ರಾಷ್ಟ್ರಪತಿ ದ್ರೌಪದಿ ಮುರ್ಮು ವಿಧವೆ, ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಉದಯನಿಧಿ ಸ್ಟಾಲಿನ್
ಸನಾತನ ಧರ್ಮ ನಾಶದ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ತುತ್ತಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿಧವೆ ಅನ್ನೋ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

ಚೆನ್ನೈ(ಸೆ.21) ಸನಾತನ ಧರ್ಮದ ಹೇಳಿಕೆ ಮೂಲಕ ದೇಶಾದ್ಯಂತ ಹಿಂದೂಗಳ ಆಕ್ರೋಶಕ್ಕೆ ತುತ್ತಾಗಿರುವ ತಮಿಳನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ಹೇಳಿಕೆ ನೀಡಿದ್ದರೆ. ರಾಜಕೀಯ ಕೀಳ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ನೂತನ ಸಂಸತ್ ಭವನ ಉದ್ಘಾಟನೆಗೆ ಬಿಜೆಪಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಇದಕ್ಕೆ ಮುಖ್ಯ ಕಾರಣ ದ್ರೌಪದಿ ಮುರ್ಮು ವಿಧವೆ. ಇಷ್ಟೇ ಅಲ್ಲ ಆದಿವಾಸಿ ಮಹಿಳೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ನೂತನ ಸಂಸತ್ ಭವನ ಉದ್ಘಾಟನೆಗೆ ತಮಿಳುನಾಡಿನ ಅಧೀನಂ ಸ್ವಾಮಿಜಿಗಳನ್ನು ಕರೆಸಿದ್ದಾರೆ. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಿಲ್ಲ. ದ್ರೌಪದಿ ಮುರ್ಮು ವಿಧವೆ ಹಾಗೂ ಆದಿವಾಸಿ ಮಹಿಳೆ ಅನ್ನೋ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಕರೆಸಿಲ್ಲ. ಇದು ಸನಾತನ ಧರ್ಮವೇ ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದ್ದಾರೆ. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಹಿಂದೂ ಧರ್ಮ ಜಗತ್ತಿಗೆ ಪಿಡುಗು: ಮತ್ತೆ ನಾಲಗೆ ಹರಿಬಿಟ್ಟ ಡಿಎಂಕೆ ನಾಯಕ ಎ.ರಾಜಾ
ಬಿಜೆಪಿ ಪಕ್ಷ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಅನ್ನೋದನ್ನು ರಾಜಕೀಯವಾಗಿ ಬಳಸಿಕೊಳ್ಳಿ. ಆದರೆ ಮುರ್ಮು ವಿಧವೆ, ಆದಿವಾಸಿ ಮಹಿಳೆ ಎಂದು ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ರಾಜ್ಯಸಭೆಯಲ್ಲಿ ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಈ ಕುರಿತು ಆರೋಪ ಮಾಡುತ್ತಿರುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಉತ್ತರವನ್ನು ಕೇಳಿಸಿಕೊಳ್ಳಿ ಎಂದು ಉದಯನಿಧಿ ಸ್ಟಾಲಿನ್‌ಗೆ ಸಲಹೆ ನೀಡಿದ್ದಾರೆ.
ಸನಾತನ ಧರ್ಮ ನಾಶಕ್ಕೆ ಕರೆಕೊಟ್ಟ ಬಲಿಕ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮದ್ರಾಸ್ ಹೈಕೋರ್ಟ್ ಕೂಟ ಪರೋಕ್ಷವಾಗಿ ಉದಯನಿಧಿ ಸ್ಟಾಲಿನ್‌ಗೆ ವಾರ್ನಿಂಗ್ ನೀಡಿತ್ತು. ವಾಕ್ ಸ್ವಾತಂತ್ರ್ಯವೆಂದರೆ ದ್ವೇಷಭಾಷಣ ಮಾಡಲು ಇರುವ ಸ್ವಾತಂತ್ರ್ಯವಲ್ಲ. ಸನಾತನ ಧರ್ಮವೆಂಬುದು ನೈತಿಕ ಮೌಲ್ಯಗಳ ಗುಚ್ಛವಾಗಿದೆ. ಅದು ದೇಶಕ್ಕಾಗಿ, ರಾಜನಿಗಾಗಿ, ತಂದೆ-ತಾಯಿಗಾಗಿ, ಗುರುಗಳಿಗಾಗಿ ಹಾಗೂ ಬಡವರು ಮುಂತಾದವರಿಗಾಗಿ ಜನರು ನಿಭಾಯಿಸಬೇಕಾದ ಕರ್ತವ್ಯವಾಗಿದೆ’ ಎಂದು ಮದ್ರಾಸ್ ಹೈಕೋರ್ಟ್ ಹೇಳಿಕೆ. ತನ್ಮೂಲಕ ಇತ್ತೀಚೆಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಾಕ್ಕೆ ಹೋಲಿಸಿ ಆಡಿದ ಮಾತುಗಳನ್ನು ಪರೋಕ್ಷವಾಗಿ ತರಾಟೆ ತೆಗೆದುಕೊಂಡಿತ್ತು.
ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಹಲವೆಡೆ ದೂರು ದಾಖಲಿಸಿದ್ದಾರೆ. ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ಸಂಸದ ಎ.ರಾಜಾ ಸಮರ್ಥಿಸಿಕೊಂಡಿದ್ದು, ವಿಶ್ವದಾದ್ಯಂತ ಇರುವ ಜನರ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.