Asianet Suvarna News Asianet Suvarna News

ಬೆಕ್ಕನ್ನು ಮಡಿಲಲ್ಲಿರಿಸಿಕೊಂಡು ಮುದ್ದು ಮಾಡುತ್ತಿರುವ ಯೋಗಿ ಆದಿತ್ಯನಾಥ್: ಫೋಟೋ ವೈರಲ್

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಕ್ಕೊಂದನ್ನು ತಮ್ಮ ಮಡಿಲಲ್ಲಿರಿಸಿಕೊಂಡು ಆರೈಕೆ ಮಾಡುತ್ತಿರುವ ಅಪರೂಪದ ಫೋಟೋವೊಂದು ವೈರಲ್ ಆಗಿದೆ. 

Uttar Pradesh CM Yogi Adityanath cuddling cat which sat on his lap, photo goes viral in social Media akb
Author
First Published Jan 2, 2023, 2:33 PM IST

ಗೋರಖ್‌ಪುರ: ಬೆಕ್ಕಿನ ಮರಿಗಳನ್ನು ನಾಯಿ ಮರಿಗಳನ್ನು ಹೀಗೆ ನಾವು ಸಾಕಿದ ಪ್ರಾಣಿಗಳನ್ನು ಬಹುತೇಕ ಎಲ್ಲರೂ ಮುದ್ದಾಡುತ್ತಾರೆ. ಆದರೆ ರಾಜಕಾರಣಿಗಳು ಹೀಗೆ ಪ್ರಾಣಿಗಳನ್ನು ಆರೈಕೆ ಮಾಡುವ ಮುದ್ದು ಮಾಡುವ ಫೋಟೋಗಳು ಕಾಣಲು ಸಿಗುವುದು ಬಲು ಅಪರೂಪ. ಹಾಗೆಯೇ ಈಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಕ್ಕೊಂದನ್ನು ತಮ್ಮ ಮಡಿಲಲ್ಲಿರಿಸಿಕೊಂಡು ಆರೈಕೆ ಮಾಡುತ್ತಿರುವ ಅಪರೂಪದ ಫೋಟೋವೊಂದು ವೈರಲ್ ಆಗಿದೆ. 

ಯೋಗಿಯವರು ಮಾಮೂಲಿನಂತೆ ತಮ್ಮ ಕಷಾಯ ವಸ್ತ್ರ ಧರಿಸಿ ದಿವಾನದ ಮೇಲೆ ಕುಳಿತಿದ್ದು, ಅವರ ಮಡಿಲಲ್ಲಿ ಬೆಕ್ಕೊಂದು ಆರಾಮವಾಗಿ ಕುಳಿತು ಫೋಟೋಗೆ ಫೋಸ್ ನೀಡುತ್ತಿದೆ. ಉತ್ತರಪ್ರದೇಶದ ಗೋರಖ್‌ಪುರ ದೇಗುಲದಲ್ಲಿರುವ (Gorakhnath temple) ಯೋಗಿಯವರ ಕಚೇರಿಯಲ್ಲಿ ಕುಳಿತಿದ್ದಾಗ ಅಲ್ಲಿದ್ದ ಬೆಕ್ಕೊಂದು ಸೀದಾ ಬಂದು ಯೋಗಿಯವರ ಮಡಿಲೇರಿ ಕುಳಿತಿದೆ. ಈ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಯೋಗಿ ಆದಿತ್ಯನಾಥ್ (Yogi Adityanath), ಹಿಂದಿ ಭಾಷೆಯಲ್ಲಿ 'ಹಿತ್ ಅನ್‌ಹಿತ್ ಪಶು ಪಂಚಿಯೊ ಜಾನ' ಎಂದು ಬರೆದುಕೊಂಡಿದ್ದಾರೆ. ಅಂದರೆ ಇದರರ್ಥ, 'ಪಶು ಪಕ್ಷಿಗಳಿಗೂ ಸ್ನೇಹಿತರು ಯಾರು ಶತ್ರುಗಳು ಯಾರು ಎಂಬುದರ ವ್ಯತ್ಯಾಸ ಗೊತ್ತಿದೆ ಎಂಬುದಾಗಿದೆ.

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಗೋವುಗಳ ಮೇಲೆ ವಿಶೇಷ ಪ್ರೀತಿ ಇದ್ದು, ಗೋ ಸೇವಕರೆಂಬ (Gausevak) ಖ್ಯಾತಿ ಇದೆ. ಅವರು ಪ್ರಾಣಿಗಳನ್ನು ಆರೈಕೆ ಮಾಡುವ ಅವುಗಳನ್ನು ಮಾತನಾಡಿಸಿ ಮುದ್ದು ಮಾಡುವ ಕೆಲಸವನ್ನು ಮಾಡುತ್ತಿರುತ್ತಾರೆ. ಗೋರಖ್‌ಪುರಕ್ಕೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿರುವ ಗೋಶಾಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಅಲ್ಲಿರು ಹಸುಗಳಿಗೆ ಬೆಲ್ಲ ಹಾಗೂ ಇತರ ಆಹಾರಗಳನ್ನು ತಮ್ಮ ಕೈಯಾರೆ ನೀಡುತ್ತಾರೆ. ಅದರ ಜೊತೆಗೆ ಅವರು ತಮ್ಮ ಪ್ರೀತಿಯ ಶ್ವಾನಗಳಾದ ಕಾಲು ಹಾಗೂ ಗುಲ್ಲುನನ್ನು ಮುದ್ದು ಮಾಡುತ್ತಿರುತ್ತಾರೆ ಎಂದು ಮುಖ್ಯಮಂತ್ರಿಯ ಕಚೇರಿ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಮತ್ತೆ ಮರುನಾಮಕರಣ ರಾಜಕೀಯ, 2 ನಗರದ ಹೆಸರು ಬದಲಾವಣೆಗೆ ಗ್ರೀನ್ ಸಿಗ್ನಲ್!

ಯೋಗಿ ಆದಿತ್ಯನಾಥ್ (Chief Minister) ಅವರು ತಮ್ಮ ಮಡಿಲಲ್ಲಿ ಬೆಕ್ಕನ್ನು ಕೂರಿಸಿಕೊಂಡು ಮುದ್ದು ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕರು ಫೋಟೋ ನೋಡಿ ಮೆಚ್ಚುಗೆಯ ಜೊತೆ ಕಾಮೆಂಟ್ ಮಾಡುತ್ತಿದ್ದಾರೆ. ಡಿಸೆಂಬರ್ 31 ರಂದು ಪೋಸ್ಟ್ ಆಗಿರುವ ಈ ಫೋಟೋವನ್ನು 1.2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು,  ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಮೊದಲು ಕಳೆದ ಅಕ್ಟೋಬರ್ ತಿಂಗಳಲ್ಲಿ ಮುಖ್ಯಮಂತ್ರಿಯವರು ಗೋರಖ್‌ಪುರದ ಮೃಗಾಲಯದಲ್ಲಿ (Gorakhpur Zoo) ಪುಟ್ಟ ಚಿರತೆ ಮರಿಗೆ (leopard cubs) ಆಹಾರ ನೀಡಿ ಮುದ್ದಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 

ಜಗಮೋಹನ್‌ ರೆಡ್ಡಿ ದೇಶದ ಶ್ರೀಮಂತ ಮುಖ್ಯಮಂತ್ರಿ, ನಮ್ಮ ಸಿಎಂ ಬೊಮ್ಮಾಯಿ ಅವರ ಆಸ್ತಿ ಎಷ್ಟು?

 

Follow Us:
Download App:
  • android
  • ios