Asianet Suvarna News

ಸಿಖ್ ಮಹಿಳೆ, ಇಬ್ಬರು ಮಕ್ಕಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ; ನಾಲ್ವರ ಬಂಧನ!

  • ಅಸಹಾಯಕ ಸಿಖ್ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಇಸ್ಲಾಂಗೆ ಮತಾಂತರ
  • ಬಲತ್ಕಾರವಾಗಿ ಮತಾಂತರಿಸಿದ ನಾಲ್ವರ ಬಂಧನ, ಓರ್ವ ಪರಾರಿ
  • ಸಿಖ್ ಮಕ್ಕಳನ್ನು ಬಲಕ್ಕಾರವಾಗಿ ಸುನ್ನತಿ ಮಾಡಿದ ಐವರು
Forceful conversion of Sikh woman to Islam police bookde Five persons in Uttar pradesh ckm
Author
Bengaluru, First Published Jun 17, 2021, 9:05 PM IST
  • Facebook
  • Twitter
  • Whatsapp

ರಾಂಪುರ(ಜೂ.17):  ಸಿಖ್ ಮಹಿಳೆ ಹಾಗೂ ಆಕೆಯ ಇಬ್ಬರ ಮಕ್ಕಳನ್ನು ಬಲತ್ಕಾರವಾಗಿ ಮತಾಂತರಿಸಿ ಆರೋಪದಡಿ ಐವರು ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಓರ್ವ ಪರಾರಿಯಾಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ನಡೆದಿದೆ.

ಮತಾಂತರಕ್ಕೆ ಯತ್ನ : 20 ಮಂದಿ ಅರೆಸ್ಟ್...

ರಾಂಪುರ ಜಿಲ್ಲೆಯ ಹಜಿಂದರ್ ಕೌರ್ ಕಳೆದ ಮೇ ತಿಂಗಳಲ್ಲಿ ಪತಿಯನ್ನು ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಕೌರ್ ಪತಿ ನಿಧನರಾಗಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಪರಿಚಯಸ್ಥರಾದ ಮೆಹಫೂಜ್ ಬಲತ್ಕಾರವಾಗಿ ಇಸ್ಲಾಂಗೆ ಮತಾಂತರಿಸಿದ್ದಾರೆ.  ಮಕ್ಕಳನ್ನು ಮೆಹಫೂಜ್ ಹಾಗೂ ಇತರ ನಾಲ್ವರು ಸಂಗಡಿಗರು ಕೌರ್ ಮಕ್ಕಳನ್ನು ಬಲತ್ಕಾರವಾಗಿ ಸುನ್ನತಿ ಮಾಡಿಸಿದ್ದಾರೆ ಎಂದು ಕೌರ್ ಆರೋಪಿಸಿದ್ದಾರೆ.

ಪತಿ ನಿಧನದಿಂದ ಕೌರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇತ್ತ ಮಕ್ಕಳನ್ನು ತಾವು ಲಾಕ್‌ಡೌನ್ ಮುಗಿಯುವವರೆಗೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಹೀಗೆ ಕೌರ್ ಹಾಗೂ ಇಬ್ಬರು ಮಕ್ಕಳನ್ನು ಮೆಹಫೂಜ್ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೆಹಫೂಜ್ ಕುಟುಂಬಸ್ಥರು ಬೆದರಿಕೆ ಒಡ್ಡಿದ್ದಾರೆ. ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ.  

ಹೊಸದುರ್ಗದಲ್ಲಿ ಮತಾಂತರ ಹಾವಳಿ, ಯಾರು ಟಾರ್ಗೆಟ್, ಹೇಗೆ ನಡೆಯುತ್ತೆ ಮತಾಂತರ ನೋಡಿ

12 ಹಾಗೂ 10 ವರ್ಷದ ಇಬ್ಬರು ಬಾಲಕರ ಸುನ್ನತಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆಮೆರೆಸಿಕೊಂಡಿದ್ದಾರೆ. ಸಿಖ್ ಮಹಿಳೆ ಹಾಗೂ ಇಬ್ಬರೂ ಮಕ್ಕಳನ್ನು ಸ್ಥಳೀಯ ಗುರುದ್ವಾರಕ್ಕೆ ಸ್ಥಳಾಂತರ ಮಾಡಲಾಗಿದೆ.

Follow Us:
Download App:
  • android
  • ios