ಡೆಲ್ಲಿ ಮಂಜು

ನವದೆಹಲಿ(ಜೂ. 01)    ಡೆಲ್ಲಿಗೆ ಗಡಿಗಳೇ ಕಂಟಕವಾ.?  ಆಸ್ಪತ್ರೆಗಳಲ್ಲಿ ಡೆಲ್ಲಿ ಜನಕ್ಕೆ ಮೊದಲು ಆದ್ಯತೆ ಎಂದು ಕೇಜ್ರಿವಾಲ್ ಸಾಹೇಬ್ರು ಇವತ್ತು ಅಂದಿದ್ಯಾಕೆ? 

ಇವತ್ತು ಆನ್ ಲಾಕ್ -1 ಸುದ್ದಿಗೋಷ್ಠಿ ನಡೆಸಿದ ಸಿಎಂ ಕೇಜ್ರಿವಾಲ್, ಜನತೆಯ ಮುಖ್ಯಮಂತ್ರಿಯಾಗಿ ದೆಹಲಿಯ ಗಡಿಗಳು ತೆರೆಯುವ ಬಗ್ಗೆ ನನಗೆ ನಿಮ್ಮ ಸಲಹೆಗಳು ಬೇಕು ಅಂಥ ಮತ್ತೆ ಡೆಲ್ಲಿಯ ಜನತೆಯ ಮುಂದೆ ಬಂದಿದ್ದಾರೆ.

ಒಂದು ವಾರದ ಮಟ್ಟಿಗೆ ದೆಹಲಿ-ಉತ್ತರ ಪ್ರದೇಶದ ಗಡಿ ( ಗಾಜಿಯಾಬಾದ್, ನೋಯ್ಡಾ ಗಡಿಗಳು), ಹರಿಯಾಣದ ಗಡಿ( ಗುಡುಗಾಂವ್, ಫರಿದಾಬಾದ್, ಬಹದೂರ್ ಘಡ್) ವಾಹನ ಸಂಚಾರ ಬಂದ್ ಮಾಡಿದ್ದಾರೆ.

ಕೊರೋನಾ ಬಂದೇ ಇಲ್ಲ, ಆದರೆ ಡಬಲ್ ಕ್ವಾರಂಟೈನ್ , ಏನಿದು ಕತೆ?

 ಅಲ್ಲದೇ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರ ಸಂಖ್ಯೆ ತಲುಪುತ್ತಿದೆ.  ಇದಕ್ಕೆ ತಕ್ಕಂತೆ ಈ ವಾರದಲ್ಲಿ ಹೆಚ್ಚುಕಡಿಮೆ 10 ಸಾವಿರ ಬೆಡ್ ಗಳು ಆಸ್ಪತ್ರೆ ಗಳಲ್ಲಿ ಲಭ್ಯವಾಗಲಿವೆ. ಆದ್ರೆ ಆಸ್ಪತ್ರೆಗಳಲ್ಲಿ ದೆಹಲಿಯ ಪ್ರಜೆಗಳಿಗೆ ಮೊದಲ ಆದ್ಯತೆ ಎಂದಿದ್ದಾರೆ.

ದೆಹಲಿ ರಾಜಧಾನಿ. ಇಲ್ಲಿಗೆ ಎಲ್ಲರೂ ಬರ್ತಾರೆ ಹಾಗಾಗಿ  ಚಿಕಿತ್ಸೆ ಬೇರೆಯವರಿಗೆ ಇಲ್ಲ ಅಂಥ ಹೇಳುವುದು ಹೇಗೆ? ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ಕೊಡಿ ಅಂಥ ದೆಹಲಿ ಜನತೆಯ ಮೊರೆ ಹೋಗಿದ್ದಾರೆ. 

ಆನ್ ಲಾಕ್-1 ಮುಖ್ಯಾಂಶಗಳು

* ಸಮಬೆಸ ಸಂಖ್ಯೆಯಲ್ಲಿ  ತೆರೆಯುತ್ತಿದ್ದ ಮಾರುಕಟ್ಟೆ ಗಳು ಈಗ ನಿತ್ಯ ತೆರೆಯಬಹುದು.
* ಬಾರ್ಬರ್ ಅಂಗಡಿಗೆ ತೆರೆಯಬಹುದು. ಆದ್ರೆ ಸ್ಪಾಗೆ ಅನುಮತಿ ಇಲ್ಲ.
* ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ತನಕ ಕರ್ಫ್ಯೂ ಮುಂದುವರಿಕೆ
* ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯ ಸವಾರರಿಗೂ ಅವಕಾಶ
* ಕೈಗಾರಿಕಾಗಳು ತೆರೆಯಲು ಅನುಮತಿ
* ಸಿನಿಮಾ, ಶಾಲೆ-ಕಾಲೇಜು ತೆರೆಯಲು ಅನುಮತಿ ಇಲ್ಲ.