Asianet Suvarna News Asianet Suvarna News

UP Elections : 300 ಯುನಿಟ್ ಉಚಿತ ವಿದ್ಯುತ್ ಬೇಕೆ, ಹೀಗೆ ಮಾಡಿ ಅಂದ್ರು ಅಖಿಲೇಶ್ ಯಾದವ್!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಅಭಿಯಾನ
ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್, ಆದ್ರೆ ಷರತ್ತುಗಳು ಅನ್ವಯ
3-4 ತಿಂಗಳಿನಿಂದ ಯೋಗಿ ಆದಿತ್ಯನಾಥ್ ಸರ್ಕಾರ ವಿದ್ಯುತ್ ಬಿಲ್ ನೀಡಿಲ್ಲ

UP Elections 2022 Get 300 units of electricity free Samajwadi Partys campaign from tomorrow san
Author
Bengaluru, First Published Jan 18, 2022, 6:32 PM IST

ಲಖನೌ (ಜ. 18): ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶ (Uttar Pradesh) ಅಕ್ಷರಶಃ ರಣಭೂಮಿಯಾಗಿದೆ. ಬಹುತೇಕ ಎಲ್ಲಾ ಪಕ್ಷಗಳು ಮೊದಲ ಹಂತದ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಇದರ ನಡುವೆ ಕೇಂದ್ರ ಚುನಾವಣಾ ಆಯೋಗ (Election Commission) ಸಮಾವೇಶ, ರೋಡ್ ಶೋ ಹಾಗೂ ಪಾದಯಾತ್ರೆಗಳಿಗೆ ನಿಷೇಧ ಹೇರಿರುವುದು ಅಭ್ಯರ್ಥಿಗಳ ಮಟ್ಟಿಗೆ ಹಿನ್ನಡೆಯಾಗಿದ್ದರೂ. ಹೊಸ ಹೊಸ ಪ್ರಚಾರ ತಂತ್ರಗಳ ಮೂಲಕ ವೋಟ್ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ರಾಜಕೀಯ ಪಕ್ಷಗಳಿವೆ. ಅದರ ಭಾಗವಾಗಿ ಮಂಗಳವಾರ ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಉತ್ತರ ಪ್ರದೇಶದ ಜನತೆಗೆ ಭರ್ಜರಿ ಘೋಷಣೆ ನೀಡಿದ್ದಾರೆ.

ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ 300 ಯುನಿಟ್ ಗಳ ಉಚಿತ ವಿದ್ಯುತ್ (300 Unit Free Electricity) ಅನ್ನು ನೀಡಲಿದೆ. ಆದರೆ, ಉಚಿತ ವಿದ್ಯುತ್ ಎಲ್ಲರಿಗೂ ಸಿಗುವುದಿಲ್ಲ. ಅದಕ್ಕಾಗಿ ಸಮಾಜವಾದಿ ಪಕ್ಷ ಒಂದು ಫಾರ್ಮ್ ನೀಡಲಿದ್ದು. ವಿದ್ಯುತ್ ಕನೆಕ್ಷನ್ ನಲ್ಲಿ ಯಾವ ಹೆಸರಿದೆಯೂ ಅದೇ ಹೆಸರನ್ನು ಫಾರ್ಮ್ ನಲ್ಲಿ ಬರೆದು ಸಮಾಜವಾದಿ ಪಕ್ಷದ ಕಚೇರಿಗೆ ಕೊಡಬೇಕಿದೆ. ಈ ಎಲ್ಲಾ ಫಾರ್ಮ್ ಗಳನ್ನು ಸಮಾಜವಾದಿ ಪಕ್ಷ ಪರಿಶೀಲನೆ ಮಾಡಲಿದ್ದು, ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದರೆ, ಫಾರ್ಮ್ ನಲ್ಲಿದ್ದ ಎಲ್ಲಾ ವ್ಯಕ್ತಿಗಳ ಮೆನೆ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ ಸಿಗಲಿದೆ. ಈ ಅಭಿಯಾನವನ್ನು ಸಮಾಜವಾದಿ ಪಕ್ಷ ಬುಧವಾರದಿಂದ ಆರಂಭ ಮಾಡಲಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಬಡವರು, ಶ್ರೀಮಂತರು ಸೇರಿದಂತೆ ಎಲ್ಲರೂ ಈ ಯೋಜನೆಯನ್ನು ಪಡೆಯಬಹುದಾಗಿದೆ.

