ಹಿಂದೂ ಧರ್ಮ ಜಗತ್ತಿಗೆ ಪಿಡುಗು: ಮತ್ತೆ ನಾಲಗೆ ಹರಿಬಿಟ್ಟ ಡಿಎಂಕೆ ನಾಯಕ ಎ.ರಾಜಾ
ಸನಾತನ ಧರ್ಮ ಕುಷ್ಠರೋಗ ಇದ್ದಂತೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದ ಡಿಎಂಕೆ ನಾಯಕ ಎ.ರಾಜಾ, ಹಿಂದೂ ಧರ್ಮ ಜಗತ್ತಿಗೆ ಪಿಡುಗು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ರಾಜಾ ಮಾತನಾಡಿರುವ ವಿಡಿಯೋವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಂಚಿಕೊಂಡಿದ್ದಾರೆ.

ಚೆನ್ನೈ: ಸನಾತನ ಧರ್ಮ ಕುಷ್ಠರೋಗ ಇದ್ದಂತೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದ ಡಿಎಂಕೆ ನಾಯಕ ಎ.ರಾಜಾ, ಹಿಂದೂ ಧರ್ಮ ಜಗತ್ತಿಗೆ ಪಿಡುಗು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ರಾಜಾ ಮಾತನಾಡಿರುವ ವಿಡಿಯೋವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಾಜಾ ಭಾರತ ಜಾತೀಯತೆ ಎಂಬ ರೋಗದಿಂದ ನರಳುತ್ತಿದೆ. ಭಾರತದಲ್ಲಿ ಜಾತಿಯ ಆಧಾರದಲ್ಲಿ ಜನರನ್ನು ವಿಭಾಗಿಸಲಾಗುತ್ತಿದೆ. ಜಾತಿ ಎಂಬುದು ಕೇವಲ ಸಾಮಾಜಿಕ ಕೆಡುಕು ಅಷ್ಟೇ ಅಲ್ಲದೇ ಆರ್ಥಿಕವಾಗಿಯೂ ಹಬ್ಬಿದೆ. ಬೇರೆ ದೇಶದಲ್ಲಿ ಇರುವ ಹಿಂದುಗಳು ಸಹ ಇದಕ್ಕೆ ಒಳಗಾಗಿ ಅಲ್ಲಿ ಜಾತಿ ಜಾತಿಗಳನ್ನು ವಿಭಜಿಸುತ್ತಿದ್ದಾರೆ. ಹಾಗಾಗಿ ಹಿಂದೂ ಧರ್ಮ (Hindu Dharma) ಕೇವಲ ಭಾರತಕ್ಕಷ್ಟೇ ಅಲ್ಲದೇ, ಇಡೀ ಜಗತ್ತಿಗೆ ಮಾರಕವಾಗಿದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಅಣ್ಣಾಮಲೈ (Annamalai), ತಮಿಳುನಾಡಿನಲ್ಲಿ ಜಾತಿಯ ಒಡಕು ಮತ್ತು ದ್ವೇಷ ಹಬ್ಬಲು ಡಿಎಂಕೆ ಪ್ರಮುಖ ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ. ರಾಜಾ ಅಷ್ಟೇ ಅಲ್ಲದೇ ಡಿಎಂಕೆಯ ಹಲವು ನಾಯಕರು ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಾರೆ.
ಡಿಎಂಕೆ ಸಚಿವರ ಹೇಳಿಕೆಗೆ ನಡ್ಡಾ, ರವಿಶಂಕರ್, ಸಾವಂತ್ ಕಿಡಿ
ಚೆನ್ನೈ :ಇಂಡಿಯಾ ಕೂಟ ಹುಟ್ಟಿದ್ದೇ ಸನಾತನ ಧರ್ಮವನ್ನು ವಿರೋಧಿಸಲು ಎಂದು ಹೇಳಿರುವ ಡಿಎಂಕೆ ಸಚಿವ ಕೆ.ಪೊನ್ಮುದಿ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಡಿಎಂಕೆ ಹಾಗೂ ಇಂಡಿಯಾ ಕೂಟಗಳು ಧರ್ಮದ ಆಧಾರದಲ್ಲಿ ಜನರನ್ನು ವಿಭಾಗಿಸುತ್ತಿವೆ ಎಂದು ಹೇಳಿದೆ. ಸನಾತನ ಧರ್ಮವನ್ನು (Sanatana Dharma) ವಿರೋಧಿಸುವ ಮೂಲಕ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಗುಪ್ತ ಅಜೆಂಡಾವನ್ನು ಇಂಡಿಯಾ ಕೂಟ ಹೊಂದಿದೆ. ಕಾಂಗ್ರೆಸ್ ಮತ್ತು ಇಂಡಿಯಾ ಕೂಟ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಕು. ಧಾರ್ಮಿಕ ನಿಂದನೆ ಮಾಡುವುದನ್ನು ಸಂವಿಧಾನವೇ ನಿರ್ಬಂಧಿಸಿದೆ. ಇದು ಅವರಿಗೆ ಗೊತ್ತಿಲ್ಲವೇ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda)ಕಿಡಿಕಾರಿದ್ದಾರೆ.
