ಲಕ್ನೋ(ಮೇ.22): ದೇಶದ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಕರೆಯಲಾಗುವ ಫತೇಪುರದಲ್ಲಿ 'ರಹಸ್ಯ ಜ್ವರ' ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಯಮುನಾ ತಟದಲ್ಲಿರುವ ಲಲೌಲಿಯಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಹತ್ತು ಸ್ಮಶಾನಗಳಲ್ಲಿ ಇವರ ಅಂತ್ಯಕ್ರಿಯೆ ನಡೆಸಲಾಗಿದೆ. ತೀವ್ರ ಜ್ವರ ಹಾಗೂ ಉಸಿರುಗಟ್ಟುವಿಕೆಯಿಂದ ಇವರು ಮೃತಪಟ್ಟಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಇಲ್ಲಿನ ಯಾರೊಬ್ಬರಿಗೂ ಚಿಕಿತ್ಸೆ ಸಿಕ್ಕಿಲ್ಲ. ಇನ್ನು ಏಪ್ರಿಲ್ 7ರಂದು ಒಂದೇ ದಿನ ಇಲ್ಲಿ ಬರೋಬ್ಬರಿ ಏಳು ಮಂದಿ ಮೃತಪಟ್ಟಿದ್ದಾರೆ.

ಪ್ರತಿ ದಿನ 1 ಅಥವಾ ಎರಡು ಮಂದಿ ನಿಧನ

ಫತೇಪುರದಲ್ಲಿ ಏಪ್ರಿಲ್ 26ರಂದು ಪಂಚಾಯತ್ ಚುನಾವಣೆ ನಡೆಯುವುದಿತ್ತು. ಜಿಲ್ಲೆಯ ಇತರ ಕ್ಷೇತ್ರಗಳಂತೆ ಇಲ್ಲೂ ಪ್ರಚಾರದ ಜೊತೆ ಸೋಂಕಿತರ ಸಂಖ್ಯೆ ಏರುತ್ತಿತ್ತು. ಜಿಲ್ಲಾ ಮುಖ್ಯ ಕಚೇರಿಯಿಂದ ಸುಮಾರು 35 ಕಿ. ಮೀ ದೂರದಲ್ಲಿರುವ ಬಾಂದಾ ಹೈವೇ ಬಳಿ ಇರುವ ಲಲೌಲೀ ಗ್ರಾಮದಲ್ಲಿ ಶೀತ, ಜ್ವರ ಹಾಗೂ ಉಸಿರಾಟದ ತೊಂದರೆ ಇರುವ ಪ್ರಕರಣಗಳು ಹೆಚ್ಚಾದವು.

ಚಿತ್ರದುರ್ಗ: ಒಂದೇ ಹಳ್ಳಿಯ 750ಕ್ಕೂ ಹೆಚ್ಚು ಮಂದಿಗೆ ಜ್ವರ? ವಾರದಲ್ಲಿ 6 ಮರಣ

ಗ್ರಾಮದ ನೂತನ ಪ್ರಧಾನ ಶಶೀಂ ಅಹಮದ್ ಅನ್ವಯ ಏಪ್ರಿಲ್ 10ಕ್ಕೂ ಮೊದಲು ರೋಗಿಯ ಸಾವಾಗಿತ್ತು. ಆದರೆ ಜನರು ಜ್ವರ ತಲೆಗೇರಿ ಮೃತಪಟ್ಟಿದ್ದಾನೆಂದು ಕಡೆಗಣಿಸಿದರು. ಆದರೆ ಪ್ರಕರಣಗಳು ಹೆಚ್ಚುತ್ತಲೇ ಹೋದವು. ಇದಾದ ಬಳಿಕ ಇಲ್ಲಿ ಪ್ರತಿ ದಿನ ಒಂದರಿಂದ ಇಬ್ಬರು ಮೃತಪಡುತ್ತಿದ್ದಾರೆ.

ಒಂದೇ ಸ್ಮಶಾನದಲ್ಲಿ 30 ಜನರ ಅಂತ್ಯಕ್ರಿಯೆ

ರೋಗಿಗಳನ್ನು ಎಲ್ಲಕ್ಕೂ ಮೊದಲು ಫತೇಪುರ ಜಿಲ್ಲಾಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಅಲ್ಲಿ ಇವರನ್ನು ದಾಖಲಿಸಿಕೊಳ್ಳುತ್ತಿರಲಿಲ್ಲ. ಕಾನ್ಪುರ ಹಾಗೂ ಬಾಂದಾದ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಿಗಲಿಲ್ಲ. ಕೆಲ ಪಪ್ಯಾರಾ ಮೆಡಿಕಲ್ ಸ್ಟಾಫ್ ಸಹಾಯದಿಂದ ಆಕ್ಸಿಜನ್ ಸಿಲಿಂಡರ್‌ನಂತಹ ವಸ್ತುಗಳನ್ನು ತರಿಸಿಕೊಂಡರು. ಆದರೆ ಸಾಕಾಗಲಿಲ್ಲ.

ಆದರೆ ಏಪ್ರಿಲ್ 23 ಈ ಗ್ರಾಮಕ್ಕೆ ಕರಾಳ ದಿನವಾಗಿತ್ತು. ಇಲ್ಲಿ ಒಂದೇ ಹಳ್ಳಿಯ ಏಳು ಮಂದಿ ಮೃತಪಟ್ಟರು. ಐವತ್ತು ಸಾವಿರ ಜನಸಂಖ್ಯೆಯ ಕಸ್ಬೆನುಮಾಂ ಹಳ್ಳಿ ನಡುಗಿತ್ತು. ಇಲ್ಲಿ ಮುಸಲ್ಮಾನರ ಸುಮಾರು ಹತ್ತು ಸ್ಮಶಾನಗಳಿವೆ. ಆದರೆ ಇಲ್ಲಿನ ಮಣ್ಣು ಮೃತರು ಇತ್ತೀಚೆಗಷ್ಟೇ ಸಾವನ್ನಪ್ಪಿದ್ದಾರೆಂಬುವುದನ್ನು ಸಾರಿ ಹೇಳುತ್ತದೆ. ಒಂದು ಸ್ಮಶಾನದಲ್ಲಿ ಬರೋಬ್ಬರಿ ಮೂವತ್ತು ಹೆಣಗಳನ್ನು ಹೂಳಲಾಗಿದೆ.

