50 ವರ್ಷಗಳಿಂದ ನಿರಂತರ ಬರ್ಗರ್ ತಿಂದು ಗಿನ್ನೆಸ್ ಪುಟ ಸೇರಿದ

  • 50 ವರ್ಷಗಳಿಂದ ನಿರಂತರ ಬರ್ಗರ್ ತಿನ್ನುತ್ತಿರುವ ಅಮೆರಿಕಾ ವ್ಯಕ್ತಿ
  • ಗಿನ್ನೆಸ್ ದಾಖಲೆ ಪುಟ ಸೇರಿದ ಡಾನ್ ಗೊರ್ಸ್‌ಕೆ
  • ಬರ್ಗರ್ ತಿನ್ನಲು ಆರಂಭಿಸಿದ 50ನೇ ವರ್ಷಾಚರಣೆ
US man celebrates 50 years of eating McDonalds burger every day akb

ಫಾಸ್ಟ್ ಫುಡ್ ಯಾರಿಗೆ ಇಷ್ಟ ಇಲ್ಲ ಹೇಳಿ. ಇತ್ತೀಚೆಗಂತು ಬಹುತೇಕ ಯುವ ಸಮೂಹ ಫಾಸ್ಟ್ಫುಡ್‌ ಎಂದರೆ ಬಾಯ್ಬಿಡುತ್ತಾರೆ. ಬರ್ಗರ್‌ ಫ್ರಂಚ್ ಪ್ರೈಸ್‌ ಜೊತೆ ಕೊಕ್ ಕುಡಿಯುತ್ತಾ ಎಂಜಾಯ್ ಮಾಡುವುದನ್ನು ಬಹುತೇಕರು ಇಷ್ಟ ಪಡುತ್ತಾರೆ. ಆದರೆ ಅಮೆರಿಕಾದ ವ್ಯಕ್ತಿಯೊಬ್ಬರು 50 ವರ್ಷಗಳಿಂದ ನಿರಂತರ ಮೆಕ್‌ಡೊನಾಲ್ಡ್‌ ಬರ್ಗರ್ ತಿನ್ನುತ್ತಿದ್ದು ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಡಾನ್ ಗೊರ್ಸ್‌ಕೆ (Don Gorske) ಎಂಬ ಅಮೆರಿಕನ್ ವ್ಯಕ್ತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆ ತಮ್ಮ ಜೀವಮಾನದಲ್ಲೇ ಅತೀಹೆಚ್ಚು ಬರ್ಗರ್ ತಿಂದ ವ್ಯಕ್ತಿ ಎಂದು ಗುರುತಿಸಿ ಗಿನ್ನೆಸ್ ಪುಟಕ್ಕೆ ಸೇರಿಸಿದೆ. 

ಮೇ.17 ರಂದು ಇವರು ಮೆಕ್‌ಡೊನಾಲ್ಡ್‌ (McDonald) ಬರ್ಗರ್‌ (burger) ತಿನ್ನಲು ಶುರು ಮಾಡಿದ 50ನೇ ವರ್ಷವನ್ನು ಆಚರಿಸಲಾಗುತ್ತಿದೆ. ಈತ ಬಹುತೇಕ ನಿರಂತರ ಈ ಬರ್ಗರ್ ತಿನ್ನುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ 50 ವರ್ಷದಲ್ಲಿ ಡಾನ್ ಗೊರ್ಸ್‌ಕೆ ಕೇವಲ ತಮ್ಮ ಜೀವಮಾನದಲ್ಲಿ 8 ದಿನ ಮಾತ್ರ ಬರ್ಗರ್ ತಿಂದಿಲ್ಲವಂತೆ. ಇವರು ಪ್ರತಿದಿನ ಎರಡು ದೊಡ್ಡ ಮೆಕ್ ಬರ್ಗರ್‌ನ್ನು ತಿಂದಿದ್ದಾರೆ. 

 

ಇವರು ತಾವಿರುವ ವಿಸ್ಕಾನ್ಸಿನ್ (Wisconsin) ಪ್ರದೇಶದ ಸಮೀಪದ ಫಾಂಡ್ ಡು ಲ್ಯಾಕ್‌ನಲ್ಲಿರುವ ( Fond du Lac) ಮೆಕ್‌ ಡೊನಾಲ್ಡ್ ರೆಸ್ಟೋರೆಂಟ್‌ಗೆ ತಮ್ಮ ದೊಡ್ಡ ಮ್ಯಾಕ್ 50ನೇ ವರ್ಷಾಚರಣೆ ಮಾಡಲು ಆಗಮಿಸಿದ್ದರು. ಇದೇ ಮೆಕ್‌ ಡೊನಾಲ್ಡ್‌ ರೆಸ್ಟೋರೆಂಟ್‌ನಲ್ಲಿ ಅವರು 1972ರಲ್ಲಿ ತಮ್ಮ ಮೊದಲ ಬರ್ಗರ್‌ನ್ನು ಸೇವಿಸಿದ್ದರು. 