ಬಿಜೆಪಿ ವಿಷ ಸರ್ಪವಿದ್ದಂತೆ, ಅದನ್ನು ರಾಜ್ಯದಿಂದ ಅಟ್ಟಾಡಿಸಿ ಓಡಿಸಬೇಕು: ಉದಯನಿಧಿ
"ಇಂಡಿಯಾ ಕೂಟದ ನಾಯಕರು ಈ ರೀತಿಯ ಹೇಳಿಕೆ ನೀಡಿರುವ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi)ಮೌನ ಮುರಿಯಬೇಕು" ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ (Ravishankar Prasad) ಹೇಳಿದ್ದಾರೆ. ಸನಾತನ ಧರ್ಮವನ್ನು ತೊಡೆದುಹಾಕುವುದಾಗಿ ಪೊನ್ಮುದಿ (Ponmudi) ಅವರು ಹೇಳಿದ್ದಾರೆ. ಇದರರ್ಥ ಹಿಂದೂ ಧರ್ಮವನ್ನು ಭಾರತದಿಂದ ತೊಲಗಿಸುವುದಾಗಿದೆ. ಇದು ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡಲಿದೆ. ಇದು ಡಿಎಂಕೆ ಕೋಮುವಾದಿ ನಿಲುವನ್ನು ತೋರ್ಪಡಿಸುತ್ತದೆ" ಎಂದು ತಮಿಳುನಾಡು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸನಾತನ ಧರ್ಮವನ್ನು ಭಾರತದಿಂದ ತೊಲಗಿಸಬೇಕು ಎಂದು ಹೇಳಿರುವ ಇಂಡಿಯಾ ಕೂಟಕ್ಕೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಈ ಮೊದಲು ಹಿಂದೂ ಧರ್ಮವನ್ನು ತೊಲಗಿಸಲು ಮೊಘಲರು, ಬ್ರಿಟಿಷರು ಪ್ರಯತ್ನಿಸಿದ್ದರು. ಈಗ ಆ ಕೆಲಸವನ್ನು ಇಂಡಿಯಾ ಕೂಟ ಮಾಡಲು ಮುಂದಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod savant) ಹೇಳಿದ್ದಾರೆ.
ಧರ್ಮಗಳ ಸಂದೇಶ ಒಗ್ಗಟ್ಟೇ ವಿನಾಃ ಬಿಕ್ಕಟ್ಟು ಅಲ್ಲ: ಸ್ಪೀಕರ್ ಖಾದರ್
ಸನಾತನ ಧರ್ಮದ ವಿರುದ್ಧ ಮಾತಾಡಿದವರ ಕಣ್ಣು, ನಾಲಿಗೆ ಕೀಳಲಾಗುವುದು: ಶೆಖಾವತ್
ಜೈಪುರ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ ಮತ್ತು ಕಣ್ಣುಗಳನ್ನು ಕಿತ್ತು ಹಾಕುತ್ತೇವೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ (Gajendra Singh Shekhawat) ಆಕ್ರೋಶ ಹೊರಹಾಕಿದ್ದಾರೆ. ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್ ಮತ್ತು ಎ. ರಾಜಾ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಕುಷ್ಟರೋಗಕ್ಕೆ ಹೋಲಿಸಿ ಅದನ್ನು ನಿರ್ಮೂಲನೆ ಮಾಡುವ ಕೀಳು ಹೇಳಿಕೆ ನೀಡಿದ್ದಕ್ಕೆ ಪ್ರತ್ಯುತ್ತರವಾಗಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಸಿಂಗ್ ಅವರ ಈ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ. ಈ ವೇಳೆ ಸಿಂಗ್ "ಸನಾತನ ಧರ್ಮದ ವಿರುದ್ಧ ಮಾತನಾಡಿ ಯಾರೂ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ನಾನು ಚಾಲೆಂಜ್ ಮಾಡುತ್ತೇನೆ. 2,000 ವರ್ಷಗಳ ಹಿಂದಿನಿಂದ ಸನಾತನ ಧರ್ಮವನ್ನು ನಾಶ ಮಾಡಲು ಅಲ್ಲಾವುದ್ದೀನ್ ಖಿಲ್ಜಿಯಂತಹವರು ಅನೇಕರು ಪ್ರಯತ್ನಿಸಿದರು. ಆದರೆ ನಮ್ಮ ಪೂರ್ವಜರು ಸಮರ್ಥರಾಗಿದ್ದರು ಮತ್ತು ಧರ್ಮವನ್ನು ರಕ್ಷಿಸಿದರು" ಎಂದಿದ್ದಾರೆ.