ಮಥುರಾ (ಫೆ.18): ಪ್ರಿಯಕರನ ಜೊತೆಗೂಡಿ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದೋಷಿ ಆಗಿರುವ ಮಹಿಳೆಯೊಬ್ಬಳನ್ನು ಗಲ್ಲಿಗೆ ಏರಿಸಲು ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ತಹಶೀಲ್ದಾರ್‌ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಮುಂಚೆಯೇ ಕಾರಣ ಬಿಚ್ಚಿಟ್ಟ ಶಾಸಕ!

ಒಂದು ವೇಳೆ ಆಕೆಯನ್ನು ಗಲ್ಲಿಗೆ ಏರಿಸಿದರೆ ಸ್ವತಂತ್ರ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾಳೆ. ಗಲ್ಲು ಶಿಕ್ಷೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೆ, ಅಧಿಕಾರಿಗಳ ಆದೇಶದಂತೆ ಮಥುರಾ ಜೈಲಿನಲ್ಲಿ ನೇಣು ಹಗ್ಗ ತರಿಸಿ ಗಲ್ಲು ಶಿಕ್ಷೆಗೆ ಈಗಾಗಲೇ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸಿದ ನೇಣುಗಾರ ಪವನ್‌ ಜಲ್ಲಾದ್‌ ಕೂಡ ಬಂದು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಡಿಕಲ್ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು: ಕಾರಣ...?

ಏನಿದು ಪ್ರಕರಣ?:

ಅಮ್ರೋಹಾ ಜಿಲ್ಲೆಯ ನಿವಾಸಿ ಶಬನಂ ಎಂಬಾಕೆ ಗಲ್ಲು ಶಿಕ್ಷೆಗೆ ಗುರಿಯಾದ ಮಹಿಳೆಯಾಗಿದ್ದಾಳೆ. ಈಕೆ 2008ರಲ್ಲಿ ತನ್ನ ಪೋಷಕರು, ಇಬ್ಬರು ಸಹೋದರರು ಮತ್ತು ನಾದಿನಿ, ಸೋದರ ಸಂಬಂಧಿ ಹಾಗೂ 10 ತಿಂಗಳ ಮುಗುವಿಗೆ ಮತ್ತು ಬರುವ ಪೇಯವನ್ನು ನೀಡಿ ಬಳಿಕ ಪ್ರಿಯಕರನ ಜೊತೆಗೂಡಿ ಹತ್ಯೆ ಮಾಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಇಬ್ಬರಿಗೂ ಗಲ್ಲು ಶಿಕ್ಷೆ ನೀಡಿತ್ತು. ಬಳಿಕ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದ್ದವು. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಕೂಡ ಇವರಿಬ್ಬರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.