Asianet Suvarna News Asianet Suvarna News

ಉತ್ತರ ಪ್ರದೇಶ ಸಂಪುಟ ವಿಸ್ತರಣೆ: ಜಿತನ್ ಪ್ರಸಾದ್ ಸೇರಿ 7 ಸಚಿವರು ಪ್ರಮಾಣ ವಚನ ಸ್ವೀಕಾರ!

  • ಉತ್ತರ ಪ್ರದೇಶ ಸಂಪುಟ ವಿಸ್ತರಿಸಿದ ಯೋಗಿ ಆದಿತ್ಯನಾಥ್
  • ಯೋಗಿ ಸಂಪುಟ ಸೇರಿದ 7 ಸಚಿವರು, ಪ್ರಮಾಣವಚನ ಸ್ವೀಕಾರ
  • ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಜಿತನ್ ಪ್ರಸಾದ್‌ಗೆ ಮಂತ್ರಿಗಿರಿ
     
Uttar Pradesh cabinet expansion Jitin Prasada and six others take oath joins Yogi Adityanath Govt ckm
Author
Bengaluru, First Published Sep 26, 2021, 8:31 PM IST
  • Facebook
  • Twitter
  • Whatsapp

ಉತ್ತರ ಪ್ರದೇಶ(ಸೆ.26): ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದೆ ಉತ್ತರ ಪ್ರದೇಶ ಸಂಪುಟ ವಿಸ್ತರಣೆ ಕೊನೆಗೂ ನೆರವೇರಿದೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರೋ ಮೂಲಕ ಭಾರಿ ಸದ್ದು ಮಾಡಿದ್ದ ಜಿತಿನ್ ಪ್ರಸಾದ್ ಸೇರಿದಂತೆ 7 ಸಚಿವರು ಇಂದು ಯೋಗಿ ಸಂಪುಟ ಸೇರಿದ್ದಾರೆ. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರಾ ಕಾರ್ಯಕ್ರಮದಲ್ಲಿ 7 ಸಚಿವರು ಯೋಗಿ ಸರ್ಕಾರ ಸೇರಿಕೊಂಡಿದ್ದಾರೆ.

2017ಕ್ಕೂ ಮುನ್ನ ಉ.ಪ್ರ. ಆಳುತ್ತಿದ್ದ ಪಾತಕಿಗಳು ಈಗ ಜೈಲು ಸೇರಿದ್ದಾರೆ: ಮೋದಿ!

ಲಕ್ನೋದ ರಾಜಭನದಲ್ಲಿ ನಡೆದ ಕಾರ್ಯಕ್ರಮದಲ್ಲಿ 7 ಸಚಿವರಿಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಪ್ರತಿಜ್ಞಾವಿಧಿ ಬೋದಿಸಿದ್ದಾರೆ. 

 

ಯೋಗಿ ಸಂಪುಟ ಸೇರಿದ 7 ಸಚಿವರ ವಿವರ:
ಜಿತನ್ ಪ್ರಸಾದ್:
ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ್, ರಾಹುಲ್ ಗಾಂಧಿ ಆಪ್ತರಾಗಿದ್ದರು. ಆದರೆ ಕಾಂಗ್ರೆಸ್ ತೊರೆದು ಜೂನ್ ತಿಂಗಳಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಇದೀಗ ಜಿತನ್ ಪ್ರಸಾದ್ ಯೋಗಿ ಸಂಪುಟ ಸೇರಿಕೊಂಡಿದ್ದಾರೆ.

ಕಾಯಕವೇ ಕೈಲಾಸ: ಮೋದಿ 7 ವರ್ಷವಾದರೆ ಯೋಗಿ 4 ವರ್ಷ, ಒಂದೂ ರಜೆ ಪಡೆದಿಲ್ಲ!

ಪಾಲ್ತು ರಾಮ್:
ಪಾಲ್ತು ರಾಮ್ ಬಲರಾಮ್‌ಪುರ ಸದಾರ್ ಕ್ಷೇತ್ರದ ಬಿಜೆಪಿ ಶಾಸಕ. ದಲಿತ ಸಮದಾದಯ ನಾಯಕ ವೃತ್ತಿಯಲ್ಲಿ ಕೃಷಿಕ ಅನ್ನೋದು ಮತ್ತೊಂದು ವಿಶೇಷ.

 

ಸಂಜೀವ್ ಕುಮಾರ್:
2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋನಬದ್ರಾದ ಒಬ್ರಾ ಕ್ಷೇತ್ರದಿಂದ ಆರಿಸಿ ಬಂದ ಸಂಜೀವ್ ಕುಮಾರ್ ಮೊದಲ ಬಾರಿ ಶಾಸಕರಾಗಿದ್ದರು. ಇದೀಗ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆ, ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ!

ಸಂಗೀತಾ ಬಲ್ವಂತ್:
ಗಾಝಿಪುರ್ ಸದಾರ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ಸಂಗೀತಾ ಬಲ್ವಂತ್ , ಜಮ್ಮು ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗರ್ವನರ್ ಮನೋಜ್ ಸಿನ್ಹ ಆಪ್ತರಾಗಿದ್ದಾರೆ.

ದಿನೇಶ್ ಕಾತಿಕ್:
ಮೀರತ್‌ನ ಹಸ್ತಿನಾಪುರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ದಿನೇಶ್ ಕಾತಿಕ್ ದಲಿತ ಸಮುದಾಯದ ಪ್ರಬಲ ನಾಯಕ, ಶಾಲಾ ದಿನದಿಂದಲೇ ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡ ದಿನೇಶ್ ಕಾತಿಕ್ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಧರ್ಮವೀರ ಪ್ರಜಾಪತ್:
ಕಳೆದ 20 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ದುಡಿಯುತ್ತಿರುವ ದರ್ಮವೀರ ಪ್ರಜಾಪತ್, ಆಗ್ರ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಹಿಂದುಳಿದ ಸಮುದಾಯದ ನಾಯಕನಾಗಿದ್ದಾರೆ.

ಚತ್ರಪಾಲ್ ಸಿಂಗ್ ಗಂಗಾವರ್:
64 ವರ್ಷದ ಚತ್ರಪಾಲ್ ಸಿಂಗ್ ಬಹೇರಿ ಕ್ಷೇತ್ರದ ಶಾಸಕರಾಗಿದ್ದಾರೆ. 

Follow Us:
Download App:
  • android
  • ios