ಈಗಾಗಲೇ ವಿದ್ಯುತ್ ಸಂಪರ್ಕ ಪಡೆದವರು ಹಾಗೂ ಮುಂದೆ ಪಡೆಯಲಿರುವವರು ಎಲ್ಲರೂ ಈ ಫಾರ್ಮ್ ಅನ್ನು ಭರ್ತಿ ಮಾಡಿ ಎಸ್‌ ಪಿ ಕಚೇರಿಗೆ ಕೊಡಬೇಕು ಎಂದು ಅಖಿಲೇಶ್ ಯಾದವ್ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದರ ಕುರಿತಾಗಿ ಜನರಿಗೆ ಅರಿವು ಮೂಡಿಸಲು ನಾಳೆಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
 


ವಿದ್ಯುತ್ ಬಿಲ್ ನೀಡ್ತಿಲ್ಲ ಯೋಗಿ ಆದಿತ್ಯನಾಥ್ ಸರ್ಕಾರ: ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹಂಬಲದಲ್ಲಿರುವ ಯೋಗಿ ಆದಿತ್ಯನಾಥ್ (Yogi Adityanath)ಸರ್ಕಾರ ಕಳೆದ 3-4 ತಿಂಗಳಿನಿಂದ ಜನರಿಗೆ ವಿದ್ಯುತ್ ಬಿಲ್ (electricity bills) ನೀಡುತ್ತಿಲ್ಲ. ಯಾಕೆಂದರೆ, ಇವೆಲ್ಲವೂ ಸಾಕಷ್ಟು ದೊಡ್ಡ ಮೊತ್ತದ ಬಿಲ್ ಗಳಾಗಿವೆ. ಹಾಗೇನಾದರೂ ಬಿಲ್ ಅನ್ನು ಜನರಿಗೆ ನೀಡಿದಲ್ಲಿ, ಚುನಾವಣೆ ಸಮಯದಲ್ಲಿ ಪಕ್ಷದ ಅಭಿಯಾನಕ್ಕೆ ಏಟು ಬೀಳಬಹುದು ಎನ್ನುವ ಆತಂಕದಲ್ಲಿ ಯೋಗಿ ಆದಿತ್ಯನಾಥ್ ಇದ್ದಾರೆ. ಪಕ್ಷದ ಅಭ್ಯರ್ಥಿಗಳು ಟಿಕೆಟ್ ಗಾಗಿ ನೀಡುವ ಹಣದಿಂದ ಈ ಬಿಲ್ ಅನ್ನು ಸರ್ಕಾರ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

UP Elections : ಉತ್ತರ ಪ್ರದೇಶದಿಂದ ಬಿಜೆಪಿಯನ್ನು ತೊಲಗಿಸುವುದು 1947ಕ್ಕಿಂತ ದೊಡ್ಡ ಸ್ವಾತಂತ್ರ್ಯ!
400 ಸೀಟ್ ಗೆದ್ದೇ ಗೆಲ್ತೇವೆ: ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್ ಮುಂದಿನ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಕನಿಷ್ಠ 400 ಸೀಟ್ ಗೆಲ್ಲಲಿದೆ ಎಂದು ಅತ್ಮವಿಶ್ವಾಸ ವ್ಯಕ್ತಪಡಿಸಿದರು. ಸ್ವಾಮಿ ಪ್ರಸಾದ್ ಮೌರ್ಯ ಸೇರಿದ್ದಾರೆ, ಓಂ ಪ್ರಕಾಶ್ ರಾಜ್ಭರ್ ಕೂಡ ಜೊತೆಯಾಗಿದ್ದಾರೆ. ಆರ್ ಎಲ್ ಡಿ ಜೊತೆ ಪಕ್ಷ ಮೈತ್ರಿ ಮಾಡಿಕೊಂಡಿದೆ. ಒಟ್ಟಾರೆ ಎಲ್ಲರೂ, ಬಿಜೆಪಿಯನ್ನು ಸೋಲಿಸಲೇಬೇಕು ಎನ್ನುವ ಹಠದಲ್ಲಿದ್ದು, 403 ಕ್ಷೇತ್ರಗಳ ಚುನಾವಣೆಯಲ್ಲಿ 400 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು.

Assembly Elections: 3 ರಾಜ್ಯ ಬಿಜೆಪಿಗೆ, 2 ಅತಂತ್ರ!
ಇತ್ತೀಚೆಗೆ ಸುಪ್ರೀಂ ಕೋರ್ಟ್ ನಲ್ಲಿ ಹಾಕಿದ ಒಂದು ಅರ್ಜಿಯಲ್ಲಿ, ಗರಿಷ್ಠ ಕ್ರಿಮಿನಲ್ ಅಪರಾಧ ಹೊತ್ತಿರುವ ನಾಯಕರು ಬಿಜೆಪಿ ಪಕ್ಷದಲ್ಲಿದ್ದಾರೆ ಎಂದು ಹೇಳಿದೆ. ಕ್ರಿಮಿನಲ್ ಅಪರಾಧ ಹೊತ್ತಿರುವವರನ್ನು ಚುನಾವಣೆಯಿಂದ ಬ್ಯಾನ್ ಮಾಡಬೇಕು ಎನ್ನುವ ಆಗ್ರಹವಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿಗಳೇ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.

Follow Us:
Download App:
  • android
  • ios