ಓಲಾ, ಊಬರ್ ಸೇರಿ ಎಲ್ಲ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಗೊಳಿಸಿದ ಸರ್ಕಾರ; 4 ಕಿ.ಮೀ.ಗೆ 100 ರೂ. ಚಾರ್ಜ್
ರಾಜ್ಯಾದ್ಯಂತ ಓಲಾ, ಊಬರ್ ಸೇರಿದಂತೆ ಎಲ್ಲ ಮಾದರಿಯ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರದಿಂದ ಏಕ ರೂಪದ ಪ್ರಯಾಣ ದರವನ್ನು ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಫೆ.04): ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಟ್ಯಾಕ್ಸಿ ಬಾಡಿಗೆ ದರ ನಿಗದಿ ಪಡಿಸಿ ಆದೇಶ ಹೊರಡಿಸಲಾಗಿದೆ. ವಾಹನದ ಮೌಲ್ಯಕ್ಕನುಗುಣವಾಗಿ ಪ್ರತಿ 1 ಕಿ.ಮೀ.ಗೆ ತಲಾ 24 ರೂ. ದರವನ್ನು ನಿಗದಿ ಮಾಡಲಾಗಿದೆ. ಈ ಏಕರೂದ ದರ ನಿಗದಿ ಮಾಡಿರುವ ನಡೆಯನ್ನು ಓಲಾ ಊಬರ್ ಅಸೋಸಿಯೇಷನ್‌ನಿಂದ ಸ್ವಾಗತಿಸಲಾಗಿದೆ.
ರಾಜ್ಯಾದ್ಯಂತ ವಿವಿಧ ಆಟೋ ಟ್ಯಾಕ್ಸಿ ಚಾಲಕರು ಬೇಕಾಬಿಟ್ಟು ದರವನ್ನು ನಿಗದಿ ಮಾಡುತ್ತಿದ್ದರು. ಜೊತೆಗೆ, ಓಲಾ, ಊಬರ್ ಹಾಗೂ ಇನ್ನಿತರೆ ಅಗ್ರಿಗೇಟರ್ಸ್ ಕಂಪನಿಗಳು ವಿವಿಧ ದರವನ್ನು ನಿಗದಿ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ರಾಜ್ಯಾದ್ಯಂತ ಒಂದೇ ಮಾದರಿಯ ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಟ್ಯಾಕ್ಸಿಗಳ ಬೇಕಾಬಿಟ್ಟು ದರ ನಿಗದಿಯ ಆಟಾಟೋಪಕ್ಕೆ ಬ್ರೇಕ್ ಹಾಕಿದೆ.
ಏಷ್ಯಾ ಖಂಡದಲ್ಲಿ ಬೆಂಗಳೂರೇ ನಂಬರ್ ಒನ್; ಚೀನಾ, ಜಪಾನ್ ಸಿಟಿಗಳನ್ನು ಹಿಂದಿಕ್ಕಿದ ಸಿಲಿಕಾನ್ ಸಿಟಿ
ರಾಜ್ಯದ ಎಲ್ಲ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ, ಇನ್ನಿತರೆ ಟ್ಯಾಕ್ಸಿ ದರ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಹೊಸ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಟ್ಯಾಕ್ಸಿಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ವಾಹನಗಳ ಮೌಲ್ಯ ಆಧಾರಿತವಾಗಿ ಹೊಸ ದರವನ್ನು ನಿಗದಿ ಮಾಡಿ ಜಾರಿಗೆ ತರಲಾಗುತ್ತಿದೆ. ವಾಹನಗಳ ಮೌಲ್ಯದ ಆಧಾರದಲ್ಲಿ ಎ, ಬಿ, ಸಿ ಮತ್ತು ಡಿ ವರ್ಗಗಳನ್ನಾಗಿ ವಾಹನಗಳನ್ನು ವಿಂಗಡಿಸಿ ದರ ನಿಗದಿ ಮಾಡಲಾಗಿದೆ. ಎಲ್ಲ ಟ್ಯಾಕ್ಸಿಗಳಿಗೆ ಫೆ.3ರಿಂದಲೇ ಈ ಹೊಸ ದರವನ್ನು ನಿಗದಿಗೊಳಿಸಿ ಅನ್ವಯಿಸಲಾಗಿದೆ.
ವಾಹನಗಳ ಮಾದರಿ ಅನುಗುಣವಾಗಿ ದರ ನಿಗದಿ:
- 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವಾಹನ: ಆರಂಭಿಕ 4 ಕಿ.ಮೀ.ವರೆಗೆ 100 ರೂ.: ನಂತರದ ಪ್ರತಿ ಕಿ.ಮೀಗೆ 24 ರೂ.
- 10-15 ಲಕ್ಷ ರೂ. ಮೌಲ್ಯದ ವಾಹನ: ಆರಂಭಿಕ 4 ಕಿ.ಮೀ.ವರೆಗೆ 115 ರೂ. : ನಂತರದ ಪ್ರತಿ ಕಿ.ಮೀ.ಗೆ 28 ರೂ.
- 15 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ವಾಹನ: ಆರಂಭಿಕ 4 ಕಿ.ಮೀ.ವರೆಗೆ 130 ರೂ. : ನಂತರದ ಪ್ರತಿ ಕಿ.ಮೀ.ಗೆ 32 ರೂ.
ಬಾಬರಿ ಮಸೀದಿಯನ್ನ ಮರೆಯೊಲ್ಲ, ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ತೇವೆಂದ ಸೈಯದ್
ಟ್ಯಾಕ್ಸಿ ದರದ ಜೊತೆಗೆ ಹೊಸ ನಿಯಮಗಳು ಅನ್ವಯ
- ವೈಯಕ್ತಿಕ ಲಗೇಜ್‌ಗಳಿಗೆ 120 ಕೆಜಿ ವರೆಗೆ ವಿನಾಯಿತಿ ನೀಡಲಾಗಿದೆ.
- ಮೊದಲ 5 ನಿಮಿಷಗಳವರೆಗೆ ಕಾಯುವಿಕೆಗೆ ಯಾವುದೇ ಶುಲ್ಕವಿಲ್ಲ. ನಂತರ ಪ್ರತಿ ನಿಮಿಷಕ್ಕೆ ತಲಾ 1 ರೂ. ದರ ವಿಧಿಸಬಹುದು.
- ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ಮಾಡುವ ಟ್ಯಾಕ್ಸಿಗಳಿಗೆ ಪ್ರಯಾಣಿಕರಿಂದ ಶೇ.10 ಹೆಚ್ಚುವರಿ ದರ ಪಡೆಯಲು ಅನುಮತಿ ನೀಡಲಾಗಿದೆ.
- ಸಿಟಿ ಟ್ಯಾಕ್ಸಿ, ಅಗ್ರಿಗೇಟರ್ಸ್‌ಗಳು ಅನ್ವಯಿಸುವಂತಹ ಜಿಎಸ್‌ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ಪಡೆಯಲು ಅನುಮತಿಸಲಾಗಿದೆ.
- ಸರ್ಕಾರದಿಂದ ನಿಗದಿ ಮಾಡಿದ ದರಗಳನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು.
- ಇನ್ನು ಸರ್ಕಾರ ನಿಗದಿಪಡಿಸಿದ ದರವನ್ನು ಹೊರತುಪಡಿಸಿ ಮತ್ಯಾವುದೇ ಹಣ ವಸೂಲಿ ಮಾಡುವಂತಿಲ್ಲ.