ಮಿಯಾಂವ್‌ ಮಿಯಾಂವ್‌... ಮಾರ್ಜಾಲಕ್ಕೆ ಮೆಟ್ರೋ ಸ್ಟೇಷನ್ ಮಾಸ್ಟರ್ ಪಟ್ಟ

ಬೆಕ್ಕೊಂದನ್ನು ಮೆಟ್ರೋದಲ್ಲಿ ಸ್ಟೇಷನ್ ಮಾಸ್ಟರ್ ಮಾಡಲಾಗಿದೆ.  ಮಿಕನ್ ಎಂಬ ಹೆಸರಿನ ಈ ಬೆಕ್ಕಿಗೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ 59 ಸಾವಿರ ಫಾಲೋವರ್ಸ್‌ಗಳಿದ್ದು, ಸೆಲೆಬ್ರಿಟಿ ಬೆಕ್ಕು ಎನಿಸಿದೆ.

Meow Meow celebrity cat Mikan has been appointed Metro Station Master akb

ನೀವು ಬೆಕ್ಕು ಪ್ರಿಯರ. ಹಾಗಿದ್ರೆ ಈ ಸ್ಟೋರಿ ನೀವು  ಇಷ್ಟಪಡಬಹುದು. ಬೆಕ್ಕೊಂದನ್ನು ಮೆಟ್ರೋದಲ್ಲಿ ಸ್ಟೇಷನ್ ಮಾಸ್ಟರ್ ಮಾಡಲಾಗಿದೆ.  ಮಿಕನ್ ಎಂಬ ಹೆಸರಿನ ಈ ಬೆಕ್ಕಿಗೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ 59 ಸಾವಿರ ಫಾಲೋವರ್ಸ್‌ಗಳಿದ್ದು, ಸೆಲೆಬ್ರಿಟಿ ಬೆಕ್ಕು ಎನಿಸಿದೆ.  ನಾಯಿ ಹಾಗೂ ಬೆಕ್ಕುಗಳು ರಸ್ತೆಗಳಲ್ಲಿ ಗಲ್ಲಿಗಳಲ್ಲಿ ರೈಲು, ಬಸ್ ನಿಲ್ದಾಣಗಳಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುತ್ತವೆ. ಆದರೆ  ಸ್ಟೇಷನ್ ಮಾಸ್ಟರ್ ಆಗಿ ಡ್ಯೂಟಿ ಮಾಡೋದನ್ನಾ ನೋಡಿದ್ದೀರಾ?  ನೋಡ್ಬೇಕು ಎಂದ್ರೆ ನೀವು  ತೈವಾನ್‌ನ ಮೆಟ್ರೋ ನಿಲ್ದಾಣಕ್ಕೆ ಬರಬೇಕು, ಸೋಶಿಯಲ್ ಮೀಡಿಯಾದಲ್ಲಿ 56 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿ ಸೆಲೆಬ್ರಿಟಿಯಾಗಿರುವ ಬೆಕ್ಕಿನ ಗೌರವಾರ್ಥ ಇಲ್ಲಿ ಬೆಕ್ಕಿಗೆ ಸ್ಟೇಷನ್ ಮಾಸ್ಟರ್ ಪಟ್ಟ ಕಟ್ಟಲಾಗಿದೆ. ಇದು ಪ್ರಾಣಿಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ.

ಸೇನೆಗಳಲ್ಲಿ(Army) ಪೊಲೀಸ್‌ ಇಲಾಖೆಯಲ್ಲಿ (Police station) ಶ್ವಾನಗಳು ಕೆಲಸ ಮಾಡುವುದನ್ನು ನೀವು ನೋಡಿರಬಹುದು. ಆದರೆ ಬೆಕ್ಕುಗಳನ್ನು  ಸೇವೆಗೆ ತೆಗೆದುಕೊಂಡ ಘಟನೆಗಳು ತೀರಾ ಕಡಿಮೆ. ಆದರೂ ಈಗ ಬೆಕ್ಕನ್ನು ಸೇವೆಗೆ ಸೇರಿಸಿಕೊಂಡ ಕಾರಣಕ್ಕೆ ತೈವಾನ್‌ ಮೆಟ್ರೋ ಸುದ್ದಿಯಲ್ಲಿದೆ. ತೈವಾನ್ ನ್ಯೂಸ್ ವೆಬ್‌ಸೈಟ್ ಪ್ರಕಾರ,  ತೈವಾನ್‌ನ ಕಾಹ್ಸಿಯುಂಗ್‌ ಮಾಸ್ ರಾಪಿಡ್ ಟ್ರಾನ್ಸಿಟ್, 37 ನಿಲ್ದಾಣಗಳೊಂದಿಗೆ ಕಾಹ್ಸಿಯುಂಗ್‌ನ ಮೆಟ್ರೋಪಾಲಿಟನ್ ಪ್ರದೇಶವನ್ನು ಒಳಗೊಳ್ಳುವ ಮೆಟ್ರೋ ನೆಟ್‌ವರ್ಕ್ ಆಗಿದ್ದು, ಏಪ್ರಿಲ್ 4 ರಂದು ಇದು ತನ್ನ 15 ನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ಮೆಟ್ರೋ ಮಾರ್ಗದ ಈ 15 ನೇ ವಾರ್ಷಿಕೋತ್ಸವ ದಿನದಂದೇ ಅಲ್ಲಿ ಮಕ್ಕಳ ದಿನಾಚರಣೆ ಬಂದಿದ್ದು, ಆ ಸಂದರ್ಭವನ್ನು ವಿಶೇಷವಾಗಿ ಗುರುತಿಸಲು ಮಿಕಾನ್ ಎಂಬ ಪ್ರಸಿದ್ಧ ಬೆಕ್ಕಿಗೆ ಸ್ಟೇಷನ್ ಮಾಸ್ಟರ್  ಹುದ್ದೆ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. 

