'ಪ್ರತಿಪಕ್ಷದ ಬಳಿ ಸಾಕ್ಷ್ಯಗಳಿದ್ದರೆ, ಕೋರ್ಟ್‌ಗೆ ಹೋಗಲಿ..' ಅದಾನಿ ಗ್ರೂಪ್ ವಿಚಾರದಲ್ಲಿ ಅಮಿತ್ ಶಾ ತಿರುಗೇಟು!
ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳು ಅಲ್ಲೋಲ ಕಲ್ಲೋಲವಾಗಿರುವುದು ತಿಳಿದ ವಿಚಾರ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಅದಾನಿ ಗ್ರೂಪ್‌ಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂದು ಆರೋಪ ಮಾಡಿದೆ. ಇದಕ್ಕೆ ಕೇಂದ್ರ ಗೃಹ ಸಚಿವ್ ಅಮಿತ್ ಶಾ ತಿರುಗೇಟು ನೀಡಿದ್ದಾರೆ.
ನವದೆಹಲಿ (ಫೆ.14): ಅದಾನಿ ಗ್ರೂಪ್‌ನ ಮೇಲೆ ಅವ್ಯವಹಾರ ಹಾಗೂ ಷೇರು ಬೆಲೆ ಏರಿಕೆಯಲ್ಲಿ ವಂಚನೆ ಮಾಡಿರುವ ಆರೋಪದ ಕುರಿತಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳು ಜೆಪಿಸಿ ತನಿಖೆಗಾಗಿ ಮುಗಿಬಿದ್ದಿವೆ. ಆದರೆ, ಸರ್ಕಾರ ಮಾತ್ರ ಈವರೆಗೂ ಯಾವುದೇ ಸ್ಪಷ್ಟನೆಯಾಗಲಿ, ಹೇಳಿಕೆಯಾಗಲಿ ನೀಡಿಲ್ಲ. ಸ್ವತಃ ಸದನದಲ್ಲಿ ಬಿಜೆಪಿಯ ನಾಯಕರು ಜೆಪಿಸಿ ತನಿಖೆ ನಡೆಸಲು ಬರೋದಿಲ್ಲ ಎಂದು ಹೇಳಿದ್ದರು. ಇನ್ನು ಈ ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅದಾನಿ ಗ್ರೂಪ್‌ನ ವಿಚಾರದಲ್ಲಿ ಸರ್ಕಾರದ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದಿದ್ದಾರೆ. ಅದಾನಿ ಗ್ರೂಪ್‌ಗೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ ಎನ್ನುವ ವಿಚಾರದ ಬಗ್ಗೆಯೂ ಅಮಿತ್ ಶಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರವಾಗಲಿ ಸ್ವತಃ ಬಿಜೆಪಿಯಾಗಲಿ ಅದಾನಿ ಗ್ರೂಪ್ ವಿಚಾರದಲಲ್ಲಿ ಯಾವ ಸಂಗತಿಯನ್ನು ಬಚ್ಚಿಡುತ್ತಿಲ್ಲ. ಈ ವಿಚಾರದಲ್ಲಿ ಹೆದರುವಂಥದ್ದು ಕೂಡ ಏನೂ ಇಲ್ಲ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳಿಗೆ ಸದನದಲ್ಲಿ ಗಲಾಟೆ, ಗದ್ದಲ ಎಬ್ಬಿಸೋದು ಬಿಟ್ಟು ಬೇರೇನೂ ಬರೋದಿಲ್ಲ. ಹಾಗೇನಾದರೂ ಸರ್ಕಾರವಾಗಲಿ, ಅದಾನಿ ಗ್ರೂಪ್ ಆಗಲಿ, ಇಲ್ಲ ಸರ್ಕಾರವೇ ಸಹಾಯ ಮಾಡುತ್ತಿದೆ ಎಂದಾಗಲು ಪ್ರತಿಪಕ್ಷಗಳ ಬಳಿ ಸಾಕ್ಷ್ಯಗಳಿದ್ದರೆ ಅವರು ನೇರವಾಗಿ ಕೋರ್ಟ್‌ಗೆ ಹೋಗಬಹುದಲ್ಲ ಎಂದು ಹೇಳಿದರು.
