ಪಾಕಿಸ್ತಾನದ ISI ಎಜೆಂಟ್ ಇಬ್ಬರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್ ಅರೆಸ್ಟ್ ಆದ ಇಬ್ಬರು ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ ಬಲತ್ಕಾರವಾಗಿ ಮತಾಂತರ, ಭಾರತದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ

ಲಖನೌ(ಜೂ.21): ಉತ್ತರ ಪ್ರದೇಶದ, ದೆಹಲಿ ಸೇರಿದಂತೆ ದೇಶದ ಹಲವೆಡೆ ಕಿವುಡ, ಮೂಕ ಮಕ್ಕಳನ್ನು ಅಸಾಹಾಯಕರನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಇಬ್ಬರನ್ನು ಭಯೋತ್ರಾದಕ ನಿಗ್ರಹ ದಳ (ATS) ಬಂಧಿಸಿದೆ. ಬಂಧಿತ ಇಬ್ಬರು ಪಾಕಿಸ್ತಾನ ISI ಎಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಅನ್ನೋದು ವಿಚಾರಣೆಯಿಂದ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಖ್ ಮಹಿಳೆ, ಇಬ್ಬರು ಮಕ್ಕಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ; ನಾಲ್ವರ ಬಂಧನ!

ಬಂಧಿತರನ್ನು ಜಂಹಗೀರ್ ಹಾಗೂ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಉಮರ್ ಗೌತಮ್ ಬಾಟ್ಲಾ ಹೌಸ್ ಜಾಮಿಯಾ ನಗರ ನಿವಾಸಿಯಾಗಿದ್ದು ಈಗಾಗಲೇ 1,000 ಹೆಚ್ಚು ಮಂದಿಯನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರಿಸಿದ್ದಾನೆ. ವಿಚಾರಣೆ ವೇಳೆ ಈತ ಪಾಕಿಸ್ತಾನ ISI ನಿರ್ದೇಶನದ ಮೇರೆಗೆ ಭಾರತದಲ್ಲಿ ಮತಾಂತರ ಮಾಡುತ್ತಿದ್ದ ಅನ್ನೋದು ಬಯಲಾಗಿದೆ.

ಮುಸ್ಲಿಂ ವೃದ್ಧನಿಗೆ ಥಳಿತ: ಸುಳ್ಳು ಕತೆ ಹೆಣೆದ SP ನಾಯಕ ಉಮ್ಮೇದ್ ಅರೆಸ್ಟ್!

ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಈ ಇಬ್ಬರು, ಭಾರತದ ಹಲವು ಮಾಹಿತಿಗಳನ್ನು ಪಾಕಿಸ್ತಾನ ISIಗೆ ರವಾನೆ ಮಾಡುತ್ತಿದ್ದ ಆರೋಪವೂ ಇದೆ. ಜಗತ್ತಿನಲ್ಲಿ ಇಸ್ಲಾಂ ಮಾತ್ರ ಅತ್ಯಂತ ಶ್ರೇಷ್ಠ ಧರ್ಮ. ಇಸ್ಲಾಂಗೆ ಮತಾಂತರಗೊಂಡರೆ ಹಲವು ಸವಲತ್ತುಗಳು, ತಿಂಗಳ ಮಾಸಾಶನ ಸೇರಿದಂತೆ ಸೌಲಭ್ಯಗಳಿವೆ. ನಿರಾಕರಿಸಿದರೆ ಜೀವ ಬೆದರಿಕೆ ಒಡ್ಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.