Asianet Suvarna News Asianet Suvarna News

ಹುತಾತ್ಮರಾದ ನಾಲ್ವರು ಜಮ್ಮು ಪೊಲೀಸ್ ಕುಟುಂಬಕ್ಕೆ ಉದ್ಯೋಗ: ನೇಮಕಾತಿ ಪತ್ರ ನೀಡಿದ ಅಮಿತ್ ಷಾ

ಕಣಿವೆ ನಾಡು ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಯೋತ್ಪದಾಕರ ವಿರುದ್ಧ ಹೋರಾಡಿ ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ.

Union Home Minister Amit Shah handed over appointment letters to the family of Police personnel who were killed in terror attack akb
Author
First Published Oct 5, 2022, 12:45 PM IST

ಶ್ರೀನಗರ: ಕಣಿವೆ ನಾಡು ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಯೋತ್ಪದಾಕರ ವಿರುದ್ಧ ಹೋರಾಡಿ ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ಜಮ್ಮು ಕಾಶ್ಮೀರದ ನಾಲ್ವರು ಪೊಲೀಸ್ ಸಿಬ್ಬಂದಿ ಉಗ್ರ ಚಟುವಟಿಕೆ ಸಂಬಂಧಿ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಹುತಾತ್ಮರಾದ ನಾಲ್ವರು ಜಮ್ಮು ಕಾಶ್ಮೀರ ಪೊಲೀಸ್ ಕುಟುಂಬಕ್ಕೆ ಕೇಂದ್ರ ಗೃಹ ಮಂತ್ರಿ ರಾಜಭವನದಲ್ಲಿ ನೇಮಕಾತಿ ಪತ್ರ ವಿತರಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗೃಹ ಸಚಿವ ಅಮಿತ್ ಷಾ (Amit Shah) ಕೂಡ ಹುತಾತ್ಮ ಪೊಲೀಸರ ಕುಟುಂಬದ ಜೊತೆಗಿನ ತಮ್ಮ ಭೇಟಿಯ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದೆ ಎಂದು ಅಮಿತ್ ಷಾ ಬರೆದುಕೊಂಡಿದ್ದಾರೆ. ಉಗ್ರರ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರ ಹೋರಾಟವನ್ನು ಅವರು ಶ್ಲಾಘಿಸಿದ್ದಾರೆ. ಇಡೀ ದೇಶ ಇವರ ತ್ಯಾಗಕ್ಕೆ (sacrifice) ನಮಿಸುತ್ತದೆ ಎಂದು ಅಮಿತ್ ಷಾ ಹೇಳಿದ್ದಾರೆ. 

ಇದರೊಂದಿಗೆ ಭಯೋತ್ಪಾದಕರಿಂದ ಹತ್ಯೆಗೊಳಗಾದ ಕುಟುಂಬದವರಿಗೂ ಉದ್ಯೋಗ ನೇಮಕಾತಿ ನೀಡಲಾಗಿದೆ. ಉಗ್ರರಿಂದ ಹತ್ಯೆಗೊಳಗಾದ ಒಟ್ಟು 24 ಜನರ ಕುಟುಂಬಗಳಿಗೆ ಇದೇ ವೇಳೆ ಗೃಹ ಸಚಿವ (Union Home Minister) ಅಮಿತ್ ಷಾ ನೇಮಕಾತಿ ಪತ್ರ ವಿತರಿಸಿದರು. ಜಮ್ಮು ಕಾಶ್ಮೀರಕ್ಕೆ (Jammu and Kashmir) ನೀಡಲಾಗಿದೆ ವಿಶೇಷ ಸ್ಥಾನಮಾನದ ಕಾಯಿದೆ ಆರ್ಟಿಕಲ್ 370 ರದ್ದಾದ (abrogation of Article 370) ಬಳಿಕ ಮೊದಲ ಬಾರಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮಿತ್ ಷಾ ಕಣಿವೆ ನಾಡಿಗೆ ಭೇಟಿ ನೀಡಿದ್ದರು. ಈ ವೇಳೆ ಅಮಿತ್ ಷಾ, ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ನೌಗಾಮ್‌ನ ಪರ್ವಿಜ್ ಅಹ್ಮದ್ ಅವರ ಕುಟುಂಬವನ್ನು ಭೇಟಿ ಮಾಡಿದ್ದರು. ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು (appointment letters) ಕುಟುಂಬಕ್ಕೆ ಹಸ್ತಾಂತರಿಸಿದ್ದರು.
 

Follow Us:
Download App:
  • android
  • ios