* ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಮುಸ್ಲಿಂ ವೃದ್ಧನಿಗೆ ಥಳಿಸಿದ ಪ್ರಕರಣ* ಕೋಮುವಾದ ಸೃಷ್ಟಿಸಲು ನಡೆದಿತ್ತು ಸಂಚು* ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಆರೋಪಿ, ಸಮಾಜವಾದಿ ಪಕ್ಷದ ನಾಯಕ ಉಮ್ಮೇದ್ ಪಹಲ್ವಾನ್ ಅರೆಸ್ಟ್
ಲಕ್ನೋ(ಜೂ.19): ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಮುಸ್ಲಿಂ ವೃದ್ಧನಿಗೆ ಥಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಆರೋಪಿ, ಸಮಾಜವಾದಿ ಪಕ್ಷದ ನಾಯಕ ಉಮ್ಮೇದ್ ಪಹಲ್ವಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 14ರ ಈ ವೈರಲ್ ವಿಡಿಯೋ ಪ್ರಕರಣ ಸಂಬಂಧ ಪೊಲೀಸರು ಫೇಸ್‌ಬುಕ್‌ಗೂ ಸವಾಲೆಸೆದಿದ್ದಾರೆ.
ಹೌದು ಗಾಜಿಯಾಬಾದ್ ಪೊಲೀಸರು ನಕಲಿ ಕತೆ ಹೆಣೆದು ವೃದ್ಧನೊಂದಿಗೆ ಎಫ್‌ಐಆರ್ ದಾಖಲಿಸಿದ ಎಸ್‌ಪಿ ನಾಯಕ ಉಮ್ಮೇದ್ ಪಹಲ್ವಾನ್ ವಿರುದ್ಧ ಕೇಸ್ ದಾಖಲಿಸಿದ್ದರು. ಈತನೇ ಅಬ್ದುಲ್ ಸಮದ್‌ರಿಂದ ಸುಳ್ಳು ಸಾಕ್ಷಿ ಹೇಳಿಸಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ಇದಾದ ಬಳಿಕ ಜೈಶ್ರೀ- ವಂದೇ ಮಾತರಂನ ಸುಳ್ಳು ಕತೆ ಹೆಣೆದು ಫೇಸ್‌ಬುಕ್ ಲೈವ್ ಮಾಡಿದ್ದಾರೆ. ಈವರೆಗೂ ಫೇಸ್‌ಬುಕ್ ವಿರುದ್ಧ ಕೇಸ್ ದಾಖಲಿಸಿಲ್ಲವಾದರೂ, ತನಿಖೆಯಲ್ಲಿ ಕಂಪನಿ ಹೆಸರೂ ಇದೆ. ಅಲ್ಲದೇ ಉತ್ತರ ಪ್ರದೇಶ ಪೊಲೀಸರು ಟ್ವಿಟರ್ ಇಂಡಿಯಾದ ಎಂಡಿ ಮನೀಷ್ ಮಹೇಶ್ವರಿಗೆ ಲೀಗಲ್ ನೊಟಿಸ್ ಕೂಡಾ ಕಳುಹಿಸಿದ್ದಾರೆ.
ಕೆಸ್ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಉಮ್ಮೇದ್
ಪೊಲಿಸ್ ಅಧೀಕ್ಷಕ ಡಾ. ಈರಜ್ ರಾಜ್ ಈ ಬಗ್ಗೆ ಮಾಹಿತಿ ನೀಡುತ್ತಾ ಬುಧವಾರ ತಡರಾತ್ರಿ ಪೊಲೀಸರು ಈ ಪ್ರಕರಣ ಸಂಬಂಧ ಮೂರನೇ ಕೆಸ್ ಸಮಾಜವಾದಿ ಪಕ್ಷದ ನಾಯಕ ಉಮ್ಮೇದ್ ಪಹಲ್ವಾನ್ ವಿರುದ್ಧ ದಾಖಲಿಸಿದರು. ಈ ಎಫ್‌ಐಆರ್ ಲೋನಿ ಬಾರ್ಡರ್ ಪೊಲೀಸ್ ನರೇಶ್ ಸಿಂಗ್ ಬರೆಸಿದ್ದಾರೆ. ಉಮ್ಮೇದ್ ಪಹಲ್ವಾನ್ ಘಟನೆಯ ವಾಸ್ತವತೆ ತಿಳಿಯದೇ ಫೇಸ್‌ಬುಕ್ ಲೈವ್ ಮಾಡಿದ್ದರೆಂಬ ಆರೋಪ ಕೇಳಿ ಬಂದಿದೆ. ಆದರೆ ಅತ್ತ ಉಮ್ಮೇದ್ ಇದು ನನ್ನ ವಿರುದ್ಧ ಹೆಣೆದ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಅಲ್ಲದೇ ಕೇಸ್ ದಾಖಲಾದಾಗಿನಿಂದ ನಾಪತ್ತೆಯಾಗಿದ್ದರೆಂದು ತಿಳಿಸಿದ್ದಾರೆ.
ಟ್ವಿಟರ್‌ಗೆ ಲೀಗಲ್ ನೋಟಿಸ್
ಈ ಪ್ರಕರಣ ಸಂಬಂಧ ಟ್ವಿಟರ್ ಇಂಡಿಯಾ ಎಂಡಿ ಮನೀಷ್ ಮಹೆಶ್ವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಆದರೆ ಇವರ ವಿರುದ್ಧ ದಾಖಲಾಗಿರುವ ಎಲ್ಲಾ ಸೆಕ್ಷಣ್‌ಗಳು ಜಾಮೀನುಸಹಿತವಾಗಿವೆ. ಹೀಗಾಗಿ ಅಧಿಕಾರಿಗಳನ್ನು ಈವರೆಗೂ ಬಂಧಿಸಿಲ್ಲ. ಆದರೆ ವಿಚಾರಣೆಗೆ ಕರೆದಾಗ ತಪ್ಪದೇ ಹಾಜರಾಗಬೇಕಾಗುತ್ತದೆ.
