ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಬಿಜೆಪಿ ಚುನಾವಣಾ ರ‍್ಯಾಲಿ ಪರಿವಾರ ರಾಜಕೀಯ ಹಾಗೂ ರಾಷ್ಟ್ರಭಕ್ತಿ ರಾಜಕೀಯದ ಕದನ ಬನಾರಸ್ ಪ್ರತಿ ಮನೆಗೆ ತೆರಳಿ ಮೋದಿ ಪ್ರಣಾಮ ತಿಳಿಸಿ ಎಂದು ಮನವಿ

ಬನಾರಸ್(ಫೆ.27): ಉತ್ತರ ಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಿರೋಧ ಪಕ್ಷ ಹಾಗೂ ಕುಟುಂಬ ರಾಜಕೀಯದ ವಿರುದ್ಧ ಗುಡುಗಿದ್ದಾರೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಕುಟುಂಬ ರಾಜಕಾರಣಕ್ಕೂ ಬಿಜೆಪಿಯ ರಾಷ್ಟ್ರಭಕ್ತಿ ರಾಜಕಾರಣಕ್ಕೂ ವ್ಯತ್ಯಾಸವಿದೆ ಎಂದು ಮೋದಿ ಹೇಳಿದ್ದಾರೆ.

ದಿಯೋರಿಯಾದಲ್ಲಿ ಆಯೋದಿಸಿದ ಚುನಾವಣಾ ರ್ಯಾಲಿಗೆ ಆಗಮಿಸಿದ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಗುಡುಗಿದ ಮೋದಿ, ಬನಾರಸ್ ಜನ ಬಿಜೆಪಿಯನ್ನು ಯಾವತ್ತೂ ಕೈಬಿಟ್ಟಿಲ್ಲ ಎಂದು ಮೋದಿ ಹೇಳಿದ್ದಾರೆ. 

Russia Ukraine Crisis: ಉಕ್ರೇನ್‌ನಿಂದ ಭಾರತೀಯರ ರಕ್ಷಣೆ ನಮ್ಮ ಮೊದಲ ಆದ್ಯತೆ: ಪ್ರಧಾನಿ ಮೋದಿ

ಹಿಂದಿನ ಸರ್ಕಾರಗಳು ಭಾರತದ ರಕ್ಷಣಾ ಅಗತ್ಯತೆಗೆ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಬಿಜೆಪಿ ಸರ್ಕಾರ ಆತ್ಮನಿರ್ಭರ್ ಆದ್ಯತೆ ನೀಡಿದೆ. ಪರಿಣಾಮ ರಕ್ಷಣಾ ವ್ಯವಸ್ಥೆಯಲ್ಲೂ ಭಾರತ ಸ್ವಾಲಂಬಿಯಾಗಿದೆ. ಇಷ್ಟೇ ಅಲ್ಲ ವಿದೇಶಗಳಿಗೂ ರಫ್ತು ಮಾಡುವಷ್ಟು ಭಾರತ ಬೆಳೆದಿದೆ ಎಂದು ಮೋದಿ ಹೇಳಿದ್ದಾರೆ. 

ದೇಶದ ನಾಗರೀಕನಿಗೆ ಸರ್ಕಾರದ ಸೌಲಭ್ಯ ಶೇಕಡಾ 100 ರಷ್ಟು ತಲುಪಬೇಕು. ಇದರಲ್ಲಿ ಕಿಂಚಿತ್ತು ಕಡಿಮೆಯಾಗಬಾರದು. ಹೀಗಾಗಿ ಬಿಜೆಪಿ ಸರ್ಕಾರ ನೇರವಾಗಿ ಜನರ ಖಾತೆಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ವರ್ಗಾಯಿಸುತ್ತಿದೆ. 

Russia Ukraine war ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ, ಮತ್ತೆ ಭಾರತದ ನೆರವು ಕೇಳಿದ ಝೆಲೆನ್ಸ್ಕಿ!

ಕೆಲವರು ಕಾಶಿಯಲ್ಲಿ ನನ್ನ ಸಾವಿಗೆ ಪ್ರಾರ್ಥನೆ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಭಾರತದ ರಾಜಕಾರಣ ಇಳಿದಿದೆ. ಅವರ ಪ್ರಾರ್ಥನೆಯ ತಿರುಳು ಹೇಳಬೇಕೆಂದರೆ ನಾನು ಸಾಯುವವರೆಗೂ ಕಾಶಿಯನ್ನು ಬಿಡುವುದಿಲ್ಲ, ಅಥವಾ ಕಾಶಿ ಜನ ನನ್ನನ್ನು ಬಿಡುವುದಿಲ್ಲ. ಇನ್ನು ಕಾಶಿ ವಿಶ್ವನಾಥನ ಸೇವೆ ಮಾಡುತ್ತಾ ಸಾವನ್ನಪ್ಪಿದರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕಿದೆ ಎಂದು ಮೋದಿ ಹೇಳಿದ್ದಾರೆ.

