ನಿಮ್ಮ ಆಧಾರ್‌ಕಾರ್ಡ್ ಅಪ್ಡೇಡ್ ಆಗಿದ್ಯಾ? ಸೆಪ್ಟೆಂಬರ್ 14 ಕಡೆ ದಿನ

ಆಧಾರ್‌ ಕಾರ್ಡ್‌ನಲ್ಲಿರುವ ಎಲ್ಲಾ ವಿವರಗಳು ಸ್ಪಷ್ಟವಾಗಿ ಅಪ್‌ಡೇಟ್‌ ಆಗಿರುವುದ್ನು ಖಚಿತಪಡಿಸಿಕೊಳ್ಳಲು ಯುಐಡಿಎಐ ಸೆಪ್ಟೆಂಬರ್ 14ರವರೆಗೆ ಗಡುವು ನೀಡಿದ್ದು, ಆ ಗಡುವಿನ ಮೊದಲು ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್‌ಡೇಟ್ ಮಾಡಬೇಕು ಇಲ್ಲದೇ ಹೋದರೆ ದಂಡ ಪಾವತಿಸಬೇಕಾಗುತ್ತದೆ.

Update your Aadhaar card by September 14 otherwise Pay the fine akb

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ ಯುಐಡಿಎಐ (UIDAI)ಯಾರು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್‌ ಮಾಡಿಸಿಕೊಂಡಿದ್ದಾರೋ  ಅವರು ತಮ್ಮ ಆಧಾರ್‌ಕಾರ್ಡನ್ನು ಇದುವರೆಗೆ ಅಪ್‌ಡೇಟ್ ಮಾಡಿಸಿಕೊಳ್ಳದೇ ಇದ್ದರೆ ಸೆಪ್ಟೆಂಬರ್‌ 14ರೊಳಗಾಗಿ ತಮ್ಮ ಆಧಾರ್‌ ಕಾರ್ಡ್‌ನ್ನು ಅಪ್‌ಡೇಟ್‌ ಮಾಡಿಸಿಕೊಳ್ಳಬೇಕು ಎಂದು ಘೋಷಣೆ ಮಾಡಿದೆ. ಆಧಾರ್‌ ಕಾರ್ಡನ್ನು ಅಪ್‌ಡೇಟ್ ಮಾಡಲು ಬಳಕೆದಾರರು ತಮ್ಮ ಐಡಿ ಕಾರ್ಡ್‌ (ಗುರುತು ಖಚಿತಪಡಿಸುವ ಕಾರ್ಡ್‌, ವೋಟರ್‌ ಐಡಿ ರೇಷನ್ ಕಾರ್ಡ್ ಇತ್ಯಾದಿ) ಹಾಗೂ ವಿಳಾಸದ ಮಾಹಿತಿ ನೀಡುವ ದಾಖಲೆಯನ್ನು ನೀಡಿ ಈ ಆಧಾರ್‌ ಕಾರ್ಡನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. 

ಆಧಾರ್‌ ಕಾರ್ಡ್‌ನಲ್ಲಿರುವ ಎಲ್ಲಾ ವಿವರಗಳು ಸ್ಪಷ್ಟವಾಗಿ ಅಪ್‌ಡೇಟ್‌ ಆಗಿರುವುದ್ನು ಖಚಿತಪಡಿಸಿಕೊಳ್ಳಲು ಯುಐಡಿಎಐ ಸೆಪ್ಟೆಂಬರ್ 14ರವರೆಗೆ ಗಡುವು ನೀಡಿದ್ದು, ಆ ಗಡುವಿನ ಮೊದಲು ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್‌ಡೇಟ್ ಮಾಡಬೇಕು ಇಲ್ಲದೇ ಹೋದರೆ ನಂತರ ನಿಮ್ಮ ಆಧಾರ್‌ ಕಾರ್ಡ್‌ನಲ್ಲ ಯಾವುದೇ ಬದಲಾವಣೆ ಮಾಡಬೇಕಾದರೂ ನೀವು 50 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ. ಯುಐಡಿಎಐನ ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿ (CIDR) ವ್ಯಕ್ತಿಗಳ ಜನಸಂಖ್ಯೆಯ ಪ್ರಕಾರ (demographic) ಮತ್ತು ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸುವುದರಿಂದ ಆಧಾರ್ ದೃಢೀಕರಣವು ಅತ್ಯಗತ್ಯವಾಗಿರುತ್ತದೆ.

ನಕಲಿ ಬಳಕೆದಾರರ ಪತ್ತೆಗೆ ಎಲ್‌ಪಿಜಿಗೂ ಆಧಾರ್‌ ಜೋಡಣೆ

ಹಾಗಾದರೆ ನಿಮ್ಮ ಆಧಾರ್‌ ಕಾರ್ಡ್ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡೋದು ಹೇಗೆ ?

ನಿಮ್ಮ ಆಧಾರ್‌ ಕಾರ್ಡ್‌ ನ್ನು ಆನ್‌ಲೈನ್‌ನಲ್ಲೇ ಅಪ್‌ಟೇಟ್ ಮಾಡೋವುದಕ್ಕೆ ಇಲ್ಲಿದೆ ಹಂತ ಹಂತವಾಗಿ ಮಾಹಿತಿ, 

  • ಮೊದಲಿಗೆ ಆಧಾರ್‌ ಪೋರ್ಟಲ್‌ myaadhaar.uidai.gov.in ಗೆ ಹೋಗಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಲಾಗಿನ್ ಆಗಿ, ಈಗ ನಿಮ್ಮ ಆಧಾರ್‌ಗೆ  ಲಿಂಕ್ ಆಗಿರುವ ರಿಜಿಸ್ಟ್ರೆಡ್ ಫೋನ್‌ ನಂಬರ್‌ಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ. 
  • ಒಮ್ಮೆ ಲಾಗಿನ್ ಆದ ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ಆಧಾರ್ ಅಪ್‌ಡೇಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಬಳಿಕ ಅಲ್ಲಿ ತೋರಿಸುವ ನಿಮ್ಮ ಗುರುತಿನ ವಿವರ ಹಾಗೂ ವಿಳಾಸದ ವಿವರ ಸರಿ ಇದೆಯೇ ಎಂಬುದನ್ನು ಪರಿಶೀಲಿಸಿ.
  • ಒಂದು ವೇಳೆ ನಿಮ್ಮ ಮಾಹಿತಿ ಅಲ್ಲಿ ಸರಿಯಾಗಿದ್ದಲ್ಲಿ ಅಲ್ಲಿರುವ ' ಮೇಲಿರುವ ಮಾಹಿತಿ ಸರಿಯಾಗಿದೆ ಎಂಬುದನ್ನು ನಾನು ಖಚಿತಡಿಸುತ್ತಿದ್ದೇನೆ' ಎಂಬ ಆಯ್ಯೆಯನ್ನು ಕ್ಲಿಕ್ ಮಾಡಿ
  • ನಂತರ ಅಲ್ಲಿರುವ  ಡ್ರಾಪ್-ಡೌನ್ ಮೆನುಗಳಿಂದ ಗುರುತು ಮತ್ತು ವಿಳಾಸ ಪರಿಶೀಲನೆಗಾಗಿ ನೀವು ಸಲ್ಲಿಸಲು ಬಯಸುವ ಡಾಕ್ಯುಮೆಂಟ್‌ಗಳನ್ನು ಆಯ್ಕೆಮಾಡಿ. 
  • ಆಯ್ಕೆಮಾಡಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ, ಪ್ರತಿ ಡಾಕ್ಯುಮೆಂಟ್‌ನ ಫೈಲೆ 2 ಎಂಬಿ ಗಾತ್ರ ಹಾಗೂ ಜೆಪಿಇಜಿ, ಪಿಎನ್‌ಜಿ ಅಥವಾ ಪಿಡಿಎಫ್ ಫಾರ್ಮೇಟ್‌ನಲ್ಲಿ ಇದೆ ಎಂಬುದನ್ನು ಖಚಿತಪಡಿಕೊಳ್ಳಿ. 
  • ಹಾಗೂ ನೀವು ಅಲ್ಲಿ ನೀಡಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಹಾಗೂ ನಿಮ್ಮ ಆಧಾರ್ ವಿವರಗಳ ಅಪ್‌ಡೇಟ್‌ಗೆ ನಿಮ್ಮ ಮನವಿಯನ್ನು ಸಲ್ಲಿಸಿ.
  • ಇದಾದ ನಂತರ 14 ಡಿಜಿಟ್‌ಗಳ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ ಪಡೆದು ನಿಮ್ಮ ಆಧಾರ್ ಸ್ಟೇಟಸ್‌ನ್ನು ಟ್ರ್ಯಾಕ್ ಮಾಡಿ. 

ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್‌ಡೇಟ್ ಮಾಡದೇ ಇದ್ರೆ ಏನಾಗುತ್ತೆ?
ಸೆಪ್ಟೆಂಬರ್ 14ರೊಳಗೆ ನೀವು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಲ್ಲ ಅಂದ್ರೆ ಮುಂದೆ ಮಾಡುವ ಯಾವುದೇ ಅಪ್‌ಡೇಟ್‌ಗೆ ನೀವು 50 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. 

ಆಧಾ‌ರ್ ಪ್ರಾಬ್ಲಂ: 1 ಲಕ್ಷ ಎಸ್ಸಿ ಸ್ಕಾಲರ್‌ಶಿಪ್‌ ಅರ್ಜಿ ಬಾಕಿ..!

ಅಪ್‌ಡೇಟ್ ಮಾಡ್ದೇ ಇದ್ರೆ ಆಧಾರ್ ಕಾರ್ಡ್ ಅನರ್ಹವಾಗುತ್ತ?

ಯುಐಡಿಎಐ ನೀಡಿದ ಗಡುವಿನ ಒಳಗೆ ಅಪ್‌ಡೇಟ್ ಮಾಡದೇ ಹೋದ್ರೆ ನಿಮ್ಮ ಆಧಾರ್‌ ಕಾರ್ಡ್‌ ಅಮಾನ್ಯವಾಗುತ್ತಾ? ಖಂಡಿತ ಇಲ್ಲ, ಇಂತಹ ಹೇಳಿಕೆಗಳಲ್ಲಿ ಯಾವುದೇ ಸತ್ಯ ಇಲ್ಲ, ನಿಮ್ಮ ಆಧಾರ್‌ಕಾರ್ಡ್ 10 ವರ್ಷ ಹಳೆಯದಾದರು ಅದು ಕೆಲಸ ಮಾಡುತ್ತದೆ. ಅದು ತನ್ನ ಮೌಲ್ಯ ಕಳೆದುಕೊಳ್ಳುವುದಿಲ್ಲ, ಅವುಗಳನ್ನು ನೀವು ಐಡೆಂಟಿಟಿ ಆಗಿ ಬಳಸಬಹುದು. ಆದರೆ ಉಚಿತವಾಗಿ ನವೀಕರಣ ಮಾಡುವ ಗಡುವು ಮಾತ್ರ ಈಗ ಮುಗಿದಿದೆ. 

Latest Videos
Follow Us:
Download App:
  • android
  • ios