ತಹಶೀಲ್ದಾರ್‌ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಮುಂಚೆಯೇ ಕಾರಣ ಬಿಚ್ಚಿಟ್ಟ ಶಾಸಕ!

 ತಹಸೀಲ್ದಾರ್ ಪತ್ನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಬಗ್ಗೆ ಶಾಸಕ ಪ್ರತಿಕ್ರಿಯಿಸಿದ್ದು ಹೀಗೆ...

siraguppa tehsildars wife commits suicide in government house rbj

ಬಳ್ಳಾರಿ, (ಡಿ.24): ಜಿಲ್ಲೆಯ ಸಿರುಗುಪ್ಪ ತಹಸೀಲ್ದಾರ್​ ಸತೀಶ ಬಿ.ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಮೃತದೇಹ ಗುರುವಾರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ತಹಸೀಲ್ದಾರ್​ ಗೃಹ ಕಚೇರಿಯಲ್ಲಿ ಪತ್ತೆಯಾಗಿದೆ.

ಚುನಾವಣಾ ಕರ್ತವ್ಯ ಹಿನ್ನೆಲೆ ಇತ್ತೀಚೆಗೆ ಬಳ್ಳಾರಿ ಡಿಸಿ ಕಚೇರಿಗೆ ಸತೀಶ್​ ವರ್ಗವಣೆಯಾಗಿದ್ದರು. ಆದರೆ, ಸಿರುಗುಪ್ಪದಲ್ಲಿನ ಮನೆಯನ್ನು ಖಾಲಿ ಮಾಡಿರಲಿಲ್ಲ. ಅಲ್ಲಿ ಪತ್ನಿ ಶಂಕ್ರಮ್ಮ ಇದ್ದರು. ಇದೇ ಮನೆಯಲ್ಲಿ ಶಂಕ್ರಮ್ಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಮೆಡಿಕಲ್ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು: ಕಾರಣ...? 

ಸತೀಶ್ ಬಿ. ಕೂಡ್ಲಿಗಿ ಅವರು ಗ್ರಾಮ ಪಂಚಾಯತ್ ಚುನಾವಣೆ ಕರ್ತವ್ಯದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆಯಾಗಿದ್ದರು. ಆದರೆ ಸರಕಾರಿ ನಿವಾಸವನ್ನು ಖಾಲಿ ಮಾಡಿರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಂಕ್ರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ಈ ಸಾವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶಾಸಕರ ಅಭಿಪ್ರಾಯ
ಇನ್ನು ಈ ಬಗ್ಗೆ ಸಿರಗುಪ್ಪ ಶಾಸಕ  ಸೋಮಲಿಂಗಪ್ಪ ಪ್ರತಿಕ್ರಿಯಿಸಿದ್ದು, ಹಲವು ವರ್ಷಗಳಿಂದ ಶಂಕ್ರಮ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನ ಹಲವು ಬಾರಿ ಆಸ್ಪತ್ರೆಗೂ ಕರೆದುಕೊಂಡು ಹೋಗಲಾಗಿತ್ತು. ಶಂಕ್ರಮ್ಮ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಆಸ್ಪತ್ರೆಯ ದಾಖಲೆಗಳಿವೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ ಎಂದರು.

ಆ ಮೂಲಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತಹಶೀಲ್ದಾರ್​ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಶಾಸಕರು ಹೇಳಿದಂತಾಗಿದೆ.  ಪೊಲೀಸರು ಇನ್ನೂ ತನಿಖೆ ಆರಂಭಿಸಿಲ್ಲ ಆಗಲೇ ಶಾಸರು ಈ ರೀತಿ ಹೇಳಿಕೆ ಕೊಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

Latest Videos
Follow Us:
Download App:
  • android
  • ios