಾದವೇರ್ಪಟ್ಟಿತ್ತು. ಆಕೆ ಆಸ್ಪತ್ರೆಯಲ್ಲಿರುವ (hospital) ತನ್ನ ಕುಟುಂಬದ ಸದಸ್ಯರೊಬ್ಬರು ಶೀಘ್ರ ಗುಣಮುಖವಾಗಲು ನಮಾಜ್ ಮಾಡುತ್ತಿರುವುದಾಗಿಯೂ ಇದರಿಂದ ಬೇರೆ ಯಾರಿಗೂ ತೊಂದರೆ ಆಗಿಲ್ಲವೆಂದು ಪೊಲೀಸರು ಸ್ಪಷ್ಟನೆ ನೀಡಿದ್ದರು. 

ಅದಕ್ಕೂ ಮೊದಲು ಜುಲೈನಲ್ಲಿ ಉತ್ತರಪ್ರದೇಶದಲ್ಲಿ(Uttar Pradesh) ಆಗಷ್ಟೇ ಉದ್ಘಾಟನೆಗೊಂಡಿದ್ದ ಲುಲು ಮಾಲ್‌ನಲ್ಲಿ ಯುವಕರು ನಮಾಜ್ ಮಾಡುತ್ತಿರುವ ದೃಶ್ಯ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಆ ಬಗ್ಗೆ ತನಿಖೆಗೂ ಆದೇಶಿಸಿದ್ದರು. ಅಲ್ಲದೇ ಅದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಹನುಮಾನ್ ಚಾಲೀಸ್ ಪಠಿಸುವುದಾಗಿ ಬೆದರಿಕೆಯೊಡ್ಡಿದ್ದವು. 

ಭೋಪಾಲ್ ಮಾಲ್‌ನಲ್ಲಿ ನಮಾಜ್‌: ಭಜರಂಗದಳದಿಂದ ಪ್ರತಿಭಟನೆ

Latest Videos
Follow Us:
Download App:
  • android
  • ios