ಸಹೋದ್ಯೋಗಿಯೊಂದಿಗೆ ಸಂಬಂಧ: ಮೆಕ್'ಡೋನಾಲ್ಡ್ ಸಿಇಒ ಕಿಕ್ ಔಟ್!

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯೂ ಈ ಬರ್ಗರ್ ಫ್ರೆಮಿ ಡಾನ್ ಗೊರ್ಸ್ಕೆ ಅವರ ಫೋಟೋವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಮೆಕ್ ಡೊನಾಲ್ಡ್ ಸಂಸ್ಥೆ ಅದರ ಹಳೆಯ ಗ್ರಾಹಕನನ್ನು ಅವರ 50ನೇ ವರ್ಷಾಚರಣೆಯಂದು ಹೇಗೆ ಸ್ವಾಗತಿಸಿತು ಎಂಬುದನ್ನು ತೋರಿಸುತ್ತಿದೆ. ಮೆಕ್‌ ಡೊನಾಲ್ಸ್ ರೆಸ್ಟೋರೆಂಟ್‌ನವರು ಹೊರಭಾಗದಲ್ಲಿ ಒಂದು ಬೋರ್ಡ್‌ನ್ನು ಹಾಕಿದ್ದರು. ಅದರಲ್ಲಿ ಕಂಗ್ರಾಟ್ಸ್‌ ಡಾನ್ ಮೆಕ್ ಜೊತೆ 50 ವರ್ಷವನ್ನು ಕಳೆದಿದ್ದೀರಿ ಎಂದು ಬರೆದಿದ್ದರು. ಅಲ್ಲದೇ ಆ ಬೋರ್ಡ್‌ನಲ್ಲಿ ಡಾನ್ ಗೊರ್ಸ್ಕೆ ಅವರು ಮೆಕ್‌ ಡೊನಾಲ್ಡ್ ಬರ್ಗರ್‌ನ್ನು ತಿನ್ನುತ್ತಿರುವ ಅನೇಕ ಹಳೆಯ ಫೋಟೋಗಳಿದ್ದವು. ಈ ಪೋಸ್ಟ್‌ನ್ನು 65,000 ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ. 

McDonald Meal ಬಾತ್‌ರೂಂನಲ್ಲಿ ಸಿಕ್ತು 60 ವರ್ಷ ಹಳೆ ಮೆಕ್‌ಡೋನಾಲ್ಡ್ ಫುಡ್, ಪೊಟ್ಟಣ ತೆರೆದ ಮನೆ ಮಾಲೀಕನಿಗೆ ಅಚ್ಚರಿ!
 

ನಾನು ಬರ್ಗರ್‌ನ್ನು ಇಷ್ಟ ಪಡುವಂತೆ ಯಾವ ಫುಡ್ ಅನ್ನು ಇಷ್ಟ ಪಟ್ಟಿಲ್ಲ. ಇದು ವಿಶ್ವದಲ್ಲೇ ಅತ್ಯುತ್ತಮ ಸ್ಯಾಂಡ್ವಿಚ್‌. ನಾನೇನದರು ಇಷ್ಟ ಪಟ್ಟರೆ ನಾನು ಅದನ್ನು ಕೊನೆಯವರೆಗೂ ಇಷ್ಟ ಪಡುವೆ ಎಂದು ಡಾನ್‌ ಗೊರ್ಸ್ಕೆ ಅವರು ಹೇಳಿದ್ದಾರೆ. ಅಂದಾಜು ಇದುವರೆಗೆ 30,000 ಕ್ಕೂ ಹೆಚ್ಚು ಬರ್ಗರ್‌ನ್ನು ತಿಂದಿರುವ ಡಾನ್‌ ಗೊರ್ಸ್ಕೆ ಅವರ ಆರೋಗ್ಯ ಉತ್ತಮವಾಗಿದೆ. ರಕ್ತ ಹಾಗೂ ಸಕ್ಕರೆ ಪ್ರಮಾಣ ಉತ್ತಮ ಹಂತದಲ್ಲಿದೆ. ರಕ್ತದೊತ್ತಡ ಪ್ರಮಾಣವೂ ಉತ್ತಮವಾಗಿದೆ. ಅವರು ಉತ್ತಮ ಆರೋಗ್ಯಕ್ಕಾಗಿ ದಿನವೂ ಆರು ಮೈಲುಗಳಷ್ಟು ನಡೆಯುತ್ತಾರಂತೆ. 

ಈ ರೆಕಾರ್ಡ್‌ನ್ನು ಯಾರೂ ಬ್ರೇಕ್ ಮಾಡಲಾರರು ಎಂದು ಇವರ ಪೋಸ್ಟ್‌ಗೆ  ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಇವರ ಬರ್ಗರ್ ಪ್ರೇಮವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. 
 

Latest Videos
Follow Us:
Download App:
  • android
  • ios