UP Election Results: ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿ ಏನು? ಶಾಕಿಂಗ್ ಫಲಿತಾಂಶ ಬಯಲು!

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಕೇಸರಿ ರಂಗು

* ಬಹುಮತ ಸಾಧಿಸಿದ ಬಿಜೆಪಿ

* ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಯಾರಿಗೆ ಮುನ್ನಡೆ?

Uttar Pradesh Election Results 2022 Condition of BJP In Muslim Dominated constituencies pod

ಲಕ್ನೋ(ಮಾ.10): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (ಯುಪಿ ಚುನಾವಣೆ 2022) ಫಲಿತಾಂಶಗಳು ಇಂದು ಬರಲಿವೆ. ಯುಪಿ ಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಪ್ರಮುಖ ಮತ ಬ್ಯಾಂಕ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಾಹ್ನ 2 ಗಂಟೆಯ ಟ್ರೆಂಡ್ ಪ್ರಕಾರ 115 ಸ್ಥಾನಗಳ ಪೈಕಿ ಬಿಜೆಪಿ 59 ಮುಸ್ಲಿಂ ಸ್ಥಾನಗಳಲ್ಲಿ ಮುಂದಿದೆ. ಸಮಾಜವಾದಿ ಪಕ್ಷ 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದೇ ಹೊತ್ತಿಗೆ ಬಿಎಸ್‌ಪಿ-ಕಾಂಗ್ರೆಸ್‌ ಖಾತೆ ಇನ್ನೂ ತೆರೆದಿಲ್ಲ. ವಾಸ್ತವವಾಗಿ, ಮುಸ್ಲಿಂ ಬಹುಸಂಖ್ಯಾತ ಸ್ಥಾನಗಳಲ್ಲಿ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎಸ್‌ಪಿ ಹೇಳಿಕೊಳ್ಳುತ್ತಿತ್ತು. ಮತ್ತೊಂದೆಡೆ ಮತದಾರರು ಬಿಜೆಪಿ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಚಿತ್ರಣವನ್ನೇ ಬದಲಿಸಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಾತ್ರ ಮುಸ್ಲಿಂ ಬಹುಸಂಖ್ಯಾತ ಸ್ಥಾನಗಳ ಬಗ್ಗೆ ಮಾತನಾಡಿದರೆ, ಅವರ ಪಟ್ಟಿಯೂ ತುಂಬಾ ದೊಡ್ಡದಾಗಿದೆ. ಪಶ್ಚಿಮ ಯುಪಿಯಲ್ಲಿ, ಸಹರಾನ್‌ಪುರ, ಸಂಭಾಲ್, ಕೈರಾನಾ, ಶಾಮ್ಲಿ, ಮೀರತ್, ರಾಂಪುರ್, ಸ್ವರ್, ಮೊರಾದಾಬಾದ್, ಅಲಿಗಢ ಮತ್ತು ದೇವಬಂದ್ ವಿಧಾನಸಭಾ ಕ್ಷೇತ್ರಗಳು ಮುಸ್ಲಿಮರು ಹೆಚ್ಚಿನ ಮತಬ್ಯಾಂಕ್ ಹೊಂದಿರುವ ವಿಧಾನಸಭಾ ಕ್ಷೇತ್ರಗಳಾಗಿವೆ. ಈ ಸ್ಥಾನಗಳಲ್ಲಿ ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳ ಮೇಲೆ ಪಣತೊಟ್ಟಿವೆ. ನೀವು ರಾಜಕೀಯ ನಕ್ಷೆಯಿಂದ ನೋಡಿದರೆ, ಪಶ್ಚಿಮ ಯುಪಿಯ 16 ಜಿಲ್ಲೆಗಳಲ್ಲಿ ಒಟ್ಟು 136 ವಿಧಾನಸಭಾ ಸ್ಥಾನಗಳಿವೆ. ಈ ಪೈಕಿ 113 ಸ್ಥಾನಗಳಿಗೆ ಮೊದಲ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.

