ಹೂಮಾಲೆ ಹಾಕುವ ವೇಳೆ ವರನಿಗೆ ಬಾರಿಸಿದ ವಧು ಮದುವೆ ದಿನವೂ ಕುಡಿದು ಬಂದ ಆರೋಪ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಉತ್ತರ ಪ್ರದೇಶ: ಹಮೀರ್‌ಪುರದಲ್ಲಿ ಮದುವೆ ಸಮಾರಂಭದ ವೇಳೆ ವಧು ವರನಿಗೆ ಕಪಾಳಮೋಕ್ಷ ಮಾಡಿ ಮದುವೆ ಮಂಟಪದಿಂದ ಹೊರ ನಡೆದ ಘಟನೆಯೊಂದು ನಡೆದಿದೆ, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ (Uttar Pradesh) ಜಲೌನ್ (Jalaun)ಜಿಲ್ಲೆಯ ಚಮರಿ ಗ್ರಾಮದಿಂದ (Chamari village) ಹಮೀರ್‌ಪುರಕ್ಕೆ (Hamirpur) ವರನ ಕಡೆಯ ದಿಬ್ಬಣ ಆಗಮಿಸಿತ್ತು. ವಧು ವರನಿಗೆ ಕಪಾಳಮೋಕ್ಷ ಮಾಡಲು ನಿಜವಾದ ಕಾರಣವನ್ನು ಕಂಡುಹಿಡಿಯಲಾಗದಿದ್ದರೂ, ವರನು ಮದುವೆಯ ಸ್ಥಳಕ್ಕೆ ಕುಡಿದು ಬಂದಿದ್ದಾನೆ ಎಂದು ವಧುವಿನ ಕುಟುಂಬದ ಹತ್ತಿರದ ಜನರು ಹೇಳಿದ್ದಾರೆ, ಇದು ಹುಡುಗಿಯನ್ನು ಕೆರಳಿಸಿದೆ. ಇತ್ತ ಯುವತಿ ಕೈಯಿಂದ ಹೊಡೆಸಿಕೊಂಡ ವರನನ್ನು ರವಿಕಾಂತ್ (Ravikanth) ಎಂದು ಗುರುತಿಸಲಾಗಿದೆ.
ವಿಡಿಯೋದಲ್ಲಿ ಕಾಣಿಸುವಂತೆ ವಧು ವರರು ವೇದಿಕೆ ಮೇಲೆ ಹಾರ ಬದಲಾಯಿಸಿಕೊಳ್ಳಲು ಸಿದ್ಧತೆ ನಡೆಸುತ್ತಿರುತ್ತಾರೆ. ಹಿನ್ನೆಲೆಯಲ್ಲಿ ಶೋಭಾನೆ ಹಾಡು ಕೇಳಿ ಬರುತ್ತಿದೆ. ವರ ವಧುವಿನ ಕುತ್ತಿಗೆಗೆ ಹಾರವನ್ನು ಹಾಕುತ್ತಾನೆ. ಈ ವೇಳೆ ಸಿಟ್ಟಿಗೆದ್ದ ವಧು ಆತನ ಕಪಾಳಕ್ಕೆ ರಪರಪನೇ ಬಾರಿಸುತ್ತಾಳೆ. ವಧು ವರನಿಗೆ ಒಂದೇ ಬಾರಿ ಅಲ್ಲ ಎರಡೆರಡು ಬಾರಿ ಕಪಾಳಮೋಕ್ಷ ಮಾಡಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ (viral video). ವಧುವಿನ ಮನೆಯವರು ವಿವಾಹ (wedding) ಸ್ಥಳಕ್ಕೆ ವರನ ಕಡೆಯವರನ್ನು ಅತ್ಯಂತ ವೈಭವ ಮತ್ತು ಸಂತೋಷದಿಂದ ಸ್ವಾಗತಿಸಿದ್ದರು.
ಮದುವೆ ಹೆಣ್ಣಿನ ಫುಶ್ಅಪ್ ವಿಡಿಯೋ ವೈರಲ್
ಆದರೆ ನಂತರ ನಡೆದ ಈ ಅಹಿತಕರ ಘಟನೆಯು ಮದುವೆಯ ಸಂಭ್ರಮವನ್ನು ಕಳೆಗುಂದುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿರುವ ವಿಡಿಯೋದಲ್ಲಿ ಹಮೀರ್‌ಪುರದ (Hamirpur) ಸ್ವಾಸಾ (Swasa) ಗ್ರಾಮದ ವರನಿಗೆ ಕಪಾಳಮೋಕ್ಷ ಮಾಡಿದ ನಂತರ ವಧು ಸಮಾರಂಭವನ್ನು ಮಧ್ಯದಲ್ಲಿ ಬಿಟ್ಟು ಹೋಗಿದ್ದಾಳೆ. ನಂತರ ಮದುವೆಗೆ ಬಂದ ಅತಿಥಿಗಳು ಹೇಗೆ ಆಘಾತಕ್ಕೊಳಗಾದರು ಎಂಬುದನ್ನು ವೀಡಿಯೊ ತೋರಿಸುತ್ತದೆ. ಇಷ್ಟೆಲ್ಲಾ ಆದ ಬಳಿಕವೂ ಎರಡು ಕಡೆಯವರು ಒಪ್ಪಿಗೆ ಸೂಚಿಸಿ ಸಂಧಾನ ಮಾಡಿ ಈ ಮದುವೆಯನ್ನು ಮುಂದುವರೆಸಿದ್ದು, ನಂತರ ಮದುವೆ ನಡೆಯಿತು. ಮದುವೆ ಮುಗಿದ ನಂತರ ವಧುವನ್ನು ಗಂಡಿನ ಮನೆಯವರ ಜೊತೆ ಕಳುಹಿಸಿ ಕೊಡಲಾಯಿತು ಎಂದು ತಿಳಿದು ಬಂದಿದೆ.
ಮದುವೆ ಎಂದರೆ ಅದು ಜೀವನವನ್ನೇ ಬದಲಾಯಿಸುವ ದಿನ. ಆ ದಿನ ವಧು ವರರು ಸಂಭ್ರಮದ ಜೊತೆ ಸೌಂದರ್ಯವೂ ಮುಖದಲ್ಲಿ ಕಳೆಕಟ್ಟಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. ಆದರೆ ಇಲ್ಲೊಬ್ಬರು ವಧು ಮದುವೆ ದಿನ ಸಖತ್ ಆಗಿ ರೆಡಿ ಆಗುವುದರ ಜೊತೆ ಮದುವೆ ದಿನವೇ ಫುಶ್‌ಅಪ್ಸ್ ಮಾಡುವ ಮೂಲಕ ತಾನು ಯಾವ ಪುರುಷರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮದುವೆ ಹೆಣ್ಣು ಫುಶ್‌ಅಪ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇಷ್ಟವಿಲ್ಲದ ಮದುವೆ: ಸರ್‌ಫ್ರೈಸ್ ಇದೆ ಎಂದು ಕರೆದು ಯುವಕನ ಕತ್ತು ಕೊಯ್ದ ಯುವತಿ
12 ಸೆಕೆಂಡುಗಳ ಈ ವಿಡಿಯೋದಲ್ಲಿ ಮದುವೆ ಹೆಣ್ಣು ಭಾರಿ ಗಾತ್ರದ ಲೆಹೆಂಗಾ ಧರಿಸಿ ಮಿನುಗುವ ಆಭರಣಗಳನ್ನು ತೊಟ್ಟು ಫುಶ್‌ಅಪ್ಸ್ ಮಾಡುವ ಮೂಲಕ ಎಲ್ಲರನ್ನು ದಂಗು ಬಡಿಸಿದ್ದಾರೆ. ಭಾರಿ ಆಭರಣ ಹಾಗೂ ಭಾರವಾದ ಲೆಹೆಂಗಾ ತಲೆ ಮೇಲೆ ಶಾಲು ಹಾಕಿಕೊಂಡು ಆಕೆ ಫುಶ್ ಅಪ್ ಮಾಡುತ್ತಿದ್ದಾರೆ.12 ಸೆಕೆಂಡುಗಳ ವೀಡಿಯೊವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಆಕೆ ತನ್ನ ಅತ್ತೆ ಮಾವ ಸೇರಿದಂತೆ ಪತಿಯ ಕುಟುಂಬದವರಿಗೆ ಎಚ್ಚರಿಕೆ ನೀಡುತ್ತಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.