ಬಿಜೆಪಿ, ಕೇಂದ್ರ ಸರ್ಕಾರ ಅದಾನಿ ಗ್ರೂಪ್ ಜೊತೆ ಸ್ನೇಹಪರ ಸಂಬಂಧ ಹೊಂದಿದೆ. ಅದಕ್ಕಾಗಿಯೇ ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ಸರ್ಕಾರ ಹಿಂಜರಿಯುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬಿಜೆಪಿ ಅಧಿಕಾರದಲ್ಲಿರುವ ಈ ಸಮಯದಲ್ಲಿ ಅದಾನಿ ಗ್ರೂಪ್ ಬಹುತೇಕ ಎಲ್ಲಾ ಒಪ್ಪಂದಗಳನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದರೆ, ಪ್ರತಿಯಾಗಿ ಇದಕ್ಕೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಈ ವಿಚಾರದಲ್ಲಿ ಬಿಜಿಎಪಿಯಾಗಲಿ, ಕೇಂದ್ರ ಸರ್ಕಾರವಾಗಲಿ ಮುಚ್ಚಿಡುವಂಥದ್ದು ಏನೂ ಇಲ್ಲ, ಅಲ್ಲದೆ, ಯಾವ ಹೆದರಿಕೆಯೂ ತಮಗಿಲ್ಲ ಎಂದು ಹೇಳಿದ್ದರು. ಅದಲ್ಲದೆ, ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ಬಗ್ಗೆ ಗಮನ ನೀಡಿದೆ. ನ್ಯಾಯಾಂಗದ ಅಧೀನದಲ್ಲಿ ಈ ವಿಚಾರಗಳಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಚಿವನಾಗಿ ಈ ಬಗ್ಗೆ ಹೆಚ್ಚಿನ ಮಾತನಾಡುವುದು ಸರಿ ಎನಿಸುವುದಿಲ್ಲ ಎಂದರು.
ಸತ್ಯವನ್ನು ಮರೆಮಾಚಲು ನೀವು ಸಾವಿರ ಪ್ರಯತ್ನ ಮಾಡಿದರೂ ಏನೂ ಆಗೋದಿಲ್ಲ. ಸತ್ಯ ಎನ್ನುವುದು ಸೂರ್ಯನಂತೆ ಎಷ್ಟೇ ಅಪವಾದಗಳಿದ್ದರೂ ಮತ್ತೆ ಬೆಳಗುತ್ತದೆ. 2022ರಿಂದಲೂ ಮೋದಿ ಅವರ ಕುರಿತಾಗಿ ಬೇಕಾದಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಎಲ್ಲದರ ನಡುವೆ ಅವರು ಎದ್ದು ಬಂದಿದ್ದಾರೆ. ಸತ್ಯ ಮಾತಿನಂತೆ ನೆಯುವ ಕಾರಣಕ್ಕಾಗು ಇಂದಿಗೂ ಜನರ ನಡುವೆ ಅವರ ಪ್ರಖ್ಯಾತಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಯಡಿಯೂರಪ್ಪ ತಂದ ರೈತ ಯೋಜನೆಗಳಿಂದ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ: ಅಮಿತ್ ಶಾ
ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ಅವ್ಯವಹಾರದ ಆರೋಪಗಳನ್ನು ಮಾಡಿದ ಬಳಿಕ, ದೇಶೀಯ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಎಲ್ಲಾ ಷೇರುಗಳು ನೆಲಕಚ್ಚಿದ್ದವು. ಅಂದಾಜು 10 ಲಕ್ಷ ಕೋಟಿ ರೂಪಾಯಿ ನಷ್ಟವಾಗಿತ್ತು. ಇದರ ನಡುವೆ ಫೋರ್ಬ್ಸ್ ಹಾಗೂ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ಗಳಲ್ಲಿ ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿ 20ಕ್ಕಿಂತ ಕೆಳಗಿನ ಸ್ಥಾನಕ್ಕೆ ಜಾರಿದ್ದರು.
ಸಿಎಂ ಬೊಮ್ಮಾಯಿ ಕೈ ಬಲಪಡಿಸಿ: ಬಿಜೆಪಿ ವರಿಷ್ಠ ಅಮಿತ್ ಶಾ ಬಹಿರಂಗ ಕರೆ
ಇನ್ನೊಂದೆಡೆ ಬಜೆಟ್ ಅಧಿವೇಶನದಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಈ ವಿಚಾರದಲ್ಲಿ ಮುಗಿಬಿದ್ದಿದ್ದವು. ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ವೇಳೆ, ರಾಜ್ಯಸಭೆಯಲ್ಲಿ ವಿಪಕ್ಷಗಗಳು 'ಮೋದಿ ಮೋದಿ ಭಾಯಿ ಭಾಯಿ' ಎಂದು ಘೋಷಣೆ ಕೂಗಿದ್ದವು.