ಆ.15ರೊಳಗೆ ದೇಶದ ಎಲ್ಲಾ ಪಂಚಾಯತ್‌ಗಳಲ್ಲೂ ಯುಪಿಐ ಸೇವೆ!

ಈ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ದೇಶದಲ್ಲಿರುವ ಎಲ್ಲಾ ಪಂಚಾಯತ್‌ಗಳು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಬಳಸಬೇಕು. ಎಲ್ಲಾ ಪಂಚಾಯತ್‌ಗಳು ಯುಪಿಐ ಸೇವೆ ಹೊಂದಿವೆ ಎಂದು ಘೋಷಿಸಬೇಕು ಎಂದು ಪಂಚಾಯತ್‌ ರಾಜ್‌ ಸಚಿವಾಲಯ ಸೂಚನೆ ನೀಡಿದೆ.  

all panchayats in the country must use digital payment for revenue collection UPI service in all panchayats of the country by August 15 akb

ನವದೆಹಲಿ: ಈ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ದೇಶದಲ್ಲಿರುವ ಎಲ್ಲಾ ಪಂಚಾಯತ್‌ಗಳು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಬಳಸಬೇಕು. ಎಲ್ಲಾ ಪಂಚಾಯತ್‌ಗಳು ಯುಪಿಐ ಸೇವೆ ಹೊಂದಿವೆ ಎಂದು ಘೋಷಿಸಬೇಕು ಎಂದು ಪಂಚಾಯತ್‌ ರಾಜ್‌ ಸಚಿವಾಲಯ ಸೂಚನೆ ನೀಡಿದೆ.  ಮುಖ್ಯಮಂತ್ರಿ, ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ರಾಜ್ಯಗಳು ಯುಪಿಐ ಪಂಚಾಯತ್‌ಗಳನ್ನು ಘೋಷಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಪಂಚಾಯತ್‌ ರಾಜ್‌ ಸಚಿವಾಲಯದ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಹೇಳಿದ್ದಾರೆ. ಅಲ್ಲದೇ ಈಗಾಗಲೇ ಶೇ.98ರಷ್ಟುಪಂಚಾಯಿತಿಗಳು ಯುಪಿಐ ಆಧಾರಿತ ಸೇವೆ ನೀಡುತ್ತಿವೆ. ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಮೂಲಕ ಸುಮಾರು 1.5 ಲಕ್ಷ ಕೋಟಿ ರು. ಪೇಮೆಂಟ್‌ ಮಾಡಲಾಗುತ್ತಿದೆ. ಚೆಕ್‌ ಮತ್ತು ನಗದು ರೂಪದಲ್ಲಿ ಪೇಮೆಂಟ್‌ ಮಾಡುವುದನ್ನು ಈಗಾಗಲೇ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಕ್ರೆಡಿಟ್ ಕಾರ್ಡ್ ಬಳಸಿ ಗೂಗಲ್ ಪೇ ಮೂಲಕ ಪಾವತಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಆಧಾರ್ ಬಳಸಿ UPI ಸಕ್ರಿಯಗೊಳಿಸಲು ಅವಕಾಶ;ಬಳಕೆದಾರರಿಗೆ ಹೊಸ ಸೌಲಭ್ಯ ಕಲ್ಪಿಸಿದ ಗೂಗಲ್ ಪೇ

Latest Videos
Follow Us:
Download App:
  • android
  • ios