Asianet Suvarna News Asianet Suvarna News

UP Election 2022: ಇಂದು ಪಂಚರಾಜ್ಯ ಚುನಾವಣೆಗೆ ತೆರೆ

ದೇಶಾದ್ಯಂತ ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಾಣೆಯ ಕೊನೆಯ ಹಂತದ ಮತದಾನ ಉತ್ತರ ಪ್ರದೇಶದ 54 ಸ್ಥಾನಗಳಿಗೆ ಸೋಮವಾರ ನಡೆಯಲಿದೆ. ಇದರೊಂದಿಗೆ ಪಂಚರಾಜ್ಯ ಚುನಾವಣೆಗೆ ತೆರೆ ಬೀಳಲಿದೆ.

Uttar Pradesh Election 2022 Polling on 54 seats today 613 candidates gvd
Author
Bangalore, First Published Mar 7, 2022, 4:33 AM IST | Last Updated Mar 7, 2022, 4:33 AM IST

ನವದೆಹಲಿ (ಮಾ.7): ದೇಶಾದ್ಯಂತ ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಾಣೆಯ (Five State Election) ಕೊನೆಯ ಹಂತದ ಮತದಾನ ಉತ್ತರ ಪ್ರದೇಶದ 54 ಸ್ಥಾನಗಳಿಗೆ ಸೋಮವಾರ ನಡೆಯಲಿದೆ. ಇದರೊಂದಿಗೆ ಪಂಚರಾಜ್ಯ ಚುನಾವಣೆಗೆ ತೆರೆ ಬೀಳಲಿದೆ. ಉತ್ತರ ಪ್ರದೇಶದ 403, ಉತ್ತರಾಖಂಡದ 70, ಪಂಜಾಬ್‌ನ 117, ಮಣಿಪುರದ 60 ಮತ್ತು ಗೋವಾದ 40 ಸ್ಥಾನಗಳು ಸೇರಿದಂತೆ ಒಟ್ಟು 690 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 

ಫೆ.10ರಂದು ಆರಂಭವಾದ ಚುನಾವಣೆ ಮಾ.7ರಂದು ಮುಕ್ತಾಯವಾಗಲಿದೆ. ಎಲ್ಲಾ ರಾಜ್ಯಗಳ ಫಲಿತಾಂಶ ಮಾ.10ರಂದು ಪ್ರಕಟವಾಗಲಿದೆ. ಅಂದರೆ ಮೊದಲ ಹಂತದಲ್ಲಿ ಮತದಾನ ಮಾಡಿದವರು ಸುಮಾರು ಒಂದು ತಿಂಗಳ ಬಳಿಕ ಫಲಿತಾಂಶವನ್ನು ಪಡೆಯಲಿದ್ದಾರೆ. ಗೋವಾ, ಪಂಜಾಬ್‌, ಉತ್ತರಾಖಂಡ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಮಣಿಪುರದಲ್ಲಿ 2 ಹಂತದಲ್ಲಿ ಮತದಾನ ನಡೆದಿತ್ತು. ಉತ್ತರಪ್ರದೇಶದಲ್ಲಿ 6 ಹಂತಗಳು ಮುಕ್ತಾಯಗೊಂಡಿದ್ದು, ಕೊನೆ ಹಂತದ ಮತದಾನ ಸೋಮವಾರ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಶೇ.60ರಷ್ಟುಮತದಾನವಾಗಿತ್ತು.

UP Elections: 70 ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿ ಗೆಲ್ಲಿಸುವ ಷಡ್ಯಂತ್ರ: ಟಿಕಾಯತ್ ಗಂಭೀರ ಆರೋಪ

