ಯುಪಿಐ 4 ದೇಶಗಳಿಗೆ ವಿಸ್ತರಣೆ: ಶ್ರೀಲಂಕಾದಲ್ಲೂ ಈಗ ಯುಪಿಐ ಹಣ ಪಾವತಿ ಸೇವೆ ಲಭ್ಯ

ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಲಂಕಾದಲ್ಲೂ ಭಾರತದ ಯುಪಿಐ ಡಿಜಿಟಲ್‌ ಹಣ ಪಾವತಿ ಸೇವೆಯನ್ನು ಆರಂಭಿಸಲು ಲಂಕಾ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಲಾಗಿದೆ.

UPI service expansion to 4 countries UPI payment service is now available in Sri Lanka too akb

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಲಂಕಾದಲ್ಲೂ ಭಾರತದ ಯುಪಿಐ ಡಿಜಿಟಲ್‌ ಹಣ ಪಾವತಿ ಸೇವೆಯನ್ನು ಆರಂಭಿಸಲು ಲಂಕಾ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಲಾಗಿದೆ. ಈ ಮೂಲಕ ಯುಪಿಐ ಸೇವೆಗೆ ಒಪ್ಪಿದ 4ನೇ ದೇಶ ಎಂಬ ಖ್ಯಾತಿಗೆ ಲಂಕಾ ಭಾಜನವಾಗಿದೆ. ಈವರೆಗೆ ಫ್ರಾನ್ಸ್‌, ಯುಎಇ ಹಾಗೂ ಸಿಂಗಾಪುರಗಳು ಯುಪಿಐ ಸೇವೆಯಡಿಯ ಪಾವತಿಗಳನ್ನು ತಮ್ಮ ರಾಜ್ಯದಲ್ಲಿ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದವು.

ಭಾರತಕ್ಕೆ ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಆಗಮಿಸಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ, ಭಾರತದ ಯುಪಿಐ ಪೇಮೆಂಟ್‌ ವ್ಯವಸ್ಥೆಯಡಿಯ ಪಾವತಿಗಳನ್ನು ಶ್ರೀಲಂಕಾದಲ್ಲೂ ಸ್ವೀಕರಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇನ್ನು ಶ್ರೀಲಂಕಾದಲ್ಲಿನ ತಮಿಳು ಸಮುದಾಯದ ಸುರಕ್ಷತೆ ಕಾಪಾಡಬೇಕು ಎಂದು ಮೋದಿ ಅವರು ರನಿಲ್‌ಗೆ ಕೋರಿದರು. ಈ ನಡುವೆ, ಉಭಯ ದೇಶಗಳ ನಡುವಿನ ಬಾಂಧವ್ಯ ಬಲಗೊಳಿಸಲು ಬದ್ಧತೆ ವ್ಯಕ್ತಪಡಿಸಲಾಯಿತು ಎಂದು ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫ್ರಾನ್ಸ್‌ನಲ್ಲೂ ಭಾರತದ ಯುಪಿಐ ಸೇವೆಗೆ ಚಾಲನೆ

ಆ.15ರೊಳಗೆ ದೇಶದ ಎಲ್ಲಾ ಪಂಚಾಯತ್‌ಗಳಲ್ಲೂ ಯುಪಿಐ ಸೇವೆ!

Latest Videos
Follow Us:
Download App:
  • android
  • ios