ಬೆಂಗಳೂರು ಏರ್‌ಪೋರ್ಟ್‌ನಿಂದ ಕ್ಯಾಬ್ ಬುಕ್, 50 ನಿಮಿಷ ವೇಟಿಂಗ್ ಟೈಮ್ ಕಂಡು ಕಂಗಾಲಾದ ಪ್ರಯಾಣಿಕ!
ಬೆಂಗಳೂರು ಏರ್‌ಪೋರ್ಟ್‌ನಿಂದ ಪ್ರಯಾಣ ಅಂದರೆ ಅದು ಸುಲಭದ ಮಾತಲ್ಲ. ಇಂಥದ್ದೇ ಒಂದು ಪ್ರಯಾಸದ ಅನುಭವವನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ.
ಬೆಂಗಳೂರು (ಮಾ.16): ಭಾರತದಲ್ಲಿ ಕ್ಯಾಬ್‌ಗಳ ಪ್ರಯಾಣ ಬಹಳ ಕಾಮನ್ ಆಗಿದೆ. ಪ್ರಯಾಣದ ಬುಕ್ಕಿಂಗ್‌ಗಾಗಿ ತಾವು ಬಳಸುವ ಆಪ್‌ನಿಂದ ಚಾಲಕರು ಹಾಗೂ ಪ್ರಯಾಣಿಕರು ಸಾಕಷ್ಟು ಬಾರಿ ಬಹಳ ವಿಚಿತ್ರ ಅನುಭವವನ್ನು ಪಡೆದುಕೊಂಡಿದ್ದಾರೆ. ಇಂಥದ್ದೇ ಒಂದು ಪ್ರಕರಣದಲ್ಲಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಉಬರ್ ಆಪ್‌ನಿಂದ ಕ್ಯಾಬ್ ಬುಕ್ ಮಾಡಿದ್ದ. ಈ ವೇಳೆ ಅಲ್ಲಿದ್ದ ವೇಟಿಂಗ್ ಟೈಮ್ ಕಂಡು ಹೌಹಾರಿದ್ದಾರೆ. ರಾಜೇಶ್ ಸ್ವಾಹ್ನಿ ಎನ್ನುವ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಇದರ ಸ್ಕ್ರೀನ್‌ಶಾಟ್‌ಅನ್ನು ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಬೆಂಗಳೂರು ಭಾರತದ ಅತ್ಯಂತ ಭ್ರಷ್ಟ ನಗರ ಎಂದೂ ಅವರು ತಮ್ಮ ಎಕ್ಸ್‌ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ಗೆ ಬಂದ ಅವರಿಗೆ ಕ್ಯಾಬ್ ಅಗ್ರಿಗೇಟರ್ ಕಂಪನಿಯಾಗಿರುವ ಉಬರ್, ಕ್ಯಾಬ್‌ಗಾಗಿ 50 ನಿಮಿಷ ಕಾಯುವಂತೆ ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಷ್ಟು ಕೆಟ್ಟು ಹಾಳಾಗಿರುವ ಇನ್ನೊಂದು ನಗರ ಭಾರತದಲ್ಲಿ ಇರಲಿಕ್ಕಿಲ್ಲ. ಬಹುಶಃ ಭಾರತದ ಅತ್ಯಂತ ಭ್ರಷ್ಟ ನಗರವೂ ಬೆಂಗಳೂರು ಆಗಿರಬಹುದು. ಆಟೋ ಡ್ರೈವರ್‌ಗಳಿಂದ ಉಬರ್ ಟ್ರೈವರ್‌ವರೆಗೂ, ರಾಜಕಾರಣಿಗಳಿಂದ ಅಧಿಕಾರಿಗಳವರೆಗೂ... ಎಲ್ಲದರಲ್ಲೂ ಇದ್ದಾರೆ. ಇಲ್ಲಿ ಬದಲಾವಣೆ ಆಗೋದು