ಉಳಿದಂತೆ 2ನೇ ಹಂತದಲ್ಲಿ ಶೇ.65, 3ನೇ ಹಂತದಲ್ಲಿ ಶೇ.60, 4ನೇ ಹಂತದಲ್ಲಿ ಶೇ.58, 5ನೇ ಹಂತದಲ್ಲಿ ಶೇ.54, 6ನೇ ಹಂತದಲ್ಲಿ ಶೇ.55ರಷ್ಟು ಮತದಾನವಾಗಿತ್ತು. ಫೆ.14ರಂದು ನಡೆದ ಗೋವಾ ಚುನಾವಣೆಯಲ್ಲಿ ಶೇ.79ರಷ್ಟು, ಉತ್ತರಾಖಂಡದಲ್ಲಿ ಶೇ.63ರಷ್ಟು ಮತದಾನವಾಗಿತ್ತು. ಫೆ.20ರಂದು ನಡೆದ ಪಂಜಾಬ್‌ ಚುನಾವಣೆಯಲ್ಲಿ ಶೇ.64ರಷ್ಟು ಮತದಾನವಾಗಿತ್ತು. ಮಣಿಪುರದಲ್ಲಿ ಫೆ.28ರಂದು ಶೇ.78 ಮತ್ತು ಮಾ.5ರಂದು ಶೇ.76ರಷ್ಟು ಮತದಾನವಾಗಿದೆ.

ಸಮೀಕ್ಷಾ ವರದಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಕುರಿತು ವಿವಿಧ ಸುದ್ದಿವಾಹಿನಿಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷಾ ವರದಿಗಳು ಸೋಮವಾರ ಸಂಜೆಯಿಂದ ಪ್ರಕಟವಾಗಲು ಆರಂಭವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಸೋಮವಾರ ಸಂಜೆಯತ್ತ ನೆಟ್ಟಿದೆ. ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರದಲ್ಲಿ ಬಿಜೆಪಿ (BJP) ಗೆಲ್ಲಲಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (AAP) ಅಧಿಕಾರಕ್ಕೆ ಬರಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದರೆ, ಇನ್ನು ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನು ಊಹಿಸಿವೆ. ಇನ್ನು ಗೋವಾದಲ್ಲೂ ಕೂಡಾ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ

Rahul Gandhi Taunt "ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ" ಚುನಾವಣೆಯ ಆಫರ್ ಕ್ಲೋಸ್ ಆಗಲಿದೆ!

ನಾಲ್ಕು ರಾಜ್ಯಗಳಲ್ಲಿ ಜಯ ಖಚಿತ, ಬಿಜೆಪಿ ವಿಶ್ವಾಸ: ಉತ್ತರಪ್ರದೇಶ (Uttar Pradesh) ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ (BJP) ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ಪಂಜಾಬಿನಲ್ಲಿ (Punjab) ಪ್ರಭಾವಿ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Home Minister Amit Shah ), ‘ಚುನಾವಣೆ ಇರುವ ಪಂಚರಾಜ್ಯಗಳಲ್ಲಿ ಪ್ರಧಾನಿ ಮೋದಿ ಅವರ ಪ್ರಭಾವ ಹಿಂದೆಂದಿಗಿಂತಲೂ ಹೆಚ್ಚಿರುವುದನ್ನು ನೋಡಿದ್ದೇವೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಮತ್ತು ಪಂಜಾಬ್‌ನಲ್ಲಿ ಭಾರೀ ಪ್ರಭಾವ ಬೀರಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.

ಉತ್ತರ ಪ್ರದೇಶದಲ್ಲೀ ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕೆಲ ನಾಯಕರು ಬಿಜೆಪಿ ಬಿಟ್ಟು ಹೋಗಿರಬಹುದು, ಆದರೆ ಮತದಾರರು ನಮ್ಮನ್ನು ಬಿಟ್ಟಿಲ್ಲ’ ಎಂದು ಹೇಳಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು, ‘ಉತ್ತರ ಪ್ರದೇಶದಲ್ಲಿ ಪಕ್ಷವು ಅಭೂತಪೂರ್ವ ಜಯ ಗಳಿಸಲಿದೆ. ಪಕ್ಷವು ಸೋಲಲಿದೆ ಎಂಬ ನಿರೀಕ್ಷೆ ಹೊಂದಿದವರು ನಿರಾಶರಾಗಲಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಜನರು ಬಹುಮತ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios