Asianet Suvarna News Asianet Suvarna News

UP Elections: ಯೋಗಿ ಸಂಪುಟ ಬಿಟ್ಟು ಎಸ್‌ಪಿಗೆ ಸೇರಿದ್ದ ಸ್ವಾಮಿಗೆ ಹೀನಾಯ ಸೋಲು!

* ಯುಪಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟ
* ಬಿಜೆಪಿ ಬಿಟ್ಟು ಎಸ್‌ಪಿ ಸೇರಿದ್ದ ಪಸ್ವಾಮಿಗೆ ಮುಖಭಂಗ
* ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತ ಸ್ವಾಮಿ ಪ್ರಸಾದ್ ಮೌರ್ಯ

UP Election Results 2022 Swami Prasad Maurya of Samajwadi Party Loses from Fazilnagar seat pod
Author
Bangalore, First Published Mar 10, 2022, 4:59 PM IST

ಲಕ್ನೋ(ಮಾ.10): ಯುಪಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನವೇ ಯೋಗಿ ಸಂಪುಟಕ್ಕೆ ರಾಜೀನಾಮೆ ನೀಡುವ ಮೂಲಕ ಅಖಿಲೇಶ್ ಯಾದವ್ ಅವರ ಸೈಕಲ್ ಸವಾರಿ ಮಾಡಲು ಸಜ್ಜಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯಗೆ ತನ್ನ ನಡೆ ಈಗ ದುಬಾರಿಯಾಗಿದೆ. ಕುಶಿನಗರದ ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ವಾಮಿ ಪ್ರಸಾದ್ ಮೌರ್ಯ ಚುನಾವಣೆಯಲ್ಲಿ ಸೋತಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಯ ಹಾಲಿ ಶಾಸಕ ಗಂಗಾ ಸಿಂಗ್ ಕುಶ್ವಾಹಾ ಅವರ ಪುತ್ರ ಸುರೇಂದ್ರ ಕುಮಾರ್ ಕುಶ್ವಾಹ ಅವರ ವಿರುದ್ಧ ಸೋಲನುಭವಿಸಿದ್ದಾರೆಂಬುವುದು ಉಲ್ಲೇಖನೀಯ. ಸ್ವಾಮಿ ಈ ಹಿಂದೆ ಪದ್ರೌನಾ ಕ್ಷೇತ್ರದಿಂದ ಶಾಸಕರಾಗಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಸ್ವಾಮಿ ಪ್ರಸಾದ್ ಮೌರ್ಯ ಅವರ ಸಾಂಪ್ರದಾಯಿಕ ಸ್ಥಾನವು ಪದ್ರೌನಾ ಅಸೆಂಬ್ಲಿ. ಆದರೆ ಆರ್‌ಪಿಎ ಸಿಂಗ್ ಅವರ ಬಿಜೆಪಿ ಸೇರ್ಪಡೆ ಅವರಿಗೆ ಬಹಳ ಸಮಸ್ಯೆಯುಂಟು ಮಾಡಿತ್ತು. ಹೀಗಾಗಿ ಅವರು ತಮ್ಮ ಸಾಂಪ್ರದಾಯಿಕ ಸ್ಥಾನವನ್ನು ತ್ಯಾಗ ಮಾಡಿದರು. ಪದ್ರೌನಾ ಯುವರಾಜ ಎಂದೇ ಖ್ಯಾತರಾಗಿದ್ದ ಆರ್ ಪಿಎನ್ ಸಿಂಗ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ತಕ್ಷಣ ಸ್ವಾಮಿ ಪ್ರಸಾದ್ ಅವರು ಪಡೌನಾ ಸೀಟು ಕೂಡ ಸ್ವಾಮಿಗೆ ಸುರಕ್ಷಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದಂತೆಯೇ ತಮ್ಮ ಸ್ಥಾನವನ್ನು ಬದಲಿಸಿದರು. ಈ ಚುನಾವಣೆಯಲ್ಲಿ ಅವರು ಸಾಂಪ್ರದಾಯಿಕ ಪದ್ರೌನಾ ಸ್ಥಾನದ ಬದಲಿಗೆ ಕುಶಿನಗರದ ಫಾಜಿಲ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅದೇನೇ ಸರ್ಕಸ್ ಮಾಡಿದರೂ ಕೊನೆಗೂ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗಂಗಾ ಸಿಂಗ್ ಕುಶ್ವಾಹ ಕಳೆದ 10 ವರ್ಷಗಳಿಂದ ಶಾಸಕರಾಗಿದ್ದಾರೆ. ಆದರೆ, ಈ ಬಾರಿ ಪಕ್ಷ ಅವರ ಪುತ್ರನನ್ನು ಕಣಕ್ಕಿಳಿಸಿದೆ.

ಸ್ವಾಮಿ ಪ್ರಸಾದ್ ಮೌರ್ಯ ಅವರು 2009 ರಲ್ಲಿ ಆರ್‌ಪಿಎನ್ ಸಿಂಗ್ ಅವರಿಂದ ಸೋಲಿನ ರುಚಿ ಕಂಡಿದ್ದರಿಂದ ಸ್ವಾಮಿ ಪ್ರಸಾದ್ ಮೌರ್ಯ ಅವರು ಪದ್ರೌನಾ ಸ್ಥಾನವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತದೆ. 2009ರಲ್ಲಿ ಬಿಎಸ್ ಪಿಯಿಂದ ಸ್ಪರ್ಧಿಸಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಆರ್ ಪಿಎನ್ ಸಿಂಗ್ ಸೋಲಿಸಿದ್ದರು. ಸ್ವಾಮಿ ಹಲವು ಬಾರಿ ಪದ್ರೌನಾದಿಂದ ಶಾಸಕರಾಗಿದ್ದರಿಂದ ಅಧಿಕಾರ ವಿರೋಧಿ ಗದ್ದಲ ತಪ್ಪಿಸಲು ತಮ್ಮ ಸ್ಥಾನವನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ ಫಾಜಿಲ್‌ನಗರದ ಜನರು ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ತಿರಸ್ಕರಿಸಿದರು. ಫಾಜಿಲ್‌ನಗರ ಚುನಾವಣೆ ಆರ್‌ಪಿಎನ್‌ ಸಿಂಗ್‌ ಅವರ ಮೂಗಿನ ನೇರಕ್ಕೆ ಪ್ರಶ್ನೆಯಾಗಿ ಪರಿಣಮಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.

ಫಾಜಿಲ್‌ನಗರ ಚುನಾವಣಾ ಇತಿಹಾಸ

90ರ ದಶಕದಲ್ಲಿ ಫಾಜಿಲ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವನಾಥ್‌ ಪ್ರಾಬಲ್ಯ ಮೆರೆದಿದ್ದರು. 1989ರಿಂದ 2002ರವರೆಗೆ ಸತತ ನಾಲ್ಕು ಬಾರಿ ಶಾಸಕರಾಗಿದ್ದರು. ಜನತಾ ದಳದಿಂದ 3 ಬಾರಿ ಗೆದ್ದಿದ್ದರೆ, 1996ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2002ರ ಚುನಾವಣೆಯಲ್ಲಿ ಜಗದೀಶ್ ಮಿಶ್ರಾ ಮೊದಲ ಬಾರಿಗೆ ಬಿಜೆಪಿಯಿಂದ ಈ ಸ್ಥಾನವನ್ನು ಗೆದ್ದಿದ್ದರು. ಅವರು ಹಿರಿಯ ನಾಯಕ ವಿಶ್ವನಾಥ್ ಅವರನ್ನು ಸೋಲಿಸಿದರು. ವಿಶ್ವನಾಥ್ 2007 ರಲ್ಲಿ ಪುನರಾಗಮನ ಮಾಡಿದರು, ಆದರೆ 2012 ಮತ್ತು 2017 ರಲ್ಲಿ ಬಿಜೆಪಿಯ ಗಂಗಾ ಸಿಂಗ್ ಗೆದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗಂಗಾ ಸಿಂಗ್ ಕುಶ್ವಾಹ 102778 ಮತಗಳನ್ನು ಪಡೆದಿದ್ದರು. ಅವರು ಎಸ್‌ಪಿಯ ವಿಶ್ವನಾಥ್ ಅವರನ್ನು 41922 ಮತಗಳಿಂದ ಸೋಲಿಸಿದರು.

ಬಿಎಸ್‌ಪಿ ಮತ್ತು ಬಿಜೆಪಿಯಲ್ಲಿದ್ದ ಸ್ವಾಮಿ ಪ್ರಸಾದ್ ಮೌರ್ಯ 

ಸ್ವಾಮಿ ಪ್ರಸಾದ್ ಮೌರ್ಯ ಅವರು ಲೋಕದಳದಿಂದ ರಾಜಕೀಯ ಆರಂಭಿಸಿದರು. 68ರ ಹರೆಯದ ಸ್ವಾಮಿ ಪ್ರಸಾದ್ ಮೌರ್ಯ ಪ್ರತಾಪಗಢ ಜಿಲ್ಲೆಯವರು, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಮಾಯಾವತಿಯವರ ಸರ್ಕಾರಗಳಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ರಾಯ್ ಬರೇಲಿಯ ಉಂಚಹಾರ್‌ನಿಂದ ಎರಡು ಬಾರಿ ಮತ್ತು ಕುಶಿನಗರದ ಪದ್ರೌನಾ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮೌರ್ಯ ಅವರು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಎಸ್‌ಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ತೊರೆದು ಎಸ್‌ಪಿಗೆ ಸೇರ್ಪಡೆಗೊಂಡರು, ಚುನಾವಣೆಗೆ ಮುನ್ನ ಸಚಿವ ಸ್ಥಾನವನ್ನು ತೊರೆದರು. ಸ್ವಾಮಿ ಪ್ರಸಾದ್ ಮೌರ್ಯ ಯುಪಿಯಲ್ಲಿ ಕೊಯಿರಿ ಸಮುದಾಯದ ಅತಿ ಎತ್ತರದ ನಾಯಕ ಎಂದು ಹೆಸರಾಗಿದ್ದರು, ಆದರೆ 2016 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮತ್ತು 2017 ರಲ್ಲಿ ಉಪಮುಖ್ಯಮಂತ್ರಿಯಾದ ನಂತರ, ಕೇಶವ್ ಪ್ರಸಾದ್ ಮೌರ್ಯ ಅವರು ಕೊಯಿರಿ ಭ್ರಾತೃತ್ವದ ಅತಿದೊಡ್ಡ ನಾಯಕರಾದರು.

Follow Us:
Download App:
  • android
  • ios