Scroll to load tweet…

ಕಳೆದ ಸಮಾಜವಾದಿ ಪಕ್ಷದ ಸರ್ಕಾರ ಕೇಂದ್ರದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿತ್ತು. ಆದರೆ ಡಬಲ್ ಎಂಜಿನ್ ಸರ್ಕಾರದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಪ್ರತ್ಯಕ್ಷವಾಗಿ ನೋಡಬಹುದು ಎಂದು ಮೋದಿ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರ ಗೋಳು ಕೇಳದ ಹಿಂದಿನ ಸರ್ಕಾರ: Narendra Modi

ಹರ್ದೋಯಿ ಹಾಗೂ ಉನ್ನಾವ್‌ ರ‍್ಯಾಲಿಯಲ್ಲಿ ಮೋದಿ ಅಬ್ಬರ
ಕಳೆದ ವಾರ ಉತ್ತರ ಪ್ರದೇಶದ ಹರ್ದೋಯಿ ಹಾಗೂ ಉನ್ನಾವ್‌ ನಲ್ಲಿನ ಬಿಜೆಪಿ ಸಮಾವೇಶದಲ್ಲಿ ಪ್ರದಾನಿ ಮೋದಿ ಸಾಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ‘ನಾನು ಉಗ್ರರು ಪಾತಾಳದಲ್ಲಿ ಅಡಗಿದರೂ ಬಿಡುವುದಿಲ್ಲ. ಆದರೆ ಸಮಾಜವಾದಿ ಪಕ್ಷ ತಾನು ಅಧಿಕಾರದಲ್ಲಿ ಇದ್ದಾಗ ಅನೇಕ ಉಗ್ರರ ಮೇಲಿನ ಕೇಸು ಹಿಂಪಡಯಲು ಯತ್ನಿಸಿತ್ತು’ ಎಂದಿದ್ದಾರೆ. ಅಲ್ಲದೆ, ಉಗ್ರರನ್ನು ‘ಒಸಾಮಾಜೀ’ ಎಂದು ಗೌರವ ನಿಡುವ ಪಕ್ಷಗಳು ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಾರ್ಟಿ ಎಂದು ಕಿಡಿಕಾರಿದ್ದಾರೆ.

ಇದಲ್ಲದೆ, ‘2017ರ ಅಧಿಕಾರದ ಕಾದಾಟದಲ್ಲಿ ಒಂದೊಮ್ಮೆ ತಮ್ಮ ತಂದೆಯನ್ನು (ಮುಲಾಯಂ) ವೇದಿಕೆಯಲ್ಲೇ ನೂಕಿದ ವ್ಯಕ್ತಿ (ಅಖಿಲೇಶ್‌), ಇಂದು ಅದೇ ತಂದೆಗೆ ತನ್ನನ್ನು ಗೆಲ್ಲಿಸು ಎಂದು ಗೋಗರೆಯುತ್ತಿದ್ದಾನೆ. ಇದು ಸ್ವಂತ ಕ್ಷೇತ್ರದಲ್ಲೇ (ಅಖಿಲೇಶ್‌ ಸ್ಪರ್ಧಿಸಿರುವ ಕರ್ಹಲ್‌ನಲ್ಲಿ) ಸೋಲುವ ಭೀತಿಯ ಸಂಕೇತ’ ಎನ್ನುವ ಮೂಲಕ ಸಮಾಜವಾದಿ ಪಾರ್ಟಿ ನೇತಾರ ಅಖಿಲೇಶ್‌ ಯಾದವ್‌ರನ್ನು ಟಾರ್ಗೆಟ್‌ ಮಾಡಿದ್ದಾರೆ.

ಹರ್ದೋಯಿ ಹಾಗೂ ಉನ್ನಾವ್‌ನಲ್ಲಿ ಚುನಾವಣಾ ರಾರ‍ಯಲಿಯಲ್ಲಿ ಭಾನುವಾರ ಮಾತನಾಡಿದ ಮೋದಿ, ‘2008ರಲ್ಲಿ ಅಹಮದಾಬಾದ್‌ನಲ್ಲಿ ಬಾಂಬ್‌ ಸ್ಪೋಟ ಸಂಭವಿಸಿತ್ತು. ಆ ದಿನ ಅತ್ಯಂತ ನೋವಿನ ದಿನ. ಅದೇದಿನ ನಾನು ಆ ಉಗ್ರರು ಎಷ್ಟೇ ಪಾತಾಳದಲ್ಲಿ ಅಡಗಿದ್ದರೂ ಹೆಡೆಮುರಿ ಕಟ್ಟಲು ನಿರ್ಧರಿಸಿದ್ದೆ. ಈಗ ಆ ಕಾಲ ಕೂಡಿ ಬಂದಿದೆ. 38 ಉಗ್ರರಿಗೆ ಗಲ್ಲು ಶಿಕ್ಷೆಯಾಗಿದೆ. ಇಷ್ಟುದಿನ ನಾನು ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದು ಸುಮ್ಮನಿದ್ದೆ. ಈಗ ಕೇಸು ಮುಗಿದಿದೆ. ಹೀಗಾಗಿ ಮಾತನಾಡುತ್ತಿದ್ದೇನೆ’ ಎಂದರು.