ಆಂಧ್ರಪ್ರದೇಶದಲ್ಲೊಂದು ಭಯಾನಕ ಘಟನೆ ವಿವಾಹ ಇಷ್ಟವಿಲ್ಲದ ಯುವತಿಯಿಂದ ವರನ ಮೇಲೆ ಹಲ್ಲೆ ಸರ್‌ಫ್ರೈಸ್‌ ಎಂದು ಕರೆದು ಕತ್ತು ಸೀಳಿದ ಯುವತಿ

ಹೈದರಾಬಾದ್: ತನ್ನ ಹೆತ್ತವರು ಆಯ್ಕೆ ಮಾಡಿದ ಯುವಕನನ್ನು ಮದುವೆಯಾಗಲು ಇಷ್ಟವಿಲ್ಲದ ಯುವತಿಯೊಬ್ಬಳು ಆತನನ್ನು 'ಸರ್ಪ್ರೈಸ್ ಮೀಟ್' ಎಂದು ಕರೆದು ಬಳಿಕ ಆತನ ಕತ್ತು ಕೊಯ್ದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಮದುವೆಯಾಗಬೇಕಿದ್ದ ಯುವತಿಯಿಂದ ಹಲ್ಲೆಗೊಳಗಾದ ಯುವಕ ರಾಮು ನಾಯ್ಡು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ( Council of Scientific & Industrial Research) (CSIR) ನಲ್ಲಿ ವಿಜ್ಞಾನಿಯಾಗಿದ್ದಾರೆ (scientist). ಘಟನೆಯ ಬಳಿಕ ಕುತ್ತಿಗೆಯಲ್ಲಾದ ಆಳವಾದ ಗಾಯದ ಕಾರಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ವಿಶಾಖಪಟ್ಟಣಂನ (Visakhapatnam) ಚೋಡವರಂನಲ್ಲಿ(Chodavaram) ಈ ಘಟನೆ ನಡೆದಿದೆ. ರಾಮು ನಾಯ್ಡು (Ramu Naidu) ಮತ್ತು ಪುಷ್ಪಾ (Pushpa) ಮುಂದಿನ ತಿಂಗಳು ಮದುವೆಯಾಗಬೇಕಿತ್ತು. 22 ವರ್ಷದ ಪುಷ್ಪಾ ಶಾಲೆ ಬಿಟ್ಟ ವಿದ್ಯಾರ್ಥಿನಿಯಾಗಿದ್ದು, ರಾಮು ಅವರನ್ನು ಭೇಟಿಯಾಗುವ ಮುನ್ನ ಆಕೆ ಮೂರು ಚಾಕುಗಳನ್ನು ಖರೀದಿಸಿದ್ದಳು. ಇವರಿಬ್ಬರ ಮದುವೆಯನ್ನು ಮೇ 29 ರಂದು ಮಾಡಲು ಪೋಷಕರು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಕ್ರಿಮಿನಲ್ ಇತಿಹಾಸವನ್ನು ಹೊಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಸ್ ಗೌತಮಿ (S Gowthami) ಹೇಳಿದ್ದಾರೆ.