ಮತ್ತೊಂದು ಗಮನಾರ್ಹ ಅಂಶವೆಂದರೆ ಈ ಮಿಕಾನ್ ಹೆಸರಿನ ಈ ಬೆಕ್ಕು, ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಬಹಳ ಸಮಯದಿಂದ ಯಾವಾಗಲೂ ಸದಾ ಸುತ್ತಾಡುತ್ತಿರುತ್ತಿದ್ದು, ಇಲ್ಲಿನ ಪ್ರಯಾಣಿಕರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಚಿರಪರಿಚಿತವಾಗಿದೆ.  ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಬೆಕ್ಕು ಹವಾ ಸೃಷ್ಟಿಸಿದೆ. ಮಿಕಾನ್ ಬೆಕ್ಕಿನ ಪ್ರೊಫೈಲ್‌ನಲ್ಲಿ  ದಿನವೂ ಬೆಕ್ಕಿನ ಹಲವು ಚಟುವಟಿಕೆಗಳ ಫೋಟೋಗಳನ್ನು ಪೋಸ್ಟ್ ಮಾಡಲಾಗುತ್ತಿರುತ್ತದೆ.  ಮುದ್ದಾದ ಫೋಟೋ ಹಾಗೂ ವಿಡಿಯೋಗಳು ಅಲ್ಲಿ ರಾರಾಜಿಸುತ್ತಿರುತ್ತದೆ. ಮಿಕಾನ್ ಅನ್ನು ಹೆಚ್ಚಾಗಿ ಸಿಯಾಟೌ ಶುಗರ್ ರಿಫೈನರಿ ಮೆಟ್ರೋ ನಿಲ್ದಾಣದಲ್ಲಿ ಕಾಣಬಹುದಾಗಿದೆ. 

ಇತ್ತ ಬೆಕ್ಕನ್ನು ಸ್ಟೇಷನ್‌ ಮಾಸ್ಟರ್ ಮಾಡಿರುವುದಕ್ಕೆ ಪ್ರಾಣಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.   ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸ್ಟೇಷನ್ ಮಾಸ್ಟರ್ ಆದ ಬಳಿಕ ಈ ಬೆಕ್ಕಿಗೆ  ಆರಾಮದಾಯಕವಾಗಿ ಬದುಕುವಷ್ಟು ವೇತನ ಪೂರೈಸಲಾಗುತ್ತದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ.  ಮತ್ತೆ ಕೆಲವರು ಈ ಬೆಕ್ಕನ್ನು ನೋಡಿದರೆ ಬೆಕ್ಕು ತನ್ನ ರೆಸ್ಯುಮೆಯಲ್ಲಿ (CV) ಸುಳ್ಳು ಹೇಳಿದಂತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ರೈಲು ನಿಲ್ದಾಣದಲ್ಲಿ ಬೆಕ್ಕು ಉದ್ಯೋಗಕ್ಕೆ ಸೇರಿದಂತಹ  ಪ್ರಕರಣ ಇದೇ ಮೊದಲೇನಲ್ಲ. 2021ರಲ್ಲಿ  ಮುದ್ದಾದ ಮೊಗ್ಗಿ ಹೆಸರಿನ ಬೆಕ್ಕನ್ನು  ರೈಲು ನಿಲ್ದಾಣದಲ್ಲಿ ಇಲಿಗಳನ್ನು ಹಿಡಿಯುವುದಕ್ಕಾಗಿ ಮೌಸ್ ಕ್ಯಾಚರ್ ಹುದ್ದೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಮೆಟ್ರೋ ಪ್ರಕಾರ,  6 ವರ್ಷದ ಈ ಬೆಕ್ಕು ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಸ್ಟೋರ್‌ಬ್ರಿಡ್ಜ್ ಜಂಕ್ಷನ್ ನಿಲ್ದಾಣದಲ್ಲಿ ಮೌಸ್‌ ಕ್ಯಾಚರ್ ಆಗಿ ಅಧಿಕೃತವಾಗಿ ಕೆಲಸಕ್ಕೆ ಸೇರಿತ್ತು.  ಅದಕ್ಕೂ ಮೊದಲು, ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನ ಕಿನೋಕಾವಾದಲ್ಲಿನ ಕಿಶಿಗಾವಾ ಲೈನ್‌ನಲ್ಲಿರುವ ಕಿಶಿ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಮತ್ತು ಆಪರೇಟಿಂಗ್ ಆಫೀಸರ್ ಆಗಿ ಕೆಲಸ ಮಾಡಿ ಹೆಣ್ಣು ಬೆಕ್ಕು  ಕ್ಯಾಲಿಕೋ ಬೆಕ್ಕು ಖ್ಯಾತಿ ಗಳಿಸಿತು.

 

Latest Videos
Follow Us:
Download App:
  • android
  • ios