ಕೊರೋನಾ ಲಸಿಕೆ ಹಾಕಿಸಿಕೊಂಡ ಎಷ್ಟು ದಿನದ ನಂತರ ಸೆಕ್ಸ್ ಮಾಡಬಹುದು ?

ಒಂದೇ ಕುಟುಂಬದ ನಾಲ್ವರು ಸಾವು

ಇನ್ನು ಹಳ್ಳಿಯ ಸೂಫಿ ಹೇಳುವ ಅನ್ವಯ ಕಳೆದ ಹತ್ತು ದಿನಗಳಲ್ಲಿ ತನ್ನ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಯಾರಿಗೂ ಚಿಕಿತ್ಸೆ ಸಿಗಲಿಲ್ಲ. ತಾನು ಖುದ್ದು ಅನಾರೋಗ್ಯಕ್ಕೀಡಾದೆ. ದೀರ್ಘ ಕಾಲ ಮನೆ ಮದ್ದು ಸೇವಿಸಿದ ಬಳಿಕ ಗುಣಮುಖನಾದದೆ. ತನ್ನ ಚಿಕ್ಕಪ್ಪನಿಗೆ ಗಂಟಲಲ್ಲಿ ನೋವು ಮತ್ತು ಉಸಿರುಗಟ್ಟುವ ಸಮಸ್ಯೆ ಕಂಡು ಬಂದಿತ್ತು. ಇದಾದ ಬಳಿಕ ಅವರು ಮೃತಪಟ್ಟರು. ಟೆಸ್ಟ್‌ ಕೂಡಾ ಆಗದ್ದರಿಂದ ರೋಗದ ಬಗ್ಗೆ ತಿಳಿಯಲಿಲ್ಲ ಎಂದಿದ್ದಾರೆ.

 ಹಳ್ಳಿಯಲ್ಲಿ ಈ ರಹಸ್ಯಮಯ ಜ್ವರದಿಂದ ಮೇ 13ಕ್ಕೆ ಕೊನೆಯ ಸಾವಾಯ್ತು. ಜ್ವರ ಹಾಗೂ ಉಸಿರುಗಟ್ಟುವ ಸಮಸ್ಯೆಯಿಂದ ಗುಲಾಂ ಹುಸೈನ್ ಪತ್ನಿ ಬಿಸ್ಮಿಲ್ಲಾ ಕೊನೆಯುಸಿರೆಳೆದರು. ಇಲ್ಲಿನ ಜನರಕಲ್ಲಿ ಎಚ್ಚರಿಕೆಯ ಕೊರತೆ ಇದೆ. ಅನೇಕ ಮಂದಿ ಕೊರೋನಾದಿಂದ ಎದುರಾಗುವ ಅಪಾಯವನ್ನು ಕಡೆಗಣಿಸಿದ್ದಾರೆ ಎಂಬುವುದು ಸೂಫಿಯವರ ಮಾತು.

ಮನೆ ಮನೆಗೆ ಬಂದು ಜ್ವರದ ಸರ್ವೆ: ಕೊರೋನಾ ನಿಯಂತ್ರಣಕ್ಕೆ ಹೊಸ ಟೆಕ್ನಿಕ್

ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ

ಹಳ್ಳಿಯ ಜನರ ಚಿಕಿತ್ಸೆ ಹಾಗೂ ಆರೋಗ್ಯದ ಹೊಣೆ ಹೆಚ್ಚುವರಿ ಪಿಎಚ್‌ಸಿ ಮೇಲಿದೆ. ಇಲ್ಲಿ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಕೇವಲ ಮೊಬೈಲ್ ಮೂಲಕವೇ ಜನರಿಗೆ ಚಿಕಿತ್ಸೆಯ ಪಾಠ ಹೇಳಲಾಗುತ್ತದೆ. ಈ ಆರೋಗ್ಯ ಕೇಂದ್ರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗಷ್ಟೇ ತೆರೆದಿರುತ್ತದೆ.

ಇನ್ನು ಫತೇಪುರದ ಜಿಲ್ಲಾಧಿಕಾರಿ ಅಪೂರ್ವ ದುಬೆ ಮಾತನಾಡುತ್ತಾ 'ಲಾಲೌಲಿಯಲ್ಲಿ ಕೆಲ ದದಿನಗಳಿಂದ ರೋಗದಿಂದ ಜನರು ಮೃತಪಡುತ್ತಿರುವ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳನ್ನು ಇಲ್ಲಿ ತಪಾಸಣೆಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಸಾವಿನ ಹಿಂದಿನ ಕಾರಣ ತಿಳಿಯಲಿದೆ. ಅತ್ತ ಗ್ರಾಮಾಧಿಕಾರಿ ಜ್ವರ ಹಾಗೂ ಉಸಿರುಗಟ್ಟುವ ಸಮಸ್ಯೆಯಿಂದ ಜನರು ಮೃತಪಡುತ್ತಿದ್ದಾರೆ ಎಂದರೆ ಗ್ರಾಮಸ್ಥರು ಕೊರೋನಾವೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.