ಯಾವಾಗ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ರಾಜೇಶ್ ಈ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಬಂದಿವೆ. ಸೋಶಿಯಲ್ ಮೀಡಿಯಾ ಯೂಸರ್‌ಗಳು ಈ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕ್ಯಾಬ್ ಅಗ್ರಿಗೇಟರ್ ಶಾಫ್ರ್ ಸಂಸ್ಥಾಪಕ ವಿಕಾಸ್ ಬರ್ದಿಯಾ ಕೂಡ ಇದಕ್ಕೆ ಕಾಮೆಂಟ್ ಮಾಡಿದ್ದು, ಬದಲಾವಣೆ ನಮ್ಮಿಂದಲೇ ಆಗಬೇಕು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೇಶ್ ನೀಡಿ, ಇದನ್ನು ನಾನು ಒಪ್ಪುತ್ತೇನೆ. ಏರ್‌ಪೋರ್ಟ್‌ನಿಂದ ನನ್ನ ಹೋಟೆಲ್‌ವರೆಗಿನ ಶಾಫ್ರ್ ರೈಡ್ ಅತ್ಯುತ್ತಮವಾಗಿತ್ತು. ಯಾವುದೇ ಸಮಸ್ಯೆ ಎದುರಾಗಲಿಲ್ಲ. ಉತ್ತಮ ಕೆಲಸ ಮುಂದುವರಿಸಿ ಎಂದು ಬರೆದಿದ್ದಾರೆ.
ನೋಯ್ಡಾ ಅಪಾರ್ಟ್‌ಮೆಂಟ್ ನೋಟಿಸ್: 'ಅವಿವಾಹಿತ ಅತಿಥಿಗಳ ಜೊತೆ ಮಲಗುವ ಮುನ್ನ ಪರ್ಮಿಷನ್ ತೆಗೆದುಕೊಳ್ಳಿ..'
ಇದಕ್ಕೆ ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಕಾಮೆಂಟ್ ಮಾಡಿದ್ದು, ಹಾಗೇನಾದರೂ ಡ್ರೈವರ್ 20 ಕಿಲೋಮೀಟರ್ ದೂರದಲ್ಲಿದ್ದರೆ, ಟ್ರಾಫಿಕ್‌ನ ಪೀಕ್ ಸಮಯದಲ್ಲಿ 50 ನಿಮಿಷ ಟೈರ್ 1 ಸಿಟಿಯಲ್ಲಿ ಸಾಮಾನ್ಯವಾಗಿರುತ್ತದೆ. ಇಷ್ಟು ದೂರದ ಡ್ರೈವರ್‌ಅನ್ನು ನಿಮಗೆ ನೀಡಿದ್ದೇ ಉಬರ್ ಮಾಡಿದ್ದು ತಪ್ಪು ಎಂದು ಬರೆದಿದ್ದಾರೆ. ಇನ್ನೂ ಕೆಲವರು ಇದು ಹೇಗೆ ಸಾಧ್ಯ? ಓಲಾ ಹಾಗೂ ಉಬರ್ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪಿಕ್‌ಅಪ್ ಪಾಯಿಂಟ್‌ಅನ್ನು ಹೊಂದಿದೆ. ಪ್ರಯಾಣಿಕರು ಅಪ್ಲಿಕೇಶನ್‌ನಲ್ಲಿ ಕ್ಯಾಬ್ ಬುಕ್ ಮಾಡಿದರೆ ನಿಮಷದಲ್ಲಿ ಇಲ್ಲಿಂದ ಕ್ಯಾಬ್ ಪಡೆಡುಕೊಳ್ಳುತ್ತಾರೆ ಎಂದು ಬರೆದಿದ್ದಾರೆ.
Humble Politician Nograj ಪ್ಲ್ಯಾನ್ ನಿಜ ಮಾಡಿದ ಸರ್ಕಾರ, ಕಬ್ಬನ್ ಪಾರ್ಕ್‌ನಲ್ಲಿ ಏಳುತ್ತೆ ಅಪಾರ್ಟ್‌ಮೆಂಟ್!