ಪಶ್ಚಿಮ ಯುಪಿಯಲ್ಲಿನ ಒಟ್ಟು ಅಸೆಂಬ್ಲಿ ಸ್ಥಾನಗಳಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಸ್ಥಾನಗಳು ಮುಸ್ಲಿಂ ಬಹುಸಂಖ್ಯಾತವಾಗಿವೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನಡುವೆ ವ್ಯಾಪಕವಾಗಿ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಪಶ್ಚಿಮ ಯುಪಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಬಿಎಸ್‌ಪಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಎಸ್‌ಪಿಯ ಮುಸ್ಲಿಂ ಅಭ್ಯರ್ಥಿಗಳು ಎಸ್‌ಪಿಯ ಆಟವನ್ನು ಕೆಡಿಸಬಹುದು. 2017 ರಲ್ಲಿ ಹೇಳಲಾದ ಹಿಂದೂಗಳ ವಲಸೆಯ ಸಮಸ್ಯೆಯಿಂದಾಗಿ ಉತ್ತರ ಪ್ರದೇಶ ರಾಜ್ಯದ ಮುಸ್ಲಿಂ ಬಹುಸಂಖ್ಯಾತ ಕೈರಾನಾ ಕ್ಷೇತ್ರವು ದೇಶದಲ್ಲಿ ಹೆಚ್ಚು ಚರ್ಚಿಸಲ್ಪಟ್ಟಿದೆ. ಹಾಗಾಗಿ ಎಸ್‌ಪಿ ಆಕ್ರಮಿಸಿಕೊಂಡಿರುವ ಈ ಕ್ಷೇತ್ರದಿಂದ ಬಿಜೆಪಿ ತನ್ನ ಚುನಾವಣಾ ಪ್ರಚಾರ ಆರಂಭಿಸಿದೆ. ಅದರ ಪರಿಣಾಮವೂ ಇತ್ತು. ಯುಪಿಯ ಮೊದಲ ಹಂತದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಗರಿಷ್ಠ ಮತದಾನ ನಡೆದಿದೆ. ಇದರಿಂದ ಬಿಜೆಪಿ ಉತ್ಸುಕವಾಗಿದೆ.

ವಿರೋಧಿ ಅಲೆ ಇದ್ದ ಹತ್ರಾಸ್, ಉನ್ನಾವ್, ಲಖೀಂಪುರ ಕ್ಷೇತ್ರಗಳಲ್ಲೂ ಬಿಜೆಪಿಗೆ ಭಾರೀ ಮುನ್ನಡೆ!

ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಕರೆಯಲಾಗುವ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಇಡೀ ದೇಶದ ಗಮನಸೆಳೆದಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಹೇಳಿದಂತೆ ದೇಶದ ಅತೀದೊಡ್ಡ ವಿಧಾನಸಭೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಹೌದು 403 ವಿಧಾನಸಭಾ ಕ್ಷೇತ್ರಗಳಿರುವ ಯುಪಿಯಲ್ಲಿ ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿ 278 ಕ್ಷೇತ್ರಗಳಲಲ್ಇ ಮುನ್ನಡೆ ಕಾಯ್ದುಕೊಂಡಿದೆ. ಅಚ್ಚರಿಯ ವಿಚಾರವೆಂದರೆ ಬಹುಮತದತ್ತ ಸಾಗುತ್ತಿರುವ ಕೇಸರಿ ಪಾಳಯ ತನ್ನ ವಿರೋಧಿ ಅಲೆ ಇದ್ದ ಹತ್ರಾಸ್, ಉನ್ನಾವ್, ಲಖೀಂಪುರದ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ ಎಂಬುವುದು ಭಾರೀ ಅಚ್ಚರಿಯ ವಿಚಾರ.

ಹೌದು ಈ ಬಾರಿ ಅತ್ಯಾಚಾರ ಹಾಗೂ ಅತೀ ಹೆಚ್ಚು ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ಹತ್ರಾಸ್, ಉನ್ನಾವ್‌ನಲ್ಲಿ ಬಿಜೆಪಿ ಸೋಲುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹರಿಸಿ ನಾಲ್ವರು ರೈತರ ಸಾವಿಗೆ ಕಾರಣವಾಗಿದ್ದ ಪ್ರಕರಣವೂ ಉಲ್ಟಾ ಹೊಡೆಯಲಿದೆ. ಈ ಮೂಲಕ ಇಲ್ಲೂ ಕೇಸರಿ ಪಾಳಯಕ್ಕೆ ಸೋಲುಂಟಾಗಬಹುದು ಎನ್ನಲಾಗಿತ್ತು. ಆದರೀಗ ಈ ಎಲ್ಲಾ ಲೆಕ್ಕಾಚಾರವೂ ತಲೆಕೆಳಗಾಗಿದೆ. ಈ ಪ್ರದೇಶಗಳಲಲ್ಇ ಬಿಜೆಪಿ ಭಾರೀ ಅಂತರದ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಇಡುತ್ತಿದೆ. 

ಯಾದವೇತರ ಮತಗಳು ಬಿಜೆಪಿಗೆ, ಜಾಟ್ ಬಾಹುಳ್ಯದ ಕ್ಷೇತ್ರಗಳಲ್ಲೂ ಕಮಲ ಪಾಳಯ ಮುನ್ನಡೆ

ಈ ಬಾರಿಯೂ 2017ರ ಚುನಾವಣೆಯಂತೆ ಜಾಟ್ ಬಾಹುಳ್ಯದ ಕ್ಷೇತ್ರಗಳಲ್ಲೂ ಕಮಲ ಪಾಳಯ ಮುನ್ನಡೆ ಸಾಧಿಸಿದ್ದು, ಯಾದವೇತರ ಮತಗಳು ಬಿಜೆಪಿ ತೆಕ್ಕೆಗೆ ಜಾರಿವೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. 

Latest Videos
Follow Us:
Download App:
  • android
  • ios