ಮಲಗಿದ್ದ ಬಾಲಕನ ಕಾಲಿನಿಂದ ಒದ್ದು ಎಬ್ಬಿಸಿದ ಪೊಲೀಸ್: ವೀಡಿಯೋ ವೈರಲ್ ವ್ಯಾಪಕ ಆಕ್ರೋಶ
ರೈಲು ನಿಲ್ದಾಣವೊಂದರ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬರು ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ಬಲ್ಲಿಯಾ: ರೈಲು ನಿಲ್ದಾಣವೊಂದರ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬರು ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ ಪೊಲೀಸೊಬ್ಬ ಎಳಿಸುತ್ತಿದ್ದಾನೆ. ವೈರಲ್ ಆಗಿರುವ ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಯ ಕಾಲು ಮಲಗಿದ್ದ ಬಾಲಕನ ಹೆಗಲ ಮೇಲಿರುವುದನ್ನು ಕಾಣ ಬಹುದಾಗಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕರುಣೆ ಇಲ್ಲದ ಪೊಲೀಸ್ ಪೇದೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಉತ್ತರಪ್ರದೇಶದ ಬಲಿಯಾದ ಬೆಲ್ತಾರ ರೋಡ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವೀಡಿಯೋದಲ್ಲಿ ಬಾಲಕ ಪ್ಲಾಟ್‌ಫಾರ್ಮ್‌ನಲ್ಲೇ ನಿದ್ದೆಗೆ ಜಾರಿದ್ದಾನೆ. ಈ ಬಾಲಕನ್ನು ಪೊಲೀಸ್ ಕರುಣೆ ಇಲ್ಲದೇ ಒದೆಯುತ್ತಿದ್ದಾನೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಸ್ಪಂದಿಸಿರುವ ರೈಲ್ವೆ ಇಲಾಖೆ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸಿದೆ. ಅಲ್ಲದೇ ಸ್ಥಳೀಯ ಕೆಲ ಸಂಘಟನೆಗಳು ಈ ವೀಡಿಯೋ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದು, ನಂತರ ರೈಲ್ವೆಯ ರಕ್ಷಣಾ ಪಡೆ ತನಿಖೆ ಆದೇಶಿಸಿತ್ತು, ಬಳಿಕ ಈ ಕೃತ್ಯದಲ್ಲಿ ಭಾಗಿಯಾದ ಅಧಿಕಾರಿಯನ್ನು ಗುರುತಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರೈಲು ನಿಲ್ದಾಣದಲ್ಲಿ ಮಲಗಿದ ಪ್ರಯಾಣಿಕರಿಗೆ ನೀರೆರಚಿದ ಪೊಲೀಸ್
ಕೆಲ ದಿನಗಳ ಹಿಂದೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ಪ್ರಯಾಣಿಕರ ಮೇಲೆ ಪೊಲೀಸ್ ಪೇದೆಯೋರ್ವ ನೀರೆರಚಿದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಜನ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತೀಯ ರೈಲ್ವೆಯಲ್ಲಿ ದಿನವೂ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಬಹಳ ದೂರ ಪ್ರಯಾಣಿಸುವ ಮಧ್ಯಮ ವರ್ಗದ ಜನ ರೈಲನ್ನೇ ಹೆಚ್ಚು ಬಳಸುತ್ತಾರೆ. ಅಗ್ಗ ಹಾಗೂ ಆರಾಮದಾಯಕವಾಗಿರುವುದು ಇದಕ್ಕೆ ಕಾರಣ. ಹೀಗೆ ದೂರ ದೂರ ಪ್ರಯಾಣಿಸುವವರಿಗೆ ಸಮಯಕ್ಕೆ ತಕ್ಕಂತೆ ರೈಲುಗಳು ಸಿಗುವುದಿಲ್ಲ, ಇದರಿಂದ ಬಹಳ ಹೊತ್ತು ಕೆಲವರು ರೈಲು ನಿಲ್ದಾಣದಲ್ಲಿ ಕಾಯಲೇಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹವರು ರೈಲು ನಿಲ್ದಾಣದಲ್ಲಿಯೇ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಮಲಗಿರುವುದನ್ನು ನೀವೆಲ್ಲಾ ಗಮನಿಸಿರಬಹುದು. ಆದರೆ ಹೀಗೆ ಮಲಗಿದ್ದ ಪ್ರಯಾಣಿಕರ ಮೇಲೆ ರೈಲ್ವೆ ಪೊಲೀಸ್ ಪೇದೆಯೋರ್ವ ನೀರು ಎರಚುತ್ತಾ ಸಾಗಿದ್ದು, ಈ ವೀಡಿಯೋಗೆ ವ್ಯಾಪಕ ಆಕ್ರೋಶ ವ್ಯಕವಾಗಿತ್ತು.
ಮಿಯಾಂವ್ ಮಿಯಾಂವ್... ಮಾರ್ಜಾಲಕ್ಕೆ ಮೆಟ್ರೋ ಸ್ಟೇಷನ್ ಮಾಸ್ಟರ್ ಪಟ್ಟ
ಪುಣೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ಪೇದೆಯೋರ್ವ ಕೈಯಲ್ಲಿ ಲಾಠಿ ಹಿಡಿದುಕೊಂಡು ಬಾಟಲೊಂದರಲ್ಲಿ ನೀರಿಡಿದುಕೊಂಡು ಪ್ಲಾಟ್‌ಫಾರ್ಮ್‌ನಲ್ಲಿ ಸಾಲಾಗಿ ಮಲಗಿದ್ದವರ ಮುಖದ ಮೇಲೆ ನೀರು ಸುರಿಯುತ್ತಾ ಮುಂದೆ ಸಾಗಿದ್ದಾನೆ. ಸಡನ್ ಆಗಿ ಮುಖದ ಮೇಲೆ ನೀರು ಬಿದ್ದಿದ್ದರಿಂದ ಮಲಗಿದ್ದ ಪ್ರಯಾಣಿಕರು ಗಾಬರಿಯಿಂದ ಎದ್ದು ಕುಳಿತು ಸುತ್ತಲೂ ಆತಂಕದಿಂದ ನೋಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ರುಪೇನ್ ಚೌಧರಿ ಎಂಬುವವರು ಪೋಸ್ಟ್ ಮಾಡಿದ್ದು, ಮಾನವತೆಗೆ ಆರ್‌ಐಪಿ ಎಂದು ಬರೆದಿದ್ದಾರೆ.
ಟ್ರೈನ್ ಹೋದ್ರೆ ಮತ್ತೊಂದು ಬರುತ್ತೆ ಆದ್ರೆ ಜೀವ: ಇಷ್ಟೊಂದು ರಿಸ್ಕ್ ಯಾಕೆ: ವೀಡಿಯೋ ವೈರಲ್