ಹುಡುಗಿ ಚುಡಾಯಿಸಿದ ಅಂತ ಪ್ರಶ್ನಿಸಿದ್ದಕ್ಕೆ ಕೊಂದೇ ಬಿಟ್ಟ ಪಾಪಿ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸರ್‌ಫ್ರೈಸ್ ಇದೆ ಎಂದು ಹೇಳಿ ವಧು ಪುಷ್ಪಾ ತಾನು ವಿವಾಹವಾಗಬೇಕಿದ್ದ ರಾಮು ನಾಯ್ಡುವನ್ನು ಬೆಟ್ಟದ ತುದಿಗೆ ಕರೆದಿದ್ದಳು. ಹೀಗೆ ತಾನು ಮದುವೆಯಾಗುವ ಹೆಣ್ಣು ಏನು ಸರ್‌ಫ್ರೈಸ್‌ ನೀಡಬಹುದು ಎಂಬ ಕುತೂಹಲದಿಂದ ಬೆಟ್ಟವೇರಿದ ರಾಮುವಿಗೆ ಅಲ್ಲಿ ಆಘಾತ ಕಾದಿತ್ತು. ಆಕೆ ಬೆಟ್ಟ ಮೇಲಿದ್ದ ದೇವಸ್ಥಾನದ ಬಳಿ ಬಂದ ರಾಮುವಿನ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಗಂಭೀರವಾಗಿ ಗಾಯಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಖಿಚಡಿಗೆ ಉಪ್ಪು ಹೆಚ್ಚು ಹಾಕಿದ್ದಕ್ಕೆ ಕತ್ತು ಹಿಸುಕಿ ಪತ್ನಿಯ ಕೊಲೆ
ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿವೆ. ಅವನ ಬಿಳಿ ಅಂಗಿಯು ರಕ್ತದಲ್ಲಿ ಮುಳುಗಿತ್ತು. ಘಟನೆಯ ಬಳಿಕ ಯುವತಿ ಪುಷ್ಪಾಳನ್ನು ವಿಚಾರಿಸಿದಾಗ ತನ್ನ ಹೆತ್ತವರು ಆಯ್ಕೆ ಮಾಡಿದ ರಾಮು ನಾಯ್ಡು (Ramu Naidu) ಅವರನ್ನು ಮದುವೆಯಾಗಲು ತಾನು ಬಯಸುವುದಿಲ್ಲ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಮದುವೆಗೆ ತಾನು ಆಕ್ಷೇಪ ವ್ಯಕ್ತಪಡಿಸಿದ್ದರೂ ತನ್ನ ಪೋಷಕರು ತನ್ನ ಪ್ರತಿಭಟನೆಗೆ ಕಿವಿಗೊಡಲಿಲ್ಲ. ಇದರಿಂದ ಸಿಟ್ಟಿಗೆದ್ದು ಈ ಕೃತ್ಯವೆಸಗಿದ್ದಾಗಿ ಆಕೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. 

ಬೆಳಗ್ಗಿನ ಉಪಾಹಾರಕ್ಕೆ ತಯಾರಿಸಿದ ಖಿಚಡಿಗೆ ಉಪ್ಪು ಹೆಚ್ಚು ಹಾಕಿದಳು ಎಂದು ಸಿಟ್ಟುಗೊಂಡ ಪತಿಯೋರ್ವ ಪತ್ನಿಯನ್ನೇ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ (Maharashtra) ಥಾಣೆ (Thane)ಜಿಲ್ಲೆಯಲ್ಲಿ ನಡೆದಿದೆ. 46 ವರ್ಷದ ನಿಲೇಶ್ ಘಾಗ್ ತನ್ನ 40 ವರ್ಷದ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ. ಭಾಯಂದರ್ ಪೂರ್ವದ (Bhayandar East) ಫಟಕ್ ರಸ್ತೆ (Phatak Road) ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗ್ಗೆ 9.30 ರ ಸುಮಾರಿಗೆ ಉಪಹಾರ ಸೇವಿಸಿದ ಪತಿ ನಿಲೇಶ್ ಘಾಗ್ (Nilesh Ghagh) ನಂತರ ತನ್ನ ಪತ್ನಿ ನಿರ್ಮಲಾಳನ್ನು (Nirmala)ಕತ್ತು ಹಿಸುಕಿ ಕೊಂದಿದ್ದಾನೆ. ಆಕೆ ತಯಾರಿಸಿದ 'ಖಿಚಡಿ'ಯಲ್ಲಿ ಉಪ್ಪು ಹೆಚ್ಚಾಗಿದ್ದರಿಂದ ಕೋಪಗೊಂಡ ಆತ ಈ ಕೃತ್ಯವೆಸಗಿದ್ದಾನೆ. ಎಂದು ಮೀರಾ ಭಯಂದರ್-ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ (Mira Bhayandar-Vasai Virar